Friday, January 15, 2021
Home ಜಿಲ್ಲೆ ಬಾಗಲಕೋಟೆ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ ಫಲಿತಾಂಶ

ಇದೀಗ ಬಂದ ಸುದ್ದಿ

ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ ಫಲಿತಾಂಶ

ಬಾಗಲಕೋಟೆ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಇತರೆ ಸಹಕಾರಿ ಸಂಘಗಳ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿಧಾನಪರಿಷತ್ ಸದಸ್ಯ ಹನಮಂತ ನಿರಾಣಿ 230 ಮತಗಳಿಂದ ಪುನರ್ ಆಯ್ಕೆಯಾಗಿದ್ದಾರೆ ರಾಜಕೀಯ ಜೀವನದಲ್ಲಿ ಇವರ ವಿಶೇಷತೆ ಏನಂದ್ರೆ ಇವರು ಸ್ಪರ್ಧಿಸಿದ ಪ್ರತಿಯೊಂದು ಚುನಾವಣೆಯಲ್ಲಿ ದಾಖಲೆಗಳನ್ನು ಬರೀತಾರೆ 2010ರಲ್ಲಿ ಬೀಳಗಿ ತಾಲ್ಲೂಕಿನ ಸುನಗ ದಿಂದ ಜಿಲ್ಲಾ ಪಂಚಾಯಿತಿಗೆ ಮೊದಲ ಬಾರಿಗೆ ಸ್ಪರ್ಧಿಸಿದ್ದು ಅವರು 4000 ಮತಗಳ ಅಂತರದ ಗೆಲುವು ಸಾಧಿಸಿದ್ರು ಅಲ್ಲಿಂದ ಹಿಡಿದು ಇಲ್ಲಿಯವರೆಗೆ ರಾಜಕೀಯ ರಂಗದಲ್ಲಿ ಸೋಲನ್ನು ಕಾಣದ ಅಜಾತಶತ್ರು ವಿಧಾನಪರಿಷತ್ ಸದಸ್ಯ ಎಚ್ ಆರ್ ನಿರಾಣಿ ಅವರು 2016 ರಲ್ಲಿ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ವಾಯುವ್ಯ ಪದವೀಧರ ಮತಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್ ಆರ್ ನಿರಾಣಿ ಅವರು 25000 ಮತಗಳಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಪರಿಷತ್ ಚುನಾವಣೆಯಲ್ಲಿ ದಾಖಲೆ ಮಾಡಿದ್ದರು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಚ್ ಆರ್ ನಿರಾಣಿ ಅವರಿಗೆ ಕಾರ್ಯಕರ್ತರು ಹೂಗುಚ್ಛ ನೀಡಿ ಸಂಭ್ರಮಿಸಿದರು

ವರದಿ: ಎಚ್ ಆರ್ ಕೋಟಿ

ಬಾಗಲಕೋಟೆ

TRENDING