Sunday, June 13, 2021
Homeಜಿಲ್ಲೆಕೊಪ್ಪಳಬೈಕ್- ಮಿನಿಬಸ್ ನಡುವೆ ಭೀಕರ ಅಪಘಾತ ;ನಾಲ್ವರ ದುರ್ಮರಣ,10ಕ್ಕೂ ಹೆಚ್ಚು ಮಂದಿಗೂ ಗಾಯ

ಇದೀಗ ಬಂದ ಸುದ್ದಿ

ಬೈಕ್- ಮಿನಿಬಸ್ ನಡುವೆ ಭೀಕರ ಅಪಘಾತ ;ನಾಲ್ವರ ದುರ್ಮರಣ,10ಕ್ಕೂ ಹೆಚ್ಚು ಮಂದಿಗೂ ಗಾಯ

ಕೊಪ್ಪಳ: ಬೈಕ್​ ಮತ್ತು ಮಿನಿಬಸ್​ ನಡುವೆ ಭೀಕರ ಅಪಘಾತ ಸಂಭವಿಸಿ ನಾಲ್ವರು ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ನಿಟ್ಟಾಲಿ ಕ್ರಾಸ್​ ಬಳಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಅಗಸನಕೊಪ್ಪ ಗ್ರಾಮದಿಂದ ಹಿರೇಸಿಂಧೋಗಿ ಗ್ರಾಮಕ್ಕೆ ಎಗೇಂಜ್​ಮೆಂಟ್​ಗಾಗಿ ಮಿನಿಬಸ್​ ಬರುತ್ತಿತ್ತು. ಮಾರ್ಗಮಧ್ಯೆ ವೇಗವಾಗಿ ಬಂದ ಬೈಕ್​, ಬಸ್​ಗೆ​ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ವರು ಮೃತಪಟ್ಟರೆ 10ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಅದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಅಪಘಾತಕ್ಕೆ ಬೈಕ್​ ಸವಾರನ ವೇಗದ ಚಾಲನೆಯೇ ಕಾರಣ ಎನ್ನಲಾಗುತ್ತಿದೆ. ಸದ್ಯ ಗಾಯಾಳುಗಳನ್ನು ಕೊಪ್ಪಳದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಕುಕನೂರು‌ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಬಂಧ ಕುಕನೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img