Thursday, January 21, 2021
Home ಅಂತರ್ ರಾಜ್ಯ ಕೊವಿಡ್ ಹೆಚ್ಚುತ್ತಿರುವ ಹಿನ್ನೆಲೆ : ಡಿಸೆಂಬರ್ 31ರವರೆಗೂ ಮುಂಬೈನ ಶಾಲೆಗಳು ಬಂದ್

ಇದೀಗ ಬಂದ ಸುದ್ದಿ

ಕೊವಿಡ್ ಹೆಚ್ಚುತ್ತಿರುವ ಹಿನ್ನೆಲೆ : ಡಿಸೆಂಬರ್ 31ರವರೆಗೂ ಮುಂಬೈನ ಶಾಲೆಗಳು ಬಂದ್

ಮುಂಬೈ, ನ. 20: ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಡಿಯಲ್ಲಿ ಬರುವ ಎಲ್ಲಾ ಶಾಲೆಗಳು ಡಿಸೆಂಬರ್ 31ರವರೆಗೆ ಮುಚ್ಚಿರಲಿದೆ. ನಗರದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದಾರೆ.

ಈ ಮೊದಲು ನಿರ್ಧರಿಸಿದಂತೆ ನವೆಂಬರ್ 23 ರಿಂದ ಶಾಲೆಗಳು ಆರಂಭವಾಗಬೇಕಿತ್ತು. ಆದರೆ ಮುಂಬೈನಲ್ಲಿ ಕೊರೊನಾ ಪ್ರಕರಣಗಳು ಮತ್ತಷ್ಟು ಹೆಚ್ಚಾಗುತ್ತಿರುವ ಕಾರಣ ಈಗ ಶಾಲೆಗಳನ್ನು ತೆರೆಯುವುದು ಸೂಕ್ತವಲ್ಲ ಎಂದು ಅಂದಾಜಿಸಲಾಗಿದೆ.

ನಗರದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಆರಂಭವಾಗಿದೆ, ಈಗಾಗಲೇ ದೆಹಲಿಯಲ್ಲಿ ಮೂರನೇ ಬಾರಿಗೆ ಸೋಂಕು ಹೆಚ್ಚಳವಾಗುತ್ತಿದೆ. ಮುಂಬೈನಲ್ಲಿ ಗುರುವಾರ 924 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಒಟ್ಟು 2,72,449 ಪ್ರಕರಣಗಳಿವೆ. ಇದುವರೆಗೆ ಮೃತಪಟ್ಟಿರುವವರ ಸಂಖ್ಯೆ 10,624ಕ್ಕೆ ಏರಿದೆ. ಗುರುವಾರ 12 ಮಂದಿ ಸಾವನ್ನಪ್ಪಿದ್ದರು.

ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 90 ಲಕ್ಷಕ್ಕೇರಿದೆ. ಅತಿ ಹೆಚ್ಚು ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಅಮೆರಿಕದ ನಂತರ ಸ್ಥಾನ ಪಡೆದುಕೊಂಡಿರುವ ಭಾರತದಲ್ಲಿ ಶುಕ್ರವಾರ 45,882 ಮಂದಿಗೆ ಸೋಂಕು ದೃಢಪಟ್ಟಿದ್ದು. ಇದರೊಂದಿಗೆ ದೇಶದಲ್ಲಿ ಸೋಂಕಿತರ ಒಟ್ಟಾರೆ ಸಂಖ್ಯೆ 90,04,366ಕ್ಕೆ ಏರಿಕೆಯಾಗಿದೆ.

TRENDING