Sunday, January 17, 2021
Home ಜಿಲ್ಲೆ ಮೈಸೂರಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ 22 ಕೋವಿಡ್ ಪರೀಕ್ಷಾ ಕೇಂದ್ರ

ಇದೀಗ ಬಂದ ಸುದ್ದಿ

ಮೈಸೂರಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ 22 ಕೋವಿಡ್ ಪರೀಕ್ಷಾ ಕೇಂದ್ರ

ನವೆಂಬರ್‌ 17ರಿಂದ ರಾಜ್ಯಾದ್ಯಂತ ಪದವಿ ಕಾಲೇಜು‌ಗಳು ತೆರೆದಿದ್ದು, ಮೈಸೂರಿನಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದಕ್ಕೆ ಸುಲಭವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಅನುವಾಗುವಂತೆ ಮಹಾನಗರ ಪಾಲಿಕೆ 22 ಕಡೆಗಳಲ್ಲಿ ಕೋವಿಡ್ ಟೆಸ್ಟ್ ಕೇಂದ್ರಗಳನ್ನು ತೆರೆದಿದೆ‌.

ಪ್ರಾಥಮಿಕ ಆರೋಗ್ಯ ಕೇಂದ್ರಗಳಿರುವ ಕುಂಬಾರಕೊಪ್ಪಲು, ಬನ್ನಿಮಂಟಪ,‌ ವೀರನಗೆರೆ, ರಾಜೇಂದ್ರನಗರ, ಶಾಂತಿನಗರ, ಚಾಮುಂಡಿಪುರಂ, ಕುರುಬರಹಳ್ಳಿ ವೃತ್ತ, ವಿ.ವಿ.ಪುರಂ, ಜಯನಗರ, ಬಿ.ಡಿ. ಆಸ್ಪತ್ರೆ, ಜಿ.ಬಿ. ಪಾಳ್ಯ, ಸಿಐಟಿಬಿ, ಸೋಮಾನಿ ಕಾಲೇಜು, ‌ರಾಜೀವ್ ನಗರ ರಂಗಮಂದಿರ, ಪುರಭವನ, ದೇವರಾಜ ಮಾರುಕಟ್ಟೆ ಮುಂಭಾಗ, ಬಿಲ್ಡರ್ ಅಸೋಸಿಯೇಷನ್, ‌ನ್ಯಾಯಾಲಯದ ಆವರಣ, ಕೆ.ಆರ್. ಆಸ್ಪತ್ರೆ, ಕೋವಿಡ್ ಜಿಲ್ಲಾಸ್ಪತ್ರೆ, ಮಕ್ಕಳ ಕೂಟ, ಅರಮನೆ ಈ 22 ಸ್ಥಳಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಚಿತವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದು ಮೈಸೂರು ಮಹಾನಗರ ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

ದಿ ನ್ಯೂಸ್ 24 ಕನ್ನಡ

TRENDING