Thursday, November 26, 2020
Home ದೆಹಲಿ ಭ್ರಷ್ಟಾಚಾರ ಬಯಲು ಮಾಡಿದ್ದ ಅಸ್ಸಾಂ ಪತ್ರಕರ್ತ ಸಾವು

ಇದೀಗ ಬಂದ ಸುದ್ದಿ

ಕೊರೋನಾ ಅಬ್ಬರ : ಅಮೆರಿಕಾದಲ್ಲಿ ಒಂದೇ ದಿನ...

ವಾಷಿಂಗ್ಟನ್: ಇಷ್ಟು ದಿನ ಅತೀ ಹೆಚ್ಚು ಸೋಂಕಿನಿಂದ ದಾಖಲೆ ಬರೆಯುತ್ತಿದ್ದ ಅಮೆರಿಕಾ ಇದೀಗ ಸಾವಿನಲ್ಲೂ ದಾಖಲೆ ಬರೆದಿದೆ. 6 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕಾದಲ್ಲಿ ಒಂದೇ ದಿನ...

ಉ.ಪ್ರದೇಶದ ವಿಮಾನ ನಿಲ್ದಾಣಕ್ಕೆ ಶ್ರೀರಾಮನ ಹೆಸರಿಟ್ಟ ಸಿಎಂ...

ಲಕ್ನೋ, ನ. 25: ಉತ್ತರ ಪ್ರದೇಶದ ವಿಮಾನ ನಿಲ್ದಾಣದ ಹೆಸರು ಬದಲಾಯಿಸಲು ಯೋಗಿ ಆದಿತ್ಯನಾಥ್ ನಿರ್ಧರಿಸಿದ್ದಾರೆ. ಈ ಕುರಿತಂತೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಪ್ರಖ್ಯಾತ ಟಿ20 ಲೀಗ್ ಗೆ ಗುಡ್ ಬೈ...

 ನವದೆಹಲಿ: ಮಹಾಮಾರಿ ಕರೊನಾ ವೈರಸ್​ ಸಂಕಷ್ಟದ ನಡುವೆಯೇ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಡೇವಿಡ್​ ವಾರ್ನರ್​ ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದು, ಪ್ರಸಿದ್ಧ ಟಿ20 ಲೀಗ್​ನಿಂದ ಹೊರಗುಳಿಯುವುದಾಗಿ ಹೇಳಿದ್ದಾರೆ. ಹೌದು,...

ಪ.ಬಂಗಾಳ ‘ಎರಡನೇ ಕಾಶ್ಮೀರ’ವಾಗಿ ಮಾರ್ಪಟ್ಟಿದೆ: ಬಿಜೆಪಿ ಮುಖ್ಯಸ್ಥ...

 ಕೋಲ್ಕತ್ತ:‍ ಪಶ್ಚಿಮ ಬಂಗಾಳ 'ಎರಡನೇ ಕಾಶ್ಮೀರವಾಗಿ' ಮಾರ್ಪಟ್ಟಿದೆ. ಇಲ್ಲಿ ನಿತ್ಯ ಉಗ್ರರನ್ನು ಬಂಧಿಸಲಾಗುತ್ತಿದೆ. ದಿನಬೆಳಗಾದರೆ ಅಕ್ರಮ ಬಾಂಬ್‌ ತಯಾರಿಕಾ ಕಾರ್ಖಾನೆಗಳು ಪತ್ತೆಯಾಗುತ್ತಿವೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲೀಪ್‌ ಘೋಷ್‌...

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ‘ಪೊಗರು’ ಸಿನಿಮಾ...

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿಕ್ಷೆಯ ಪೊಗರು ಸಿನಿಮದ ಚಿತ್ರೀಕರಣ ಇತ್ತೀಚಿಗಷ್ಟೆ ಮುಕ್ತಾಯವಾಗಿದೆ. ಇದೀಗ ಪಗರು ಪೋಸ್ಟ್ ಪ್ರಡಕ್ಷನ್ ಕೆಲಸದಲ್ಲಿ ಸಿನಿಮಾತಂಡ ನಿರತವಾಗಿದೆ. ಭಾರಿ ಕುತೂಹಲ ಮತ್ತು ನಿರೀಕ್ಷೆ...

ಭ್ರಷ್ಟಾಚಾರ ಬಯಲು ಮಾಡಿದ್ದ ಅಸ್ಸಾಂ ಪತ್ರಕರ್ತ ಸಾವು

 ನವದೆಹಲಿ : ಅಸ್ಸಾಂನ ಸ್ಥಳೀಯ ಚಾನೆಲ್ವೊಂದರ ಪತ್ರಕರ್ತರೊಬ್ಬರು ಅಸ್ಸಾಂನ ತಿನ್ಸುಕಿಯ ಜಿಲ್ಲೆಯಲ್ಲಿರುವ ತಮ್ಮ ಮನೆಯ ಬಳಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಏರಿಯಾದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಮತ್ತು ಅಕ್ರಮ ಚಟುವಟಿಕೆಗಳನ್ನು ಬಯಲು ಮಾಡಿದ್ದಕ್ಕಾಗಿ ಪತ್ರಕರ್ತ ಪರಾಗ್ ಭುಯಾನ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಚಾನೆಲ್ ಮುಖ್ಯಸ್ಥರು ಆರೋಪಿಸಿದ್ದರು. ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಸಿಐಡಿ ತನಿಖೆ ನಡೆಸುವಂತೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಆದೇಶಿಸಿದ್ದಾರೆ.

ಅಸ್ಸಾಂ ಪತ್ರಕರ್ತನ ಸಾವಿಗೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಎಂ ಸೋನೊವಾಲ್ ಸಿಐಡಿ ತನಿಖೆಗೆ ಆದೇಶಿಸಿದ್ದಾರೆ. ಖಾಸಗಿ ವಾಹಿನಿಯ ಪತ್ರಕರ್ತ ಪರಾಗ್ ಭುಯಾನ್ ವಾಹನಕ್ಕೆ ಬುಧವಾರ ರಾತ್ರಿ ಅವರ ಮನೆಯ ಬಳಿಯೇ ಬೇರೆ ವಾಹನ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪರಾಗ್ ಭುಯಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಇದು ಆಕಸ್ಮಿಕವ ಸಾವಲ್ಲ, ವ್ಯವಸ್ಥಿತ ಕೊಲೆ ಎಂದು ವಾಹನಿಯ ಮುಖ್ಯಸ್ಥರು ಮತ್ತು ಪರಾಗ್ ಕುಟುಂಬಸ್ಥರು ಆರೋಪಿಸಿದ್ದರು.

ಪರಾಗ್ ಭುಯಾನ್ ಅವರನ್ನು ಹೊಡೆದುರುಳಿಸಿದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಆ ವಾಹನದ ಚಾಲಕನನ್ನು ಕೂಡ ಬಂಧಿಸಲಾಗಿದೆ. ಘಟನೆ ನಡೆದು 15 ಗಂಟೆಗಳಾದ ಬಳಿಕ ಪೊಲೀಸರು ಅಪಘಾತ ಮಾಡಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆರಂಭಿಕವಾಗಿ ಪೊಲೀಸರು ನಡೆಸಿದ ತನಿಖೆ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪರಾಗ್ ಅವರು ಸ್ಥಳೀಯವಾಗಿ ನಡೆಯುತ್ತಿದ್ದ ಭ್ರಷ್ಟಾಚಾರ ಮತ್ತು ಅಕ್ರಮ ಚಟುವಟಿಕೆಗಳನ್ನು ಸೆರೆಹಿಡಿದು, ಬಯಲು ಮಾಡಿದ್ದರಿಂದ ಅವರನ್ನು ಕೊಲೆ ಮಾಡಲಾಗಿದೆ ಎಂದು ಅವರು ಕೆಲಸ ನಿರ್ವಹಿಸುತ್ತಿದ್ದ ವಾಹಿನಿಯ ಸಂಪಾದಕರು ಆರೋಪಿಸಿದ್ದಾರೆ.

ಹೀಗಾಗಿ, ಈ ಪ್ರಕರಣವನ್ನು ಸೂಕ್ತ ಸಮಯದೊಳಗೆ ತನಿಖೆ ನಡೆಸುವಂತೆ ಸಿಐಡಿಗೆ ವಹಿಸಲಾಗಿದೆ. ಮೃತಪಟ್ಟಿರುವ ಪರಾಗ್ ಅಸ್ಸಾಂನ ಟಿನ್ಸೂಕಿಯ ಜಿಲ್ಲಾ ಪ್ರೆಸ್​ ಕ್ಲಬ್​ನ ಉಪಾಧ್ಯಕ್ಷರೂ ಆಗಿದ್ದರು. ಹಾಗೇ, ಇವರು ಅಸೋಮ್ ಗಾನ ಪರಿಷದ್ ನಾಯಕ ಜಗದೀಶ್ ಭುಯಾನ್ ಅವರ ತಮ್ಮ ಕೂಡ ಹೌದು. ಹೀಗಾಗಿ, ಈ ಪ್ರಕರಣ ರಾಜ್ಯಮಟ್ಟದಲ್ಲಿ ಚರ್ಚೆಗೆ ಒಳಗಾಗಿತ್ತು.

TRENDING