ಮಂಗಳೂರು: ಗ್ರಾಹಕರಿಂದ ಕೋಟ್ಯಂತರ ರೂ. ಠೇವಣಿ ಸಂಗ್ರಹಣೆ ಮಾಡಿ ಅವಧಿ ಪೂರ್ಣಗೊಂಡ ಬಳಿಕ ಮರು ಪಾವತಿ ಮಾಡಿಲ್ಲವೆಂದು ಮಲೈಕಾ ಸೊಸೈಟಿ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ.
ಮಂಗಳೂರು, ಉಡುಪಿ, ಮುಂಬೈ ಸೇರಿ ಹಲವಾರು ಕಡೆಗಳಲ್ಲಿ ಮಲೈಕಾ ಮಲ್ಟಿ ಸೊಸೈಟಿ ಕೋ ಆಪರೇಟಿವ್ ಸೊಸೈಟಿ ಶಾಖೆಗಳನ್ನು ಹೊಂದಿದೆ. ಹಿರಿಯ ನಾಗರಿಕರಿಗೆ ಆಕರ್ಷಕ ಬಡ್ಡಿ ದರ ನೀಡಲಾಗುತ್ತದೆ ಎಂದು ಹಲವಾರು ಜನರಿಂದ ಹೂಡಿಕೆ ಮಾಡುವಂತೆ ಹೇಳಲಾಗಿತ್ತು. ಆಕರ್ಷಕ ಬಡ್ಡಿ ದರವನ್ನು ನಂಬಿ ಹಲವಾರು ಹಿರಿಯ ನಾಗರಿಕರು ತಮಗೆ ನಿವೃತ್ತಿಯಾದ ಬಳಿಕ ದೊರಕಿದ ಹಣವನ್ನು ಈ ಸಂಸ್ಥೆಯಲ್ಲಿ ಠೇವಣಿ ಇರಿಸಿದ್ದರು ಎನ್ನಲಾಗ್ತಿದೆ.
ಈ ಬಗ್ಗೆ ಪಾಂಡೇಶ್ವರದ ಇಕಾನಾಮಿಕ್ ಆ್ಯಂಡ್ ನಾರ್ಕೊಟಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಎಷ್ಟು ಮಂದಿಗೆ ಎಷ್ಟು ಹಣ ವಂಚನೆಯಾಗಿದೆ ಎಂಬುದು ಪತ್ತೆಯಾಗಬೇಕಿದೆ.
ದಿ ನ್ಯೂಸ್ ೨೪ ಕನ್ನಡ