Thursday, January 21, 2021
Home ಅಂತರ್ ರಾಜ್ಯ ಪಂಜಾಬ್‌ ರಾಜ್ಯದ ಚುನಾವಣಾ ರಾಯಭಾರಿಯಾಗಿ ನಟ ಸೋನು ಸೂ‌ದ್‌ ನೇಮಕ

ಇದೀಗ ಬಂದ ಸುದ್ದಿ

ಪಂಜಾಬ್‌ ರಾಜ್ಯದ ಚುನಾವಣಾ ರಾಯಭಾರಿಯಾಗಿ ನಟ ಸೋನು ಸೂ‌ದ್‌ ನೇಮಕ

ನವದೆಹಲಿ: ಬಾಲಿವುಡ್ ನಟ ಸೋನು ಸೂದ್‌ ಅವರನ್ನು ಪಂಜಾಬ್‌ ರಾಜ್ಯ ಚುನಾವಣಾ ರಾಯಭಾರಿಯಾಗಿ ನೇಮಕ ಮಾಡಿ ಭಾರತೀಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಪಂಜಾಬ್‌ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಎಸ್. ಕರುಣಾ ರಾಜು ಅವರು ಆಯೋಗದ ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಸಹಾಯ ಮಾಡುವ ಮೂಲಕ ಸೋನು ಸೂದ್‌ ಗಮನ ಸೆಳೆದಿದ್ದರು.

TRENDING