Sunday, June 13, 2021
Homeಜಿಲ್ಲೆಮೈಸೂರುಹನಿಟ್ರ್ಯಾಪ್ ಸಂತ್ರಸ್ಥರು ಭಯಪಡದೇ ಪೊಲೀಸರಿಗೆ ದೂರು ನೀಡಿ: ಡಿಸಿಪಿ ಪ್ರಕಾಶ್ ಗೌಡ

ಇದೀಗ ಬಂದ ಸುದ್ದಿ

ಹನಿಟ್ರ್ಯಾಪ್ ಸಂತ್ರಸ್ಥರು ಭಯಪಡದೇ ಪೊಲೀಸರಿಗೆ ದೂರು ನೀಡಿ: ಡಿಸಿಪಿ ಪ್ರಕಾಶ್ ಗೌಡ

 ಮೈಸೂರು: ಹನಿಟ್ರ್ಯಾಪ್​ಗೆ ಒಳಗಾದವರು ಭಯಪಡದೇ ಪೊಲೀಸರಿಗೆ ಮಾಹಿತಿ ನೀಡಿದರೆ ಮಾತ್ರ ಬ್ಲ್ಯಾಕ್ ಮೇಲ್ ಮಾಡುವವರಿಂದ ರಕ್ಷಣೆ ಪಡೆಯುವುದು ಸಾಧ್ಯವಾಗುತದೆ ಎಂದು ಡಿಸಿಪಿ ಡಾ.ಎ.ಎನ್. ಪ್ರಕಾಶ್ ಗೌಡ ತಿಳಿಸಿದರು.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಬ್ಲಾಕ್‌ ಮೇಲ್‌ ಮಾಡುವವರು ಒಂದು ಬಾರಿ ಹಣ ಪಡೆದರೆ ಪುನಃ ಪುನಃ ಬೆದರಿಸಿ ಹಣ ಪಡೆಯುವುದನ್ನೇ ಕಾಯಕ ಮಾಡಿಕೊಳ್ಳುತ್ತಾರೆ.

ಇದಕ್ಕೆ ಅಂತ್ಯವೇ ಇರುವುದಿಲ್ಲ . ಪಿರಿಯಾಪಟ್ಟಣದ ವೈದ್ಯರೊಬ್ಬರಿಗೆ ಹನಿಟ್ರ್ಯಾಪ್ ಮೂಲಕ ದುಷ್ಕರ್ಮಿಗಳು 31.30 ಲಕ್ಷ ರೂ.ಪಾಯಿ ವಸೂಲಿ ಮಾಡಿದ್ದಾರೆ. ಅವರು ಪೊಲೀಸರಿಗೆ ಮೊದಲೇ ಮಾಹಿತಿ ನೀಡಿದ್ದರೆ, ಹೀಗೆ ಹಣ ಕಳೆದುಕೊಳ್ಳುತ್ತಿರಲಿಲ್ಲ. ಇಂತಹ ಘಟನೆಗಳಿಗೆ ಹೆದರದೆ ಧೈರ್ಯದಿಂದ ಮಾಹಿತಿ ನೀಡಿ ಎಂದು ಹೇಳಿದರು.ಪಿರಿಯಾಪಟ್ಟಣ ವೈದ್ಯರ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ತನಿಖೆ ನಡೆಯುತ್ತಿದೆ. ಈ ಗ್ಯಾಂಗ್​​ನಿಂದ ಬೇರೆ ಇನ್ನಾರಾದರೂ ಬ್ಲ್ಯಾಕ್ ಮೇಲ್ ಗೆ ಓಳಗಾಗಿದ್ದರೆ ದೈರ್ಯದಿಂದ ಪೊಲೀಸರಿಗೆ ಮಾಹಿತಿ ನೀಡಿ ದುಷ್ಕರ್ಮಿಗಳ ಬಂಧನಕ್ಕೆ ನೆರವಾಗಿ ಎಂದು ಹೇಳಿದರು

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img