Monday, January 18, 2021
Home ಜಿಲ್ಲೆ ಕನ್ನಡ ಧಾರಾವಾಹಿ ನಟಿಯನ್ನು ತಮ್ಮ ಚಿತ್ರಕ್ಕೆ ಕರೆ ತಂದ ದುನಿಯಾ ವಿಜಯ್

ಇದೀಗ ಬಂದ ಸುದ್ದಿ

ಕನ್ನಡ ಧಾರಾವಾಹಿ ನಟಿಯನ್ನು ತಮ್ಮ ಚಿತ್ರಕ್ಕೆ ಕರೆ ತಂದ ದುನಿಯಾ ವಿಜಯ್

‘ಸಲಗ’ ಚಿತ್ರದ ನಂತರ ದುನಿಯಾ ವಿಜಯ್ ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿರುವುದು ಹಳೆಯ ವಿಚಾರ. ಈ ಚಿತ್ರಕ್ಕೆ ಹೊಸಬರನ್ನು ಕರೆ ತರುವುದಾಗಿ ವಿಜಯ್ ಹೇಳಿದ್ದರು. ಈಗ ಚಿತ್ರದ ನಾಯಕಿಯಾಗಿ ಕನ್ನಡದ ಖ್ಯಾತ ಧಾರಾವಾಹಿಯ ನಾಯಕಿಯನ್ನು ಕರೆ ತರುತ್ತಿದ್ದಾರೆ.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಧಾರಾವಾಹಿ ‘ಪಾರು’ವಿನ ಮೋಕ್ಷಿತಾ ಪೈ ಅವರನ್ನು ದುನಿಯಾ ವಿಜಯ್ ತಮ್ಮ ಮುಂದಿನ ಸಿನಿಮಾಗೆ ಕರೆತರುತ್ತಿದ್ದಾರೆ. ಡಾ. ರಾಜ್ ಕುಟುಂಬದ ಲಕ್ಕಿ ಗೋಪಾಲ್ ಅವರನ್ನು ಚಿತ್ರದ ಹೀರೋ ಆಗಿ ಈಗಾಗಲೇ ವಿಜಯ್, ಅಭಿಮಾನಿಗಳಿಗೆ ಪರಿಚಯಿಸಿದ್ದರು. ಅವರಿಗೆ ನಾಯಕಿ ಯಾರು ಎಂಬ ಪ್ರಶ್ನೆ ಬಂದಾಗ, ಈ ಪಾತ್ರವನ್ನು ಮೋಕ್ಷಿತಾ ಮಾಡಿದರೆ ಚೆನ್ನಾಗಿರುತ್ತದೆ ಎಂದು ಚಿತ್ರತಂಡ ಅಭಿಪ್ರಾಯ ವ್ಯಕ್ತಪಡಿಸಿದೆ. ಇದು ವಿಜಯ್ ಅವರಿಗೂ ಸರಿ ಎನಿಸಿದೆ. ಮೋಕ್ಷಿತಾ ಕಿರುತೆರೆ ವೀಕ್ಷಕರಿಗೆ ಪರಿಚಯವಿದ್ದರೂ ಕನ್ನಡ ಚಿತ್ರರಂಗಕ್ಕೆ ಹೊಸ ಪರಿಚಯ. ಇದುವರೆಗೂ ಅವರು ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ಆದ್ದರಿಂದ ಮೋಕ್ಷಿತಾ ಅವರನ್ನು ವಿಜಯ್ ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.

ದಿ ನ್ಯೂಸ್೨೪ ಕನ್ನಡ

TRENDING