Sunday, May 16, 2021
Homeಅಂತರ್ ರಾಷ್ಟ್ರೀಯಕಾಬೂಲ್ ನಗರದ ಮೇಲೆ ರಾಕೆಟ್‌ ದಾಳಿ : 8 ಜನ ಬಲಿ, 31ಮಂದಿಗೆ ಗಾಯ

ಇದೀಗ ಬಂದ ಸುದ್ದಿ

ಕಾಬೂಲ್ ನಗರದ ಮೇಲೆ ರಾಕೆಟ್‌ ದಾಳಿ : 8 ಜನ ಬಲಿ, 31ಮಂದಿಗೆ ಗಾಯ

 ಕಾಬೂಲ್, ನ.21: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮೇಲೆ ಶನಿವಾರ ಬೆಳಿಗ್ಗೆ ನಡೆದ ರಾಕೆಟ್ ದಾಳಿಯಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ. ನಾಗರಿಕರ ಮೇಲಿನ ಉಗ್ರರ ದಾಳಿ ಮತ್ತಷ್ಟು ಸಂಕಷ್ಟ ಉಂಟುಮಾಡಿದೆ.

‘ಉಗ್ರರು ಕಾಬೂಲ್ ನಗರದ ಮೇಲೆ ಸುಮಾರು 23 ರಾಕೆಟ್‌ಗಳನ್ನು ಉಡಾಯಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಎಂಟು ಮಂದಿ ಜೀವ ಕಳೆದುಕೊಂಡಿದ್ದಾರೆ. 31 ಮಂದಿ ಗಾಯಗೊಂಡಿದ್ದಾರೆ’ ಎಂದು ಆಂತರಿಕ ಸಚಿವಾಲಯದ ವಕ್ತಾರ ತಾರಿಕ್ ಅರಿಯಾನ್ ತಿಳಿಸಿದ್ದಾರೆ. ತಾಲಿಬಾನ್ ಉಗ್ರ ಸಂಘಟನೆಯೇ ಈ ಘಟನೆಗೆ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಕೇಂದ್ರ ಮತ್ತು ಉತ್ತರ ಕಾಬೂಲ್‌ನ ವಿವಿಧ ಭಾಗಗಳಲ್ಲಿ ರಾಕೆಟ್ ದಾಳಿ ನಡೆದಿದೆ. ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ದಾಳಿ ನಡೆದಿದ್ದು, ರಾಯಭಾರಿಗಳ ನಿವಾಸಗಳು ಮತ್ತು ಅಂತಾರಾಷ್ಟ್ರೀಯ ಕಂಪೆನಿಗಳಿರುವ ಗ್ರೀನ್ ಝೋನ್‌ನ ಭಾರಿ ಭದ್ರತೆಯ ಸ್ಥಳಗಳ ಮೇಲೆಯೂ ರಾಕೆಟ್ ಹಾರಿಸಲಾಗಿದೆ.

ದಾಳಿಯಿಂದ ಅನೇಕ ಕಟ್ಟಡಗಳ ಗೋಡೆ ಹಾಗೂ ಕಿಟಕಿಗಳಿಗೆ ಹಾನಿಯಾಗಿರುವ ವಿಡಿಯೋ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದುವರೆಗೂ ಯಾವುದೇ ಉಗ್ರ ಸಂಘಟನೆಗೆ ಹೊಣೆ ಹೊತ್ತುಕೊಂಡಿಲ್ಲ. ತಾಲಿಬಾನ್ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದೆ.

ಕಳೆದ ಕೆಲವು ವಾರಗಳಲ್ಲಿ ಕಾಬೂಲ್‌ನ ಶಿಕ್ಷಣ ಸಂಸ್ಥೆಗಳ ಮೇಲೆ ಎರಡು ನಡೆದ ಭೀಕರ ದಾಳಿಗಳಲ್ಲಿ ಸುಮಾರು 50 ಮಂದಿ ಬಲಿಯಾಗಿದ್ದಾರೆ. ಇವುಗಳಿಗೆ ತಾಲಿಬಾನ್ ಕಾರಣ ಎಂದು ಅಫ್ಘಾನಿಸ್ತಾನ ಸರ್ಕಾರ ಆರೋಪಿಸಿದ್ದರೂ ತಾಲಿಬಾನ್ ನಿರಾಕರಿಸಿದೆ.

ತಾಲಿಬಾನ್ ಮತ್ತು ಅಫ್ಘಾನಿಸ್ತಾನ ಸರ್ಕಾರಗಳ ನಡುವೆ ದೋಹಾದಲ್ಲಿ ಸೆಪ್ಟೆಂಬರ್‌ನಲ್ಲಿ ಶಾಂತಿ ಮಾತುಕತೆ ಆರಂಭವಾಗಿತ್ತು. ಆದರೆ ಅಫ್ಘಾನಿಸ್ತಾನದಲ್ಲಿ ಹಿಂಸಾಚಾರ ಮುಂದುವರಿಯುತ್ತಿರುವುದರಿಂದ ಮಾತುಕತೆ ನಿಧಾನವಾಗುತ್ತಿದೆ. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪೆಯೊ ದೋಹಾದಲ್ಲಿ ತಾಲಿಬಾನ್ ಮತ್ತು ಅಫ್ಘನ್ ಸರ್ಕಾರದ ನಡುವೆ ಮಧ್ಯಸ್ಥಿಕೆ ವಹಿಸಲು ತೆರಳುತ್ತಿದ್ದಾರೆ ಎಂದು ಅಮೆರಿಕ ವಿದೇಶಾಂಗ ಸಚಿವಾಲಯ ಘೋಷಿಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img