Sunday, May 16, 2021
Homeರಾಜ್ಯಕರ್ನಾಟಕ ಬಂದ್ ಕೈಬಿಟ್ಟು ಚರ್ಚೆಗೆ ಬನ್ನಿ: ಸಿಎಂ ಬಿ.ಎಸ್. ಯಡಿಯೂರಪ್ಪ ವಿನಂತಿ

ಇದೀಗ ಬಂದ ಸುದ್ದಿ

ಕರ್ನಾಟಕ ಬಂದ್ ಕೈಬಿಟ್ಟು ಚರ್ಚೆಗೆ ಬನ್ನಿ: ಸಿಎಂ ಬಿ.ಎಸ್. ಯಡಿಯೂರಪ್ಪ ವಿನಂತಿ

ಬೆಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಬಲವಂತದ ಬಂದ್ ಸರಿಯಲ್ಲ. ಬಲವಂತವಾಗಿ ಬಂದ್ ಗೆ ಮುಂದಾದರೆ ಅಂತವರ ವಿರುದ್ಧ ಕಾನೂನು ಕ್ರಮ ಅನಿವಾರ್ಯ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಯಾರೂ ಕೂಡ ಬಲವಂತದ ಬಂದ್ ಗೆ ಕರೆ ನೀಡುವಂತಿಲ್ಲ. ಈಗಾಗಲೇ ಕೆಲವರು ಪ್ರತಿಭಟನೆ ನಡೆಸಿ ಪ್ರತಿಕೃತಿ ದಹಿಸುತ್ತಿದ್ದಾರೆ. ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರೆ ಅಭ್ಯಂತರವಿಲ್ಲ. ಆದರೆ ಅನಗತ್ಯ ಹೋರಾಟ ಸರಿಯಲ್ಲ ಎಂದರು.

ರಾಜ್ಯ ಸರ್ಕಾರ ಯಾವುದೇ ಜಾತಿ, ಭಾಷೇ ಕುರಿತು ತಾರತಮ್ಯ ಮಾಡಿಲ್ಲ. ಕನ್ನಡದ ಅಭಿವೃದ್ಧಿಗೆ, ಕನ್ನಡಿಗರ ಅಭಿವೃದ್ಧಿಗೂ ಸಾಕಷ್ಟು ಯೋಜನೆ ರೂಪಿಸಲಾಗಿದೆ. ಕನ್ನಡಪರ ಸಂಘಟನೆಗಳಿಗೆ ಈಗಲೂ ಮನವಿ ಮಾಡುತ್ತಿದ್ದೇನೆ ಕರ್ನಾಟಕ ಬಂದ್ ಕೈಬಿಟ್ಟು ಚರ್ಚೆಗೆ ಬನ್ನಿ ಎಂದು ವಿನಂತಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img