Monday, January 18, 2021
Home ಜಿಲ್ಲೆ ಡಿಸಿಪಿ ಸೀಮಾ ಲಾಟ್ಕರ್​​ಗೆ ಶೋಕಾಸ್ ನೋಟಿಸ್

ಇದೀಗ ಬಂದ ಸುದ್ದಿ

ಡಿಸಿಪಿ ಸೀಮಾ ಲಾಟ್ಕರ್​​ಗೆ ಶೋಕಾಸ್ ನೋಟಿಸ್

ಬೆಳಗಾವಿ: ಕೋರ್ಟ್ ತಡೆಯಾಜ್ಞೆ ಆದೇಶ ಉಲ್ಲಂಘಿಸಿದ್ದ ಆರೋಪದಡಿ ನಿಕಟಪೂರ್ವ ಡಿಸಿಪಿ ಸೀಮಾ ಲಾಟ್ಕರ್ ಅವರಿಗೆ ಬೆಳಗಾವಿಯ 10ನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.

ನಗರದ ಗಾಂಧಿನಗರದ‌ ನಿವಾಸಿ ಮಲ್ಲಿಕ್​ ಜಾನ್ ಪಠಾಣ್ ಹಾಗೂ ಸಂಬಂಧಿಕರಿಗೆ ಸೇರಿದ ಆಸ್ತಿ ವ್ಯಾಜ್ಯ ಸಂಬಂಧ ಸಿಆರ್​ಪಿಸಿ ಕಲಂ 107ರಡಿ ಡಿಸಿಪಿ ಆಗಿದ್ದ ಸೀಮಾ ಲಾಟ್ಕರ್ ವಿಚಾರಣೆ ನಡೆಸಿದ್ದರು. ಪ್ರಕರಣ ಸಂಬಂಧ ಡಿಸಿಪಿ ಸೀಮಾ ಲಾಟ್ಕರ್ ಅವರು ಮಲ್ಲಿಕ್​​ ಜಾನ್ ಅವರಿಗೆ ಕಳೆದ ಜೂನ್ 6 ರಂದು ನೋಟಿಸ್ ಜಾರಿಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಮಲ್ಲಿಕ್​ ಜಾನ್ ಪಠಾಣ್ ನ್ಯಾಯಾಲಯದ ಮೊರೆ ಹೋಗಿದ್ದರು.

ಸೀಮಾ ಲಾಟ್ಕರ್ ಹೊರಡಿಸಿದ್ದ ನೋಟಿಸ್​​ಗೆ ಬೆಳಗಾವಿ ನ್ಯಾಯಾಲಯ ಜೂನ್ 29 ಕ್ಕೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿತ್ತು. ಆದೇಶ ಪ್ರತಿಯನ್ನು ಮಲ್ಲಿಕ್​ ಜಾನ್ ಪಠಾಣ್ ಕಮೀಷನರ್ ಕಚೇರಿಗೆ ಸಲ್ಲಿಸಿದ್ದರು. ಅಕ್ಟೋಬರ್ 9 ರಂದು ಇದೇ ಪ್ರಕರಣದಡಿ ವಿಚಾರಣೆ ನಡೆಸಿದ್ದ ಸೀಮಾ ಲಾಟ್ಕರ್ ಮಲ್ಲಿಕ್​ ಜಾನ್ ಗೆ ಮತ್ತೆ ನೋಟಿಸ್ ನೀಡಿದ್ದಾರೆ.

ದಿ ನ್ಯೂಸ್24 ಕನ್ನಡ

TRENDING