Thursday, December 3, 2020
Home ಜಿಲ್ಲೆ ರಾಯಚೂರು ಆಸ್ತಿ ಬರೆಸಿಕೊಂಡು ಹೆತ್ತ ತಾಯಿಯನ್ನೇ ಮನೆಯಿಂದ ಹೊರಗಟ್ಟಿದ ಮಕ್ಕಳು

ಇದೀಗ ಬಂದ ಸುದ್ದಿ

ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ಸಮಿತಿಗೆ...

ವಾಷಿಂಗ್ಟನ್‌: ಅಮೆರಿಕದ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದ ಚಟುವಟಿಕೆಗಳ ನಿರ್ವಹಣೆಗಾಗಿ ರಚಿಸಿರುವ ನಾಲ್ವರು ಸದಸ್ಯರ 'ಅಧ್ಯಕ್ಷೀಯ ಉದ್ಘಾಟನಾ ಸಮಿತಿ(ಪಿಐಸಿ)'ಗೆ ಭಾರತೀಯ-ಅಮೆರಿಕನ್ ಮಜು ವರ್ಗೀಸ್ ಅವರನ್ನು ನೇಮಿಸಲಾಗಿದೆ.

ಗುಡ್ ನ್ಯೂಸ್ :ರಾಜ್ಯ ಸರ್ಕಾರದಿಂದ ಶೀಘ್ರವೇ ಹೊಸ...

ಬೆಂಗಳೂರು : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ 2019-20 ನೇ ಸಾಲಿನ ಹೊಸ ಪಡಿತರ ಚೀಟಿಗಳನ್ನು ಈ ತಿಂಗಳ ಮೂರನೇ ವಾರದಿಂದ ವಿತರಿಸಲು ಆಹಾರ ಇಲಾಖೆ ಸಿದ್ಧತೆ ನಡೆಸಿದೆ.

ದೆಹಲಿಯಲ್ಲಿ ಭೂ ಕಂಪನ : ರಿಕ್ಟರ್ ಮಾಪಕದಲ್ಲಿ...

ನವದೆಹಲಿ : ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮತ್ತೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 2.7 ರಷ್ಟು ದಾಖಲಾಗಿದೆ ಎಂದು ವರದಿಯಾಗಿದೆ. ದೆಹಲಿ ಘಾಜಿಯಾಬಾದ್ ನಲ್ಲಿ ಲಘು ಭೂಕಂಪನ...

ಕ್ರಿಸ್ ಮಸ್ ಹಬ್ಬದ ವಿಶೇಷವಾಗಿ 250 ಬಗೆಯ...

 ಟೋಕಿಯೋದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಲೇ ಇದೆ. ಹೀಗಾಗಿ ಜಪಾನ್​ ರಾಜಧಾನಿಯ ಸಮೀಪದಲ್ಲಿರುವ ಅಂಗಡಿಯೊಂದು ಕ್ರಿಸ್​​ ಮಸ್​ ಹಬ್ಬದ ವಿಶೇಷವಾಗಿ 250 ಬಗೆಯ ಮಾಸ್ಕ್​ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಇದರಲ್ಲಿ ಅಲಂಕಾರಿಕ ದೀಪಗಳನ್ನ...

ದೇಶದ ರೈತರ ಹೋರಾಟಕ್ಕೆ ವಿದೇಶದಿಂದಲೂ ಸಿಕ್ಕಿದೆ ಬೆಂಬಲ...

ದೇಶದಲ್ಲಿ ಕೃಷಿ ಮಸೂದೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ರೈತರಿಗೆ ವಿಶ್ವದ ಮೂಲೆ ಮೂಲೆಯಿಂದ ಬೆಂಬಲ ವ್ಯಕ್ತವಾಗುತ್ತಿದೆ. ಈಗಾಗಲೇ ಪ್ರತಿಭಟನೆ ಮಾಡುತ್ತಿದ್ದ ರೈತರಿಗೆ...

ಆಸ್ತಿ ಬರೆಸಿಕೊಂಡು ಹೆತ್ತ ತಾಯಿಯನ್ನೇ ಮನೆಯಿಂದ ಹೊರಗಟ್ಟಿದ ಮಕ್ಕಳು

ರಾಯಚೂರು (ನ. 8): ಹೆತ್ತು ಹೊತ್ತು ಸಾಕಿದ ಅಮ್ಮನನ್ನು ಆಸ್ತಿ ಬರೆಸಿಕೊಂಡು ಮನೆಯಿಂದ ಹೊರಗೆ ತಬ್ಬಿರುವ ದಾರುಣ ಘಟನೆ ನಡೆದಿದೆ. ಕೊರೋನಾ ಸಂಕಷ್ಟದ ಸಮಯದಲ್ಲಿ ಅನಾಥೆಯಾದ ವೃದ್ಧೆಯೊಬ್ಬರು ಏಳೆಂಟು ತಿಂಗಳುಕಾಲ ಊರೂರು ಸುತ್ತಿ ಕಡೆಗೆ ಸಿಂಧನೂರು ಕಾರುಣ್ಯ ವೃದ್ಧಾಶ್ರಮ ಸೇರಿದ್ದಾರೆ. ಶಾವಂತ್ರಮ್ಮ ಮಕ್ಕಳಿಂದ ಅನಾಥೆಯಾಗಿರುವ ತಾಯಿ. ಆರು ಜನ ಮಕ್ಕಳು, ಮೊಮ್ಮಕ್ಕಳು ಇದ್ದರೂ ಕೊರೋನಾ ಸಂದಿಗ್ಧತೆಯಲ್ಲಿ ಒಪ್ಪತ್ತು ಊಟಕ್ಕೆ ಅಲೆದಿದ್ದಾರೆ ಇವರು. ಆರು ಮಕ್ಕಳಲ್ಲಿ ನಾಲ್ಕು ಜನ ಸರ್ಕಾರಿ ಕೆಲಸ ಮಾಡುತ್ತಿದ್ದು, ಶಿಕ್ಷಕರು, ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಮಾಡುತ್ತಿರುವ ಇವರು ತಮಗೆ ಭವಿಷ್ಯ ರೂಪಿಸಿದ ತಾಯಿಯನ್ನು ಈ ರೀತಿ ಹೀನಾಯವಾಗಿ ನಡೆಸಿಕೊಂಡಿದ್ದಾರೆ.

ಮೂಲತಃ ಬಾಗಲಕೋಟೆಯಾವರಾದ ಶಾವಂತ್ರಮ್ಮ, ಮಕ್ಕಳು ಮನೆಯಿಂದ ಹೊರ ದಬ್ಬಿದ ಬಳಿಕ ದಿಕ್ಕು ತೋಕದೇ ಬೀದಿ ಬೀದಿ ಸುತ್ತುತ್ತಿದ್ದರು. ಹೌದು ಶಾವಂತ್ರಮ್ಮ ಮೂಲತಃ ಬಾಗಲಕೋಟೆ ಜಿಲ್ಲೆಯವರು. ಇವರಿಗೆ 6 ಜನ ಮಕ್ಕಳು ಇದ್ದಾರೆ. ಆದ್ರೆ ಆಸ್ತಿ ಎಲ್ಲಾ ಹಂಚಿಕೆ ಮಾಡಿಕೊಂಡ ಮೇಲೆ ತಾಯಿಯನ್ನ ಮನೆಯಿಂದ ಹೊರ ಹಾಕಿದ್ದಾರೆ.

ಗಂಡನನ್ನ ಕಳೆದುಕೊಂಡ ಮೇಲೆ ಮಕ್ಕಳ ಜೊತೆಯಲ್ಲೇ ವಾಸ ಮಾಡುತ್ತಿದ್ದ ಇವರಿಗೆ ಆಸ್ತಿ ಪಾಲು ಮಾಡುವಂತೆ ಮಕ್ಕಳು ಒತ್ತಾಯ ಹಾಕಿದ್ದರು. ಆಕೆಯ ಬಳಿ ಇದ್ದ 5.50 ಲಕ್ಷ ಹಣ ಕಸಿದುಕೊಂಡ ಮಕ್ಕಳು ಮನೆಯಿಂದ ಹೊರ ಹೋಗುವಂತೆ ತಿಳಿಸಿದರಂತೆ. ಮನೆ ಬಿಟ್ಟು ಹೋಗಲು ಶಾವಂತ್ರಮ್ಮ ಒಪ್ಪದಿದ್ದಾಗ, ಬಟ್ಟೆ ಸುಟ್ಟು ಹಾಕುವುದಾಗಿ ಹೆದರಿಸಿ, ಅವರು ಮಲಗುತ್ತಿದ್ದ ಹಾಸಿಗೆಯನ್ನು ಹೊರಗೆ ಎಸೆದು ಬಲವಂತದಿಂದ ಮನೆಯಿಂದ ತೆರಳುವಂತೆ ಮಾಡಿದರು ಎಂದು ಘಟನೆ ನೆನೆಸಿಕೊಂಡು ಕಣ್ಣೀರು ಹಾಕಿದರು.

ಏಳು ತಿಂಗಳ ಹಿಂದೆ ಮನೆ ಬಿಟ್ಟು ಬಂದಿದ್ದ ಶಾವಂತ್ರಮ್ಮ ಹುಬ್ಬಳ್ಳಿಯಲ್ಲಿ ಕೆಲ ದಿನ ಇದ್ದು ನಂತರ ಹುಲಿಗಿಗೆ ಬಂದು ಬಸ್ ನಿಲ್ದಾಣ ಹಾಗೂ ರೈಲ್ವೇ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದರು. ಹುಲಗಿಯ ಸ್ಥಳೀಯರು ಹಾಗೂ ಪೋಲಿಸರು ಕಾರುಣ್ಯ ವೃದ್ದಾಶ್ರಮಕ್ಕೆ ಕರೆ ಮಾಡಿ ಮಾಹಿತಿ ನೀಡಿದ ಕೂಡಲೇ ಕಾರುಣ್ಯ ವೃದ್ಧಾಶ್ರಮದವರು ತಾಯಿಯನ್ನ ತಮ್ಮ ಆಶ್ರಮಕ್ಕೆ ಕರೆದುಕೊಂಡು ಹೋಗಿದ್ದಾರೆ. ವಿದ್ಯಾವಂತರಾಗಿರುವ ಮಕ್ಕಳೆ ಈ ರೀತಿ ಆಸ್ತಿಗಾಗಿ ಹೆತ್ತ ತಾಯಿಯನ್ನು ಆಚೆ ಹಾಕಿರುವುದು ನಿಜಕ್ಕೂ ಅಮಾನವೀಯ ವರ್ತನೆಯಾಗಿದ್ದು, ಇಂತಹವರಿಗೆ ತಕ್ಕ ಶಿಕ್ಷೆಯಾಗಬೇಕು.

TRENDING