Monday, January 18, 2021
Home ರಾಜ್ಯ ಅನ್ಯಧರ್ಮೀಯ ವಿವಾಹ ವಿರೋಧಿ ಕಾನೂನಿಗೆ ಸರ್ಕಾರದ ಸಿದ್ದತೆ : ಸಚಿವ ಸಿ.ಟಿ. ರವಿ

ಇದೀಗ ಬಂದ ಸುದ್ದಿ

ಅನ್ಯಧರ್ಮೀಯ ವಿವಾಹ ವಿರೋಧಿ ಕಾನೂನಿಗೆ ಸರ್ಕಾರದ ಸಿದ್ದತೆ : ಸಚಿವ ಸಿ.ಟಿ. ರವಿ

ಹರಿಯಾಣ, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದ ಬಳಿಕ ಇದೀಗ ಕರ್ನಾಟಕ ಕೂಡ ಅನ್ಯಧರ್ಮೀಯ ವಿವಾಹ ವಿರೋಧಿ ಕಾನೂನನ್ನ ತರಲು ಮುಂದಾಗಿದೆ.

ಈ ವಿಚಾರವಾಗಿ ಮಾತನಾಡಿದ ಸಚಿವ ಸಿ.ಟಿ. ರವಿ, ವಿವಾಹ ಉದ್ದೇಶದಿಂದ ಮತಾಂತರವಾಗುವುದನ್ನು ನಿಷೇಧಿಸುವ ಕುರಿತು ಕಾನೂನು ತರಲು ಚಿಂತನೆ ನಡೆಸಿದ್ದೇವೆ . ರಾಜ್ಯದ ಮಹಿಳೆಯರ ಘನತೆಗೆ ಧಕ್ಕೆ ಬಂದರೆ ಅದನ್ನ ನಮ್ಮ ಸರ್ಕಾರ ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಅನ್ಯಧರ್ಮೀಯ ವಿವಾಹ ಉದ್ದೇಶಕ್ಕೆ ಧರ್ಮಾಂತರ ಮಾಡುವುದನ್ನ ಒಪ್ಪಲಾಗುವುದಿಲ್ಲೆಂದು ಅಲಹಾಬಾದ್​ ಕೋ ರ್ಟ್​ ಆದೇಶ ಹೊರಡಿಸಿದ ಬೆನ್ನಲ್ಲೇ ಬಿಜೆಪಿ ಆಡಳಿತವಿರುವ ರಾಜ್ಯಗಳು ಅಂತರ್​ ಧರ್ಮೀಯ ವಿವಾಹ ವಿರುದ್ಧ ಕಾನೂನು ಜಾರಿ ಮಾಡಲು ಮುಂದಾಗಿವೆ.

TRENDING