Sunday, May 16, 2021
Homeಜಿಲ್ಲೆಕೊಡಗುಗಾಂಜಾ ಮಾರಾಟಕ್ಕೆ ಯತ್ನ, ನಾಲ್ವರ ಬಂಧನ

ಇದೀಗ ಬಂದ ಸುದ್ದಿ

ಗಾಂಜಾ ಮಾರಾಟಕ್ಕೆ ಯತ್ನ, ನಾಲ್ವರ ಬಂಧನ

ವಿರಾಜಪೇಟೆ: ನಗರದಲ್ಲಿ ಗಾಂಜಾ ಮಾರಾಟಕ್ಕೆ ಮುಂದಾಗಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಉದಯಗಿರಿಯಲ್ಲಿ ನಿವಾಸ ಹೊಂದಿರುವ ಮೂಲತಃ ವಿರಾಜಪೇಟೆ ಮೊಗರ ಗಲ್ಲಿ ನಿವಾಸಿ ಮಹಮ್ಮದ್ ಅಲ್ತಾಫ್, ಕಲ್ಲು ಬಾಣಿ ನಿವಾಸಿ ಅಬ್ದುಲ್ ಮುನಾಫ್, ನಗರದ ಸುಂಕದಕಟ್ಟೆ ನಿವಾಸಿ ಪಿ.ಎಲ್ ಅಭಿಷೇಕ್, ಪೇರುಂಬಾಡಿ ಆರ್ಜಿ ಗ್ರಾಮದ ನಿವಾಸಿ ಶಫೀಕ್ ವಿರಾಜಪೇಟೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಆರೋಪಿಗಳನ್ನ ಬಂಧಿಸಲಾಗಿದೆ.

ಬಂಧಿತರಿಂದ 2 ಕೆಜಿ 50 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ವಿರಾಜಪೇಟೆ ನಗರ ಠಾಣೆಯಲ್ಲಿ ಎನ್.ಡಿ.ಪಿ. ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಬಂಧಿತರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿರುವಂತೆ ನ್ಯಾಯಾದೀಶರು ಆದೇಶ ನೀಡಿದ್ದಾರೆ.

ದಿ ನ್ಯೂಸ್೨೪ ಕನ್ನಡ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img