ಧಾರವಾಡ : ಧಾರವಾಡದಲ್ಲಿ ಜೂಜಾಟ ನಿರತ ಪೊಲೀಸ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂಜಾಟದಲ್ಲಿ ತೊಡಗಿದವರ ಪೈಕಿ ನಾಲ್ವರು ಕಾನ್ಸಟೇಬಲ್ಗಳನ್ನು ಅಮಾನತುಗೊಳಿಸಲಾಗಿದೆ.
ಗರಗ ಪೊಲೀಸ್ ಠಾಣೆಯ ಮಂಜುನಾಥ ಬಾಗವಿ, ಆತ್ಮಾನಂದ ಬೆಟಗೇರಿ ಗ್ರಾಮೀಣ ಪೊಲೀಸ್ ಠಾಣೆಯ ಇಸ್ಮಾಯಿಲ್ ಸಯ್ಯದನವರ್ ಡಿಆರ್ ಮೈಯುದ್ದೀನ ಮುಲ್ಲಾ ಅಮಾನತುಗೊಂಡ ಪೊಲೀಸ್ ಸಿಬ್ಬಂದಿಗಳಾಗಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಡಿವೈಎಸ್ಪಿ ರವಿ ನಾಯಕ ದಾಳಿ ನಡೆಸಿದ್ದರು. ದಾಳಿಯ ವೇಳೆ ಜೂಜಾಟದ ಪ್ರಕರಣ ಬಯಲಿಗೆ ಬಂದಿತ್ತು. ಗರಗ ಗ್ರಾಮದ ಬಿಜೆಪಿ ಮುಖಂಡನ ಜೊತೆ ಸೇರಿ ಇವರೆಲ್ಲರೂ ಜೂಜಾಟದಲ್ಲಿ ತೊಡಗಿದ್ದರು ಎನ್ನಲಾಗಿತ್ತು. ಪ್ರಕರಣವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ ಗಂಭೀರವಾದ ಪರಿಗಣಿಸಿದ್ದರು.
ಈ ಹಿನ್ನೆಲೆ ನಾಲ್ವರು ಕಾನ್ಸಟೇಬಲ್ ಗಳನ್ನ ಎಸ್ಪಿ ಕೃಷ್ಣಕಾಂತ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ದಿ ನ್ಯೂಸ್ ೨೪ ಕನ್ನಡ.
ಹುಬ್ಬಳ್ಳಿ.