Tuesday, November 24, 2020
Home ಅಂತರ್ ರಾಜ್ಯ ಇನ್ಮೇಲೆ ಪ್ರತಿ ತಿಂಗಳೂ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ ಅಮಿತ್ ಷಾ, ಜೆ.ಪಿ.ನಡ್ಡಾ : ಅಧ್ಯಕ್ಷ...

ಇದೀಗ ಬಂದ ಸುದ್ದಿ

ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

 ಬೆಂಗಳೂರು : ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ರಾಜ್ಯ ಸರ್ಕಾರವು ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, 2020-21 ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಒಳಗೊಂಡಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಾಮಾನ್ಯ...

Gold Rate: ವಾರದ ಆರಂಭದಲ್ಲೇ ಅಲ್ಪ ಇಳಿಕೆ...

Gold Price Today: ಬೆಂಗಳೂರು: ಕೊರೋನಾ ವೈರಸ್​ ಆರಂಭವಾದಗಿನಿಂದ ಚಿನ್ನದ ದರ ಗಗನಕ್ಕೇರಿದೆ. 10 ಗ್ರಾಂಗೆ 35 ಸಾವಿರ ರೂಪಾಯಿ ಇದ್ದ ಚಿನ್ನದ ಬೆಲೆ ಇಂದು 50 ಸಾವಿರ ರೂಪಾಯಿ...

ಕರಾಚಿಗಿಂತ ಮೊದಲು‘ಪಿಒಕೆ’ ವಶಪಡಿಸಿಕೊಳ್ಳಿ: ಶಿವಸೇನಾ ಸಂಸದ

 ಮುಂಬೈ: 'ಕರಾಚಿ ಭಾರತದ ಅಂಗವಾಗಲಿದೆ ಎಂದು ಪ್ರತಿಪಾದಿಸುವ ಮೊದಲು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ವಶಪಡಿಸಿಕೊಳ್ಳಿ' ಎಂದು ಶಿವಸೇನಾ ಸಂಸದ ಸಂಜಯ್‌ ರಾವುತ್‌ ಅವರು ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್‌ ಅವರಿಗೆ...

ಬೆಳ್ತಂಗಡಿಯಲ್ಲಿ 2 ತಲೆ, 7 ಕಾಲು ಹೊಂದಿದ...

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಳಂಜ ಗ್ರಾಮದ ಕಾಯರ್ತಡ್ಕ ಎಂಬಲ್ಲಿ ಹಸು ಅವಳಿ ಕರುಗಳಿಗೆ ಜನ್ಮ ನೀಡಿದ್ದು ಇದರಲ್ಲಿ 1ಕರು 2 ತಲೆ 7 ಕಾಲುಗಳನ್ನು ಹೊಂದಿದ್ದು ಪ್ರಕೃತಿ ವಿಸ್ಮಯವಾಗಿದೆ.

ತಮಿಳುನಾಡು, ಆಂಧ್ರಪ್ರದೇಶಕ್ಕೆ ಅಪ್ಪಳಿಸಲಿದೆ `ನಿವಾರ್’ ಚಂಡಮಾರುತ

 ಚೆನ್ನೈ : ನಾಳೆ (ನವೆಂಬರ್ 25) ತಮಿಳುನಾಡು ಹಾಗೂ ದಕ್ಷಿಣ ಆಂಧ್ರ ಪ್ರದೇಶಕ್ಕೆ ನಿವಾರ್ ಚಂಡಮಾರುತ ಅಪ್ಪಳಿಸಲಿದ್ದು, ಮೈಲಾಡುತುರೈ ಜಿಲ್ಲೆ ಸೇರಿದಂತೆ ಮಾಮಲ್ಲಪುರಂ ಮತ್ತು ಕಾರೈಕಾಲ್ ಭಾರೀ ಮಳೆಯಾಗುವ ಸಾಧ್ಯತೆ...

ಇನ್ಮೇಲೆ ಪ್ರತಿ ತಿಂಗಳೂ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ ಅಮಿತ್ ಷಾ, ಜೆ.ಪಿ.ನಡ್ಡಾ : ಅಧ್ಯಕ್ಷ ದಿಲೀಪ್ ಘೋಷ್

ಕೋಲ್ಕತ್ತ: ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆವರೆಗೆ ಗೃಹಸಚಿವ ಅಮಿತ್ ಶಾ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಪ್ರತಿ ತಿಂಗಳು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಬುಧವಾರ ತಿಳಿಸಿದ್ದಾರೆ.

‘ಪ್ರತ್ಯೇಕವಾಗಿ ಇಬ್ಬರೂ ಭೇಟಿ ನೀಡಲಿದ್ದು, ಚುನಾವಣೆಗೆ ರಾಜ್ಯ ಬಿಜೆಪಿ ಘಟಕದ ಸಿದ್ಧತೆಯನ್ನು ಪರಿಶೀಲನೆ ಮಾಡಲಿದ್ದಾರೆ. ಉಭಯ ನಾಯಕರ ಭೇಟಿಯೂ ರಾಜ್ಯ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೂಲಗಳ ಪ್ರಕಾರ, ಶಾ ಅವರು ತಿಂಗಳಲ್ಲಿ ಎರಡು ದಿನ, ನಡ್ಡಾ ಅವರು ತಿಂಗಳಲ್ಲಿ ಮೂರು ದಿನ ಪಶ್ಚಿಮ ಬಂಗಾಳದಲ್ಲಿ ಉಳಿದುಕೊಂಡು ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲಿದ್ದಾರೆ. ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಬಂಗಾಳಕ್ಕೆ ಹೆಚ್ಚಿನ ಸಮಯ ಮೀಸಲಿಡಲಿದ್ದಾರೆ ಎನ್ನಲಾಗಿದೆ.

‘ರಾಜ್ಯದ ಜನರು ಸಿಪಿಎಂ, ಕಾಂಗ್ರೆಸ್ ಹಾಗೂ ಟಿಎಂಸಿ ಪಕ್ಷಗಳಿಗೆ ಅವಕಾಶ ನೀಡಿದ್ದರು. ಆದರೆ ಜನರ ಆಶೋತ್ತರಗಳನ್ನು ಈಡೇರಿಸಲು ಮೂರೂ ಪಕ್ಷಗಳು ವಿಫಲವಾಗಿವೆ. ಜನರು ಇದೀಗ ಬಿಜೆಪಿಯ ಮೇಲೆ ಭರವಸೆ ಇರಿಸಿದ್ದು, ಅವರ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ’ ಎಂದು ಘೋಷ್ ಹೇಳಿದ್ದಾರೆ.

ಪಕ್ಷವು ಮಂಗಳವಾರವಷ್ಟೇ ರಾಜ್ಯದ ಐದು ಸಂಘಟನಾ ವಲಯಗಳಿಗೆ ಉಸ್ತುವಾರಿಗಳನ್ನು ನೇಮಿಸಿದೆ. ಕೇಂದ್ರ ನಾಯಕರಾದ ಸುನಿಲ್ ದೇವಧರ್‌, ವಿನೋದ್ ಸೋಂಕರ್, ಹರೀಶ್ ದ್ವಿವೇದಿ, ದುಶ್ಯಂತ್ ಕುಮಾರ್ ಗೌತಮ್, ವಿನೋದ್ ಟೌರೆ ಅವರು ಐದು ವಲಯಗಳಲ್ಲಿ ಚುನಾವಣಾ ಸಿದ್ಧತೆ ನೋಡಿಕೊಳ್ಳಲಿದ್ದಾರೆ.

ರಾಜ್ಯ ಚುನಾವಣೆಗೆ ಕೇಂದ್ರ ನಾಯಕರನ್ನು ಕರೆತಂದ ಬಿಜೆಪಿ ನಡೆಯನ್ನು ಆಡಳಿತಾರೂಢ ಟಿಎಂಸಿ ಟೀಕಿಸಿದೆ. ರಾಜ್ಯ ಬಿಜೆಪಿ ಮುಖಂಡರ ಬಗ್ಗೆ ವರಿಷ್ಠರಿಗೆ ನಂಬಿಕೆ ಇಲ್ಲ ಎಂದು ಲೇವಡಿ ಮಾಡಿದೆ.

‘ಬಿಜೆಪಿಯ ಈ ನಾಯಕರ ನಡೆಯ ಮೇಲೆ ಕಣ್ಣಿಡಲು ಮತ್ತು ಅವರು ಯಾವುದೇ ವಿಭಜಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಂತೆ ನೋಡಿಕೊಳ್ಳಲು ನಾವು ನಮ್ಮ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇವೆ’ ಎಂದು ಟಿಎಂಸಿ ಸಂಸದ ಸುಖೇಂದು ಶೇಖರ್ ರಾಯ್ ಹೇಳಿದ್ದಾರೆ.

TRENDING