Thursday, December 3, 2020
Home ಬೆಂಗಳೂರು ಡಿಜೆ ಹಳ್ಳಿ ಗಲಭೆ ಪ್ರಕರಣ: ಎನ್‌ಐಎಯಿಂದ 43 ಕಡೆಗಳಲ್ಲಿ ದಾಳಿ

ಇದೀಗ ಬಂದ ಸುದ್ದಿ

ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ಸಮಿತಿಗೆ...

ವಾಷಿಂಗ್ಟನ್‌: ಅಮೆರಿಕದ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದ ಚಟುವಟಿಕೆಗಳ ನಿರ್ವಹಣೆಗಾಗಿ ರಚಿಸಿರುವ ನಾಲ್ವರು ಸದಸ್ಯರ 'ಅಧ್ಯಕ್ಷೀಯ ಉದ್ಘಾಟನಾ ಸಮಿತಿ(ಪಿಐಸಿ)'ಗೆ ಭಾರತೀಯ-ಅಮೆರಿಕನ್ ಮಜು ವರ್ಗೀಸ್ ಅವರನ್ನು ನೇಮಿಸಲಾಗಿದೆ.

ಗುಡ್ ನ್ಯೂಸ್ :ರಾಜ್ಯ ಸರ್ಕಾರದಿಂದ ಶೀಘ್ರವೇ ಹೊಸ...

ಬೆಂಗಳೂರು : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ 2019-20 ನೇ ಸಾಲಿನ ಹೊಸ ಪಡಿತರ ಚೀಟಿಗಳನ್ನು ಈ ತಿಂಗಳ ಮೂರನೇ ವಾರದಿಂದ ವಿತರಿಸಲು ಆಹಾರ ಇಲಾಖೆ ಸಿದ್ಧತೆ ನಡೆಸಿದೆ.

ದೆಹಲಿಯಲ್ಲಿ ಭೂ ಕಂಪನ : ರಿಕ್ಟರ್ ಮಾಪಕದಲ್ಲಿ...

ನವದೆಹಲಿ : ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮತ್ತೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 2.7 ರಷ್ಟು ದಾಖಲಾಗಿದೆ ಎಂದು ವರದಿಯಾಗಿದೆ. ದೆಹಲಿ ಘಾಜಿಯಾಬಾದ್ ನಲ್ಲಿ ಲಘು ಭೂಕಂಪನ...

ಕ್ರಿಸ್ ಮಸ್ ಹಬ್ಬದ ವಿಶೇಷವಾಗಿ 250 ಬಗೆಯ...

 ಟೋಕಿಯೋದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಲೇ ಇದೆ. ಹೀಗಾಗಿ ಜಪಾನ್​ ರಾಜಧಾನಿಯ ಸಮೀಪದಲ್ಲಿರುವ ಅಂಗಡಿಯೊಂದು ಕ್ರಿಸ್​​ ಮಸ್​ ಹಬ್ಬದ ವಿಶೇಷವಾಗಿ 250 ಬಗೆಯ ಮಾಸ್ಕ್​ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಇದರಲ್ಲಿ ಅಲಂಕಾರಿಕ ದೀಪಗಳನ್ನ...

ದೇಶದ ರೈತರ ಹೋರಾಟಕ್ಕೆ ವಿದೇಶದಿಂದಲೂ ಸಿಕ್ಕಿದೆ ಬೆಂಬಲ...

ದೇಶದಲ್ಲಿ ಕೃಷಿ ಮಸೂದೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ರೈತರಿಗೆ ವಿಶ್ವದ ಮೂಲೆ ಮೂಲೆಯಿಂದ ಬೆಂಬಲ ವ್ಯಕ್ತವಾಗುತ್ತಿದೆ. ಈಗಾಗಲೇ ಪ್ರತಿಭಟನೆ ಮಾಡುತ್ತಿದ್ದ ರೈತರಿಗೆ...

ಡಿಜೆ ಹಳ್ಳಿ ಗಲಭೆ ಪ್ರಕರಣ: ಎನ್‌ಐಎಯಿಂದ 43 ಕಡೆಗಳಲ್ಲಿ ದಾಳಿ

ಬೆಂಗಳೂರು: ದೇವರ ಜೀವನಹಳ್ಳಿ ಮತ್ತು ಕಾಡುಗೊಂಡನಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ(ಎನ್‌ ಐಎ) ಅಧಿಕಾರಿಗಳು ಬುಧವಾರ ಎಸ್‌ಡಿಪಿಐ ಮತ್ತು ಪಿಎಫ್‌ಐ ಕಚೇರಿಗಳು ಸೇರಿ ಬೆಂಗಳೂರಿನ 43ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ನಗರದಲ್ಲಿರುವ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಹಾಗೂ ಪಾಪ್ಯುಲರ್‌ ಫ್ರಂಟ್‌ಆಫ್‌ಇಂಡಿಯಾ(ಪಿಎಫ್‌ಐ) ಪಕ್ಷದ ಕಚೇರಿಗಳು ಸೇರಿ 43 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದು, ಎಲ್ಲೆಡೆ ತಪಾಸಣೆ ನಡೆಸಲಾಗದೆ.

ಪಕ್ಷದ ಕಚೇರಿಗಳಲ್ಲಿ ಕತ್ತಿ, ಚಾಕು, ಕಬ್ಬಿಣದ ರಾಡ್‌ ಸೇರಿ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಬೆಳಗ್ಗೆಯಿಂದ ಸಂಜೆಯವರೆಗೂ ತಪಾಸಣೆ ನಡೆಸಲಾಯಿತು. ಗಲಭೆಗೆ ಸಂಬಂಧಪಟ್ಟ ಸಾಕ್ಷಗಳನ್ನು ಸಂಗ್ರಹಿಸಲಾಯಿತು. ಅವುಗಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮತ್ತಷ್ಟು ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕೆ ಹುಡುಕಾಟ
ನಡೆಯುತ್ತಿದೆ ಎಂದು ಎನ್‌ಐಎ ತಿಳಿಸಿದೆ.

ಪ್ರಕರಣದಲ್ಲಿ ಎಸ್‌ಡಿಪಿಐ ಹಾಗೂ ಪಿಎಫ್‌ಐ ಪಕ್ಷಗಳ ಕಾರ್ಯಕರ್ತರೂ ಭಾಗಿಯಾಗಿರುವ ಮಾಹಿತಿ ಇದ್ದು, ಅದೇ ಕಾರಣಕ್ಕೆ ಪಕ್ಷಗಳ ಕಚೇರಿ ಹಾಗೂ ಆರೋಪಿಗಳ ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಅಗತ್ಯವಿದ್ದಲ್ಲಿ ಮುಂದಿನ ದಿನಗಳಲ್ಲಿ ದಾಳಿ ಮುಂದುವರಿಯುವ ಸಾಧ್ಯತೆ ಯಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ಪ್ರಕರಣ ಹಿನ್ನೆಲೆ?: ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸೋದರ ಅಳಿಯ ನವೀನ್‌ ಮುಸ್ಲಿಂ ಸಮುದಾಯ ಧರ್ಮಗುರುಗಳ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಮಾಡಿದ್ದರಿಂದ ಆಕ್ರೋಶಗೊಂಡ ಕೆಲ ಕಿಡಿಗೇಡಿಗಳು, ಆ.11ರಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ, ಅವರ ಕಚೇರಿ, ಸೋದರ ಅಳಿಯ ನವೀನ್‌ ಮನೆ ಹಾಗೂ ಎರಡು ಪೊಲೀಸ್‌ ಠಾಣೆಗಳ ಮೇಲೆ ಒಂದು ಸಾವಿರಕ್ಕೂ ಅಧಿಕ ಮಂದಿ ಮಾರಕಾಸ್ತ್ರಗಳಿಂದ ಧ್ವಂಸ ಮಾಡಿದ್ದರು. ಅಲ್ಲದೆ, ಬೆಂಕಿ ಹಚ್ಚಿ ವಿಧ್ವಂಸಕ ಕೃತ್ಯ
ಎಸಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸಿಸಿಬಿ ಪೊಲೀಸರು ಸುಮಾರು 300ಕ್ಕೂ ಅಧಿಕ ಮಂದಿಯನ್ನು
ಬಂಧಿಸಿದ್ದರು. ಈ ಪೈಕಿ ರುದ್ರೇಶ್‌ ಕೊಲೆ ಪ್ರಕರಣದಆರೋಪಿಗಳ ಜತೆ ಸಂಪರ್ಕಹೊಂದಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಸಮೀವುದ್ದೀನ್‌ ಉಗ್ರ ಸಂಘಟನೆಯ ಸದಸ್ಯ ಎಂದು ಹೇಳಲಾಗಿತ್ತು. ಈ ಸಂಬಂಧ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಎನ್‌ಐಎ ಅಧಿಕಾರಿಗಳು ಸೆ.20 ಮತ್ತು 21ರಂದು ಸ್ಥಳೀಯ ಠಾಣಾಧಿಕಾರಿಗಳಿಂದ
ಮಾಹಿತಿ ಪಡೆದುಕೊಂಡು, ಸೆ.22ರಂದು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ.

ಪ್ರಕರಣ ಸಂಬಂಧ ಸೆ.24ರಂದು ಎನ್‌ಐಎ ಅಧಿಕಾರಿಗಳು ನಗರದ30ಕಡೆಗಳಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಏರ್‌ಗನ್‌, ಪೆಲಟ್ಸ್‌, ಮಾರ ಕಾಸ್ತ್ರಗಳು,ಕಬ್ಬಿಣದ ರಾಡ್‌ಗಳು, ಡಿಜಿಟಲ್‌ ಉಪಕರಣಗಳು, ಡಿವಿಆರ್‌ ಮತ್ತು ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡ ಲಾಗಿತ್ತು. ಅಲ್ಲದೆ, ಪ್ರಕರಣದಲ್ಲಿ ಪ್ರಮುಖಪಾತ್ರ ವಹಿಸಿದ್ದ ಆರೋಪದ ಮೇಲೆಕೆ.ಜಿ.ಹಳ್ಳಿ ನಿವಾಸಿ ಸೈಯದ್‌ ಸಿದ್ದಿಕಿ ಅಲಿ(44) ಎಂಬಾ ತನನ್ನು ಬಂಧಿಸಲಾಗಿತ್ತು.

ಖಾಸಗಿ ಬ್ಯಾಂಕ್‌ನಲ್ಲಿ ವಸೂಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಸೈಯದ್‌ ಸಿದ್ದಿಕಿ ಅಲಿ,ಘಟನೆ ದಿನ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಯ ಕಾರ್ಯ ಕರ್ತರಿಗೆ ಗಲಭೆಗೆ ಕುಮ್ಮಕ್ಕು ನೀಡಿದ್ದು, ಅದರಿಂದ ಪ್ರಚೋದನೆಗೊಂಡವರು ದೊಡ್ಡ
ಮಟ್ಟದಲ್ಲಿ ಗಲಭೆ ಸೃಷ್ಟಿಸಿದ್ದರು.

TRENDING