Sunday, November 29, 2020
Home ಬೆಂಗಳೂರು ಎರಡು ದಿನದ ಮಗುವನ್ನು ಅಪಹರಿಸಿ ₹80 ಸಾವಿರಕ್ಕೆ ಮಾರಾಟ : ನಾಲ್ವರ ಬಂಧನ

ಇದೀಗ ಬಂದ ಸುದ್ದಿ

ಮದುವೆ ಆಗಲು ವಧು-ವರ ಹುಡುಕಾಟಕ್ಕೆ ಮುಂದಾಗುವ ಮುನ್ನ...

ಬೆಂಗಳೂರು: ಮದುವೆ ಆಗಲು ವಧು-ವರ ಹುಡುಕಾಟಕ್ಕೆ ಮುಂದಾಗುವ ಮುನ್ನ ಜೋಕೆ! ಮದುವೆ ಹೆಸರಲ್ಲಿ ವಂಚಿಸುವ ಗ್ಯಾಂಗ್​ ನಗರದಲ್ಲಿ ಅಡಗಿದೆ. ಶಾದಿ ಕಾಟ್ ಕಾಮ್, ಮ್ಯಾಟ್ರಿಮೋನಿಯಲ್ ಜಾಲತಾಣದಲ್ಲಿ ಪ್ರೊಫೈಲ್​ ಅಪ್​ಲೋಡ್​ ಮಾಡಿ ಅಮಾಯಕರ...

ಎಂಟು ತಿಂಗಳ ಹಸುಗೂಸು ಸೇರಿ 4 ಮಕ್ಕಳ...

ಲಕ್ನೋ,ನ.28-ಹೆತ್ತ ತಾಯಿಯೇ ತಮ್ಮ ನಾಲ್ಕು ಹೆಣ್ಣು ಮಕ್ಕಳ ಕುತ್ತಿಗೆ ಸೀಳಿ ಕೊಲೆ ಮಾಡಿರುವ ಧಾರುಣ ಘಟನೆ ಹರಿಯಾಣದ ಗುರುಗ್ರಾಮ್‍ನಲ್ಲಿ ನಡೆದಿದೆ. ಎಂಟು ತಿಂಗಳ ಹಸುಗೂಸು ಸೇರಿದಂತೆ 7 ವರ್ಷದೊಳಗಿನ ನಾಲ್ಕು...

ಮಾಜಿ ಸಚಿವೆ ಉಮಾಶ್ರೀ ಕಾರು ಅಪಘಾತ ಪ್ರಕರಣ:...

ಹುಬ್ಬಳ್ಳಿ: ನವೆಂಬರ್ 21ರಂದು ತಾಲೂಕಿನ ಬಂಡಿವಾಡ ಗ್ರಾಮದ ಬಳಿ ಮಾಜಿ ಸಚಿವ ಉಮಾಶ್ರೀ ಅವರಿಗೆ ಸೇರಿದ ಇನ್ನೋವಾ ಮತ್ತು ಬೊಲೆನೋ ಕಾರುಗಳ ನಡುವಿನ ಮುಖಾಮುಖಿ ಅಪಘಾತ‌ ಉಂಟಾಗಿತ್ತು. ಈ ಅಪಘಾತದಲ್ಲಿ...

ಡಿಸೆಂಬರ್‌ 2ರಿಂದ ಪ್ರಯಾಣಿಕರ ರೈಲ್ವೆ ಸೇವೆ ಆರಂಭ

ಕೋಲ್ಕತ್ತ: ಡಿಸೆಂಬರ್‌ 2ರಿಂದ 54 ರೈಲುಗಳೊಂದಿಗೆ ಪ್ರಯಾಣಿಕರ ರೈಲ್ವೆ ಸೇವೆಯನ್ನು ಪುನರಾರಂಭಿಸಲು ಪೂರ್ವ ರೈಲ್ವೆ ವಿಭಾಗ ನಿರ್ಧರಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು. ಕೋವಿಡ್‌ನಿಂದಾಗಿ ಈ ವರ್ಷದ...

ವಾಹನ ಸವಾರರಿಗೆ ಗುಡ್ ನ್ಯೂಸ್: ವಾಯುಮಾಲಿನ್ಯ ಪರೀಕ್ಷೆ...

ಹುಬ್ಬಳ್ಳಿ: ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಪ್ರಯುಕ್ತ ನವೆಂಬರ್ 30 ರಂದು ತಪಾಸಣೆ ಕೇಂದ್ರಗಳಲ್ಲಿ ಉಚಿತ ವಾಯುಮಾಲಿನ್ಯ ಪರೀಕ್ಷೆ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಧಾರವಾಡ...

ಎರಡು ದಿನದ ಮಗುವನ್ನು ಅಪಹರಿಸಿ ₹80 ಸಾವಿರಕ್ಕೆ ಮಾರಾಟ : ನಾಲ್ವರ ಬಂಧನ

 ಬೆಂಗಳೂರುವಾಣಿ ವಿಲಾಸ್ ಆಸ್ಪತ್ರೆಯಲ್ಲಿದ್ದ ಎರಡು ದಿನದ ಮಗುವನ್ನು ಅಪಹರಿಸಿ ₹ 80 ಸಾವಿರಕ್ಕೆ ಮಾರಾಟ ಮಾಡಿದ್ದ ಆರೋಪದಡಿ ಮಹಿಳೆ ಸೇರಿ ನಾಲ್ವರನ್ನು ವಿ.ವಿ.ಪುರ ಪೊಲೀಸರು ಬಂಧಿಸಿದ್ದಾರೆ.

‘ಮಗು ಮಾರಿದ್ದ ಯಲಚೇನಹಳ್ಳಿ ನಿವಾಸಿ ಆಯೆಷಾ (23), ಕನಕನಗರದ ಮಂಜು ಲೇಔಟ್‌ನ ವಸೀಂಪಾಷಾ (30) ಹಾಗೂ ಮಗು ಖರೀದಿಸಿದ್ದ ಅಬ್ದುಲ್ ರೆಹಮಾನ್ (32), ಅವರ ಪತ್ನಿ ಸಾನಿಯಾ (22) ಬಂಧಿತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರಲಾಗುವುದು’ ಎಂದು ಪೊಲೀಸರು ಹೇಳಿದರು.

‘ವಿಜಿನಾಪುರದ ನಿವಾಸಿ ಆರ್ಷಿಯಾ (27) ಎಂಬುವರು ನವೆಂಬರ್ 9ರಂದು ಹೆರಿಗೆಗೆಂದು ವಾಣಿ ವಿಲಾಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಹೆಣ್ಣು ಮಗು ಜನಿಸಿತ್ತು. ಮಗುವಿಗೆ ಆರೋಗ್ಯ ಸಮಸ್ಯೆ ಇದ್ದಿದ್ದರಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಲಾಗಿತ್ತು. ಆ ಮಗುವನ್ನು ಅಪಹರಣ ಮಾಡಲಾಗಿತ್ತು. ಆ ಬಗ್ಗೆ ಮಗುವಿನ ತಂದೆ ದೂರು ನೀಡಿದ್ದರು’ ಎಂದೂ ಅವರು ತಿಳಿಸಿದರು.

ತಂಗಿ ನೋಡಲು ಬಂದು ಅಪಹರಣ: ‘ಆರೋಪಿ ಆಯೆಷಾ ತಂಗಿಯೂ ಹೆರಿಗೆಗೆಂದು ವಾಣಿ ವಿಲಾಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ನೋಡಲು ಆಯೆಷಾ ಆಸ್ಪತ್ರೆಗೆ ಬಂದಿದ್ದರು’ ಎಂದು ಪೊಲೀಸರು ಹೇಳಿದರು.

‘ಆಸ್ಪತ್ರೆಯಿಂದ ವಾಪಸು ತೆರಳುವಾಗ ತೀವ್ರ ನಿಗಾ ಘಟಕದೊಳಗೆ ಆಯೆಷಾ ಹೋಗಿದ್ದರು. ಅದೇ ವೇಳೆ ಆರ್ಷಿಯಾ ಅವರ ಮಗು ಬಳಿ ಹೋಗಿದ್ದ ಆರೋಪಿ, ‘ನಾನು ಈ ಮಗುವಿನ ಚಿಕ್ಕಮ್ಮ. ಮಗುವನ್ನು ತೆಗೆದುಕೊಂಡು ಹೋಗುತ್ತೇನೆ’ ಎಂದು ಹೇಳಿದ್ದರು. ಅದು ನಿಜವೆಂದು ತಿಳಿದ ಆಸ್ಪತ್ರೆ ಸಿಬ್ಬಂದಿ ಮಗುವನ್ನು ಕೊಟ್ಟು ಕಳುಹಿಸಿದ್ದರು. ಕೆಲ ಸಮಯದ ನಂತರವೇ ಮಗು ಅಪಹರಣವಾದ ಸಂಗತಿ ಪೋಷಕರಿಗೆ ಗೊತ್ತಾಗಿತ್ತು’ ಎಂದೂ ತಿಳಿಸಿದರು.

‘ಮಗುವನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಿದ್ದ ಆರೋಪಿ, ಅಬ್ದುಲ್ ರೆಹಮಾನ್ ಹಾಗೂ ಸಾನಿಯಾ ಫಾತಿಮಾ ದಂಪತಿಗೆ ಮಾರಾಟ ಮಾಡಿ ₹ 80 ಸಾವಿರ ಪಡೆದಿದ್ದರು. ಕೃತ್ಯಕ್ಕೆ ವಸೀಂಪಾಷಾ ಸಹಕಾರ ನೀಡಿದ್ದರು. ಇತ್ತ ಮಗುವಿಗಾಗಿ ಹುಡುಕಾಟ ನಡೆಸುತ್ತಿದ್ದ ವಿಶೇಷ ತಂಡಕ್ಕೆ ಆರೋಪಿ ಸುಳಿವು ಸಿಕ್ಕಿತ್ತು. ಆಯೆಷಾ ಅವರನ್ನು ಬಂಧಿಸಿ, ನಂತರ ದಂಪತಿಯನ್ನೂ ಸೆರೆ ಹಿಡಿಯಲಾಯಿತು. ಮಗುವನ್ನು ರಕ್ಷಿಸಿ ಸುರಕ್ಷಿತವಾಗಿ ಪೋಷಕರ ಸುಪರ್ದಿಗೆ ವಹಿಸಲಾಗಿದೆ’ ಎಂದೂ ಹೇಳಿದರು.

‘ಪತಿ ಜೊತೆ ಆಯೆಷಾ ವಾಸವಿದ್ದರು. ಲಾಕ್‌ಡೌನ್‌ನಿಂದಾಗಿ ಆರ್ಥಿಕ ತೊಂದರೆ ಆಗಿತ್ತು. ಜೀವನ ನಡೆಸುವುದು ಕಷ್ಟವಾಗಿತ್ತು. ಅದೇ ಕಾರಣಕ್ಕೆ ಮಗುವನ್ನು ಮಾರಾಟ ಮಾಡಿ ಹಣ ಗಳಿಸಲು ಮುಂದಾಗಿದ್ದರು’ ಎಂದೂ ಪೊಲೀಸರು ವಿವರಿಸಿದರು.

TRENDING