Saturday, July 31, 2021
Homeದೆಹಲಿವಿದೇಶದಿಂದ ದೇಣಿಗೆ : ಗೃಹ ಸಚಿವಾಲಯದಿಂದ ಮಹತ್ವದ ಮಾಹಿತಿ

ಇದೀಗ ಬಂದ ಸುದ್ದಿ

ವಿದೇಶದಿಂದ ದೇಣಿಗೆ : ಗೃಹ ಸಚಿವಾಲಯದಿಂದ ಮಹತ್ವದ ಮಾಹಿತಿ

 ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರೇತರ ಸಂಸ್ಥೆಗಳಿಗೆ ವಿದೇಶಿ ಹಣಕಾಸು ನೆರವು ನೀಡಲು ನಿಯಮಗಳನ್ನು ಬಿಗಿಗೊಳಿಸಿತ್ತು. ಕುರಿತು ಅಧಿಸೂಚನೆ ಹೊರಡಿಸಿರುವ ಗೃಹ ಸಚಿವಾಲಯ, ಕನಿಷ್ಠ ಮೂರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಹಾಗೂ 15 ಲಕ್ಷ ರೂಪಾಯಿ ಗಳನ್ನು ಖರ್ಚು ಮಾಡಿರುವ ವಿದೇಶಗಳಿಂದ ಹಣ ಪಡೆಯಲು ಮಾತ್ರ ಅರ್ಹಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

ಸರಕಾರ ಎನ್ ಜಿಒಗಳ ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಈ ಬದಲಾವಣೆಗಳನ್ನು ಮಾಡಿದ್ದು, ಹವಾಲಾ, ತೆರಿಗೆ ವಂಚನೆ, ಹಣ ದುರುಪಯೋಗ ತಡೆ ಚಟುವಟಿಕೆಗಳನ್ನು ನಿಯಂತ್ರಿಸುವ ಪ್ರಯತ್ನ ನಡೆದಿದೆ. ವಿದೇಶಿ ಹಣ ಪಡೆಯಲು ಎನ್ ಜಿಒಗಳು ನಿಗದಿತ ಬ್ಯಾಂಕ್ ಗಳಲ್ಲಿ ಮಾತ್ರ ಖಾತೆ ತೆರೆಯುವುದು ಕಡ್ಡಾಯ ಎಂದು ಸರಕಾರ ಈ ಹಿಂದೆ ಆದೇಶ ನೀಡಿತ್ತು. ಅಲ್ಲದೆ, 150ಕ್ಕೂ ಹೆಚ್ಚು ಸಂಘಟನೆಗಳನ್ನು ಆರು ತಿಂಗಳ ಕಾಲ ನಿಷೇಧಿಸಿಆದೇಶ ಹೊರಡಿಸಿದೆ.

ಏತನ್ಮಧ್ಯೆ, ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆಯಡಿ ವಿದೇಶಿ ದೇಣಿಗೆ ಪಡೆಯುವ ಎನ್ ಜಿಒಗಳು ನೋಂದಣಿ ಮಾಡಿಕೊಳ್ಳಬೇಕು ಎಂದು ಗೃಹ ಸಚಿವಾಲಯ ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ. ನೋಂದಣಿ ಯು ಐದು ವರ್ಷಗಳ ಕಾಲ ಸಿಂಧುವಾಗಿರುತ್ತದೆ ಮತ್ತು ನಂತರ ಅದನ್ನು ನವೀಕರಿಸಬಹುದು.

ವಿದೇಶಿ ವಂತಿಗೆ (ನಿಯಂತ್ರಣ) ಕಾಯಿದೆಯ ಅಡಿಯಲ್ಲಿ ನೋಂದಣಿ ಬಯಸುವ ಎನ್ ಜಿಒಗಳ ಪದಾಧಿಕಾರಿಗಳು, ದಾನಿಯಿಂದ ನಿರ್ದಿಷ್ಟ ಬದ್ಧತೆಯ ಪತ್ರವನ್ನು ಸಲ್ಲಿಸಬೇಕು, ಅದು ವಿದೇಶಿ ವಂತಿಗೆಯ ಮೊತ್ತ ಮತ್ತು ಯಾವ ಉದ್ದೇಶಕ್ಕೆ ಇದನ್ನು ನೀಡಲು ಉದ್ದೇಶಿಸಲಾಗಿದೆ ಎಂಬುದನ್ನು ಸೂಚಿಸುತ್ತದೆ.

‘ಅಧಿನಿಯಮದ 12ನೇ ಪ್ರಕರಣದ (4) ಉಪಪ್ರಕರಣದ (4) ರ ಉಪಪ್ರಕರಣದ (ಬಿ) ಅಡಿಯಲ್ಲಿ ನೋಂದಣಿ ಬಯಸುವ ವ್ಯಕ್ತಿಯು ಈ ಕೆಳಗಿನ ಷರತ್ತುಗಳನ್ನು ಪೂರೈಸತಕ್ಕದ್ದು, ಅಂದರೆ: (i) ಇದು ಮೂರು ವರ್ಷಗಳ ಕಾಲ ಅಸ್ತಿತ್ವದಲ್ಲಿರಬೇಕು ಮತ್ತು ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ ಸಮಾಜದ ಅನುಕೂಲಕ್ಕಾಗಿ ತನ್ನ ಮೂಲ ಚಟುವಟಿಕೆಗಳಿಗೆ ಕನಿಷ್ಠ ಹದಿನೈದು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿರಬೇಕು’ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img