Sunday, June 13, 2021
Homeಅಂತರ್ ರಾಜ್ಯಮೊಬೈಲ್‌ ಡೇಟಾ ಖಾಲಿ ಮಾಡಿದನೆಂಬ ಕಾರಣಕ್ಕೆ ಅಣ್ಣನಿಂದಲೇ ಸಹೋದರನ ಹತ್ಯೆ

ಇದೀಗ ಬಂದ ಸುದ್ದಿ

ಮೊಬೈಲ್‌ ಡೇಟಾ ಖಾಲಿ ಮಾಡಿದನೆಂಬ ಕಾರಣಕ್ಕೆ ಅಣ್ಣನಿಂದಲೇ ಸಹೋದರನ ಹತ್ಯೆ

ಮೊಬೈಲ್​ ಡೇಟಾ ಖಾಲಿ ಮಾಡಿದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಕಿರಿಯ ಸಹೋದರನನ್ನ ಇರಿದು ಕೊಲೆ ಮಾಡಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ನವೆಂಬರ್​ 18ರಂದು ಮನೆಯ ಛಾವಣಿ ಮೇಲೆ ರಕ್ತಸ್ರಾವ ನೋಡಿದ ಕುಟುಂಬಸ್ಥರು ಕೂಡಲೇ ಸಹೋದರನನ್ನ ಆಸ್ಪತ್ರೆಗೆ ದಾಖಲಿಸಿದರಾದರೂ ಆತ ಬದುಕುಳಿಯಲಿಲ್ಲ.

ಮೊಬೈಲ್​ ಡೇಟಾ ಖಾಲಿ ಮಾಡಿದ ಕಾರಣಕ್ಕೆ ತಮ್ಮ ರಾಯ್​ನನ್ನ ಮನೆಯ ಛಾವಣಿಗೆ ಕರೆದೊಯ್ದ ರಾಮನ್​ ಆತನ ಮೇಲೆ ಹರಿಹಾಯ್ದಿದ್ದಾನೆ. ಅಲ್ಲದೇ ಆತನ ಎದೆಗೆ ನಾಲ್ಕೈದು ಬಾರಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ. ಆರೋಪಿ ರಾಮನ್​ ಮಾನಸಿಕ ಅಸ್ವಸ್ಥನಾಗಿದ್ದ ಅಂತಾ ಪೊಲೀಸರು ತಿಳಿಸಿದ್ದಾರೆ,

ಆರೋಪಿ ರಾಮ್​ನನ್ನ ಪೊಲೀಸರು ಬಂಧಿಸಿದ್ದಾರೆ. ಆದರೆ ಅಣ್ಣ ಮಾಡಿದ ತಪ್ಪಿಗೆ ಪೋಷಕರು ಜೀವಮಾನ ಪೂರ್ತಿ ಕಣ್ಣೀರಲ್ಲೇ ಕೈ ತೊಳೆಯುವಂತಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img