ವಿಜಯಪುರ: ಕಾಂಗ್ರೆಸ್ ಮುಖಂಡ, ಭೀಮಾ ತೀರದ ರೌಡಿ ಶೀಟರ್ ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಮತ್ತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ರಾಜರತ್ನ ಕಾಲೊನಿಯ ಕಾಶೀನಾಥ ಭೀಮಪ್ಪ ತಾಳಿಕೋಟಿ (23), ಕುಂಬಾರ ಓಣಿಯ ರಾಜು ಉರ್ಫ್ ರಾಜಅಹ್ಮದ್ ರಜಾಕಸಾಬ್ ಗುನ್ನಾಪುರ (27), ಯೋಗಾಪುರ ಕಾಲೊನಿಯ ಸಿದ್ದು ಉರ್ಫ್ ಶಹಾಪೇಟಿ ಸಿದ್ದು ಗುರುಪಾದಪ್ಪ ಮೂಡಂಗಿ (ಮೂಡಲಗಿ) (24), ಸಾರವಾಡದ ಯುನುಸ್ ಅಲಿ ಹುಸೇನಸಾಬ್ ಮುಜಾವರ (24) ಬಂಧಿತ ಆರೋಪಿಗಳು.
ಬಂಧಿತರಿಂದ ಒಂದು ಮಚ್ಚು, ಎರಡು ಮೊಬೈಲ್ ಹಾಗೂ ಎರಡು ಮೋಟಾರ್ ಸೈಕಲ್ಗಳನ್ನು ವಶಡಿಸಿಕೊಳ್ಳಲಾಗಿದೆ. ಈಗಾಗಲೇ ಏಳು ಆರೋಪಿಗಳನ್ನು ಬಂಧಿಸಲಾಗಿದ್ದು, ಒಟ್ಟು 11 ಜನ ಆರೋಪಿಗಳನ್ನು ಬಂಧಿಸಿದಂತಾಗಿದೆ. ಉಳಿದ ಆರೋಪಿಗಳ ಪತ್ತೆಗಾಗಿ ತಂಡ ರಚಿಸಿ, ತಪಾಸಣೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.