Sunday, January 17, 2021
Home ಜಿಲ್ಲೆ ಇಂದಿನಿಂದ ತುಂಗಭದ್ರಾ ಪುಷ್ಕರ‌ ಆರಂಭ

ಇದೀಗ ಬಂದ ಸುದ್ದಿ

ಇಂದಿನಿಂದ ತುಂಗಭದ್ರಾ ಪುಷ್ಕರ‌ ಆರಂಭ

ರಾಯಚೂರು: ತುಂಗಭದ್ರಾ ನದಿಯಲ್ಲಿ ಇಂದಿನಿಂದ ಪುಷ್ಕರ‌ ಆರಂಭವಾಗಿದ್ದು, ಶ್ರೀ ರಾಘವೇಂದ್ರ ಮಠದಿಂದ ನದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಬೆಳಗ್ಗೆ ಶ್ರೀ ಮಠದಿಂದ ರಾಯರ ಮೂರ್ತಿ, ಪ್ರಹ್ಲಾದ್ ರಾಜರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ನದಿಯವರೆಗೆ ಕೊಡೊಯ್ಯಲಾಯಿತು. ಬಳಿಕ ನದಿಯಲ್ಲಿ ಪುಣ್ಯ ಸ್ನಾನ ಮಾಡಿಸಿ, ಗಂಗಾ ಮಾತೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಪುಷ್ಕರಕ್ಕೆ ಬಂದ ಭಕ್ತರಿಗೆ ಶ್ರೀಗಳು ಅನುಗ್ರಹ ನೀಡಿದರು.

12ವರ್ಷಕ್ಕೊಮ್ಮೆ ಒಂದು ನದಿಯಲ್ಲಿ ಪುಷ್ಕರ ಬರಲಿದೆ. ಈ ಬಾರಿ ತುಂಗಭದ್ರಾ ನದಿಗೆ ಬಂದಿದ್ದು, ಇಂದಿನಿಂದ ಡಿ.1ರವರೆಗೆ ನದಿಯಲ್ಲಿ ಪುಷ್ಕರ ಇರಲಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

ದಿ ನ್ಯೂಸ್ 24 ಕನ್ನಡ

TRENDING