Wednesday, January 27, 2021
Home ಜಿಲ್ಲೆ ಮೊದಲ ಬಾರಿಗೆ ಶಿರಾದಲ್ಲಿ ಅರಳಿದ ಕಮಲ..!

ಇದೀಗ ಬಂದ ಸುದ್ದಿ

ಮೊದಲ ಬಾರಿಗೆ ಶಿರಾದಲ್ಲಿ ಅರಳಿದ ಕಮಲ..!

ಇದೇ ಮೊದಲ ಬಾರಿಗೆ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಮೊದಲ ಬಾರಿಗೆ ತನ್ನ ಖಾತೆಯನ್ನು ತೆರೆದಿದೆ. ಮತ ಎಣಿಕೆ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದ ರಾಜೇಶ್ ಗೌಡ, ಹತ್ತು ಸಾವಿರಕ್ಕೂ ‌ಹೆಚ್ಚು ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ದ ಮಾಜಿ ಸಚಿವ ಟಿ.ಬಿ.ಜಯಚಂದ್ರ ರಾಜೇಶ್ ಗೌಡಗೆ ತೀವ್ರ ಸ್ಪರ್ಧೆ ಒಡ್ಡಿದ್ರೂ, ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಅನುಕಂಪದ ‌ಅಲೆಯಲ್ಲಿ ಗೆಲ್ಲಬಹುದು ಎಂಬ ಜೆಡಿಎಸ್ ಲೆಕ್ಕಾಚಾರ ‌ಉಲ್ಟಾ ಆಗಿದ್ದು, ಕ್ಷೇತ್ರ ಉಳಿಸಿಕೊಳ್ಳಲು ಆಗದೇ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಈ ಮೂಲಕ ಕೆಆರ್ ಪೇಟೆ ನಂತರ ಶಿರಾದಲ್ಲೂ ಕಮಲ ಅರಳಿಸುವಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಯಶಸ್ವಿ ಆಗಿದ್ದಾರೆ. ವಿಜಯೇಂದ್ರ ಚುನಾವಣಾ ತಂತ್ರಗಾರಿಕೆ ಬಿಜೆಪಿಗೆ ವರವಾಗಿ ಪರಿಣಮಿಸಿದೆ.‌ ಶಿರಾದಲ್ಲಿನ ಗೆಲುವು ಕಮಲ ಪಾಳಯದಲ್ಲಿ ಹೊಸ ಜೋಷ್ ತಂದಿದ್ದು, ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ರಹದಾರಿಯಾಗಿದೆ.

ದಿ ನ್ಯೂಸ್ ೨೪ ಕನ್ನಡ

TRENDING