Sunday, June 13, 2021
Homeಅಂತರ್ ರಾಜ್ಯಹಾಡ ಹಗಲೇ ದಂತ ವೈದ್ಯೆಯ ಬರ್ಬರ ಹತ್ಯೆ

ಇದೀಗ ಬಂದ ಸುದ್ದಿ

ಹಾಡ ಹಗಲೇ ದಂತ ವೈದ್ಯೆಯ ಬರ್ಬರ ಹತ್ಯೆ

 ಆಗ್ರಾ : ಸೆಟ್ ಆಫ್ ಬಾಕ್ಸ್ ರೀಚಾರ್ಜ್ ಮಾಡುವ ನೆಪದಲ್ಲಿ ಬಂದ ವ್ಯಕ್ತಿ ದಂತವೈದ್ಯೆಯನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಡಾ. ನಿಶಾ ಸಿಂಘಾಲ್ ಕೊಲೆಯಾದ ದುರ್ದೈವಿ, ನಿಶಾ ಅವರಿಗೆ 8 ಮತ್ತು 4 ವರ್ಷದ ಇಬ್ಬರು ಮಕ್ಕಳಿದ್ದು, ಇಬ್ಬರು ಪಕ್ಕದ ಕೋಣೆಯಲ್ಲಿದ್ದರು. ಈ ವೇಳೆಯೇ ವೈದ್ಯೆಯ ಹತ್ಯೆಯಾಗಿದೆ.

ನಿಶಾ ಅವರ ಪತಿ ಅಜಯ್ ಕೂಡ ಸರ್ಜನ್ ಆಗಿದ್ದು, ಕೊಲೆ ನಡೆದ ಸಂದರ್ಭದಲ್ಲಿ ಅವರು ಡ್ಯೂಟಿಯಲ್ಲಿದ್ದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಇಂದು ಬೆಳಗ್ಗೆ ಬಂಧಿಸಿದ್ದಾರೆ.

ಹರಿತವಾದ ಚಾಕುವಿನಿಂದ ನಿಶಾ ಅವರ ಕತ್ತು ಸೀಳಲಾಗಿದೆ, ಮಕ್ಕಳ ಮೇಲೂ ಹಲ್ಲೆ ನಡೆದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ ದರೋಡೆಗೆಂದು ಮನೆಗೆ ಬಂದಿದ್ದನೇ ಅಥವಾ ಹತ್ಯೆಯೇ ಮೂಲ ಉದ್ದೇಶವಾಗಿತ್ತೇ ಎಂಬ ವಿಷಯ ಇನ್ನು ಹೊರಬರಬೇಕಿದೆ.

ಸಿಸಿಟಿವಿ ದೃಶ್ಯಾವಳಿ ಆಧರಿಸಿ ಶುಭಂ ಪಾಠಕ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ವೈದ್ಯೆಯನ್ನು ಹತ್ಯೆ ಮಾಡಿದ ಬಳಿಕವೂ ಸುಮಾರು ಒಂದು ಗಂಟೆಗಳ ಕಾಲ ಆತ ಮನೆಯಲ್ಲಿಯೇ ಇದ್ದ ಎಂಬುದು ತಿಳಿದುಬಂದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img