Sunday, January 17, 2021
Home ಜಿಲ್ಲೆ ಕಾಲೇಜಿಗೆ ಬಾರದ ವಿದ್ಯಾರ್ಥಿಗಳು, ಮುಂದುವರಿದ ಆನ್‌ಲೈನ್ ಕ್ಲಾಸ್

ಇದೀಗ ಬಂದ ಸುದ್ದಿ

ಕಾಲೇಜಿಗೆ ಬಾರದ ವಿದ್ಯಾರ್ಥಿಗಳು, ಮುಂದುವರಿದ ಆನ್‌ಲೈನ್ ಕ್ಲಾಸ್

ಚಿಕ್ಕೋಡಿ: ಕೊರೊನಾ ಮಹಾಮಾರಿಯಿಂದ ಕಾಲೇಜುಗಳು ಬಂದ್​ ಆಗಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಕಾಲೇಜುಗಳನ್ನು ಕಳೆದ ಎರಡು ದಿನಗಳ ಹಿಂದೆ ಮತ್ತೆ ಪ್ರಾರಂಭಿಸಲಾಗಿತ್ತು. ಆದರೆ, ಚಿಕ್ಕೋಡಿ ಇಂಜಿನಿಯರಿಂಗ್​ ಕಾಲೇಜಿಗೆ ವಿದ್ಯಾರ್ಥಿಗಳು ಆಗಮಿಸದ ಹಿನ್ನೆಲೆಯಲ್ಲಿ ಶಿಕ್ಷಕರು ಆನ್‌ಲೈನ್ ಕ್ಲಾಸ್ ಮುಂದುವರೆಸಿದ್ದಾರೆ.

ಕಳೆದೆರಡು ದಿನಗಳಿಂದ ಕಾಲೇಜಿಗೆ ಬರಲು ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಿಲ್ಲ. ಚಿಕ್ಕೋಡಿಯ ಬಿ‌‌ಕೆ ಕಾಲೇಜು, ಕೆಎಲ್ಇ ಕಾಲೇಜು, ಎಎ ಪಾಟೀಲ್ ಮಹಿಳಾ ಕಾಲೇಜು ಸೇರಿದಂತೆ ಬಹುತೇಕ ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರದೆ ಖಾಲಿ‌ ಖಾಲಿಯಾಗಿದೆ. ಅಂತಿಮವಾಗಿ, ಶಿಕ್ಷಕರು ಮತ್ತೆ ಆನ್‌ಲೈನ್ ಕ್ಲಾಸ್​ಗಳ ಮುಖಾಂತರ ವಿದ್ಯಾರ್ಥಿಗಳು ಪಾಠ ಬೋಧನೆ ಮಾಡುತ್ತಿದ್ದಾರೆ.

ದಿ ನ್ಯೂಸ್ 24 ಕನ್ನಡ

TRENDING