ಗದಗ : ಮಲಪ್ರಭಾ ನದಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿ ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಹೊಳೆ ಆಲೂರ ಗ್ರಾಮದ ಬಳಿ ನಡೆದಿದೆ..
ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರ ಎನ್ನುವ ಗ್ರಾಮದಲ್ಲಿ ನಿನ್ನೆ ಏಕಾಏಕಿ ಕಾಣಿಸಿಕೊಂಡ ಬೃಹತ್ ಮೊಸಳೆ ಕಂಡು ಗ್ರಾಮಸ್ಥರು ಕಂಗಾಲಾಗುದ್ದಾರೆ.
ಇಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.. ಆದರೆ
ಮುಂಜಾನೆಯಿಂದಲೂ ಎಷ್ಟು ಹುಡುಕಾಟ ನಡೆಸಿದರೂ ಮೊಸಳೆ ಪತ್ತೆಯಾಗಿಲ್ಲ..
ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮ ಪಂಚಾಯತ್ ಸಿಬ್ಬಂದಿ ಗ್ರಾಮಸ್ಥರಿಂದ ಪತ್ತೆ ಕಾರ್ಯ ಮುಂದುವರೆದಿದೆ.
ಮತ್ತೊಮ್ಮೆ ನೊಸಳೆ ಪತ್ತೆಯಾದ್ರೆ ಖಂಡಿತ ಅದನ್ನು ಹಿಡಿದೇ ಹಿಡಿಯುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ಹೊಳೆ ಆಲೂರು ಗ್ರಾಮದಲ್ಲಿ ಆತಂಕದ ವಾತಾವರಣ ಇನ್ನೂ ಮುಂದುವರೆದಿದೆ.. ಇನ್ನು ಈ ಮೊಸಳೆ
ಪ್ರವಾಹದ ಅಬ್ಬರಕ್ಕೆ ಬಂದಿರಬಹುದು ಎಂವ ಶಂಕೆ ವ್ಯಕ್ತವಾಗಿದೆ.