Sunday, June 13, 2021
Homeಅಂತರ್ ರಾಷ್ಟ್ರೀಯಭಾರತ ಕ್ರಿಕೆಟ್ ತಂಡದ ನಾಯಕ ಕೊಹ್ಲಿಗೆ 32ನೇ ಜನ್ಮದಿನದ ಸಂಭ್ರಮ

ಇದೀಗ ಬಂದ ಸುದ್ದಿ

ಭಾರತ ಕ್ರಿಕೆಟ್ ತಂಡದ ನಾಯಕ ಕೊಹ್ಲಿಗೆ 32ನೇ ಜನ್ಮದಿನದ ಸಂಭ್ರಮ

ಅಬುಧಾಬಿ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಗುರುವಾರ (ನವೆಂಬರ್‌ 5) ತಮ್ಮ 32ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಟೀಮ್‌ ಇಂಡಿಯಾ ಪರವಾಗಲಿ ಅಥವಾ ಇಂಡಿಯನ್ ಪ್ರೀಮಿಯರ್‌ ಲೀಗ್‌ ಆಗಲಿ ಬ್ಯಾಟ್‌ ಹಿಡಿದು ಅಂಗಣಕ್ಕೆ ಇಳಿದರೆ ಅಪ್ಪಟ ರನ್‌ ಮಷೀನ್‌ನಂತೆ ಬ್ಯಾಟ್‌ ಬೀಸುವ ವಿರಾಟ್‌, ಇದೀಗ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ ಆಗಿಯೂ ಹೊರಹೊಮ್ಮಿದ್ದಾರೆ.

ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಬಳಿಕ ಟೀಮ್‌ ಇಂಡಿಯಾ ಕಂಡ ಬಹುದೊಡ್ಡ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ಎಂದರೆ ತಪ್ಪಾಗಲಾರದು. ಅಂದಹಾಗೆ ಸಚಿನ್‌ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ಶತಕಗಳ ಶತಕದ ದಾಖಲೆಯನ್ನು ಮುರಿಯುವ ಸಾಮರ್ಥ್ಯ ಇರುವ ಬ್ಯಾಟ್ಸ್‌ಮನ್‌ ಎಂದೂ ಗುರುತಿಸಿಕೊಂಡಿದ್ದಾರೆ.

ಕ್ಲಾಸಿಕ್‌ ಹೊಡೆತಗಳಿಗೆ ಹೆಸರುವಾಸಿಯಾದ ವಿರಾಟ್‌, ರನ್‌ ಗಳಿಕೆಗೆ ಸಿಕ್ಸರ್‌ಗಳಿಗಿಂತಲೂ ಫೋರ್‌ಗಳ ಮೇಲೆ ಹೆಚ್ಚು ವಿಶ್ವಾಸ ಇಡುವಂತಹ ಬ್ಯಾಟ್ಸ್‌ಮನ್‌. ಅವರ ಕವರ್‌ ಡ್ರೈವ್‌ ಮತ್ತು ಫ್ಲಿಕ್‌ ಹೊಡೆತಗಳನ್ನು ನೋಡುವುದು ಕ್ರಿಕೆಟ್‌ ಪ್ರಿಯರ ಕಣ್ಣಿಗೆ ಹಬ್ಬವೇ ಸರಿ.

 ದಶಕ ಕಾಲ ಕ್ರಿಕೆಟ್‌ ಪ್ರಿಯರನ್ನು ಮನಮೋಹಕ ಬ್ಯಾಟಿಂಗ್‌ ಪ್ರದರ್ಶನಗಳ ಮೂಲಕ ರಂಜಿಸಿರುವ ವಿರಾಟ್‌ ಕೊಹ್ಲಿ ಅವರ 32ನೇ ಹುಟ್ಟುಹಬ್ಬದ ದಿನದಂದು ಅವರ ಸಾಧನೆಯ ಪಟ್ಟಿಯಲ್ಲಿನ ಕೆಲ ಪ್ರಮುಕ ಹೈಲೈಟ್‌ಗಳ ಝಲಕ್‌ ಇಲ್ಲಿ ನೀಡಲಾಗಿದೆ.

2008ರಲ್ಲಿ ಟೀಮ್‌ ಇಂಡಿಯಾಗೆ ಪದಾರ್ಪಣೆ ಮಾಡಿದ ವಿರಾಟ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಈಗಾಗಗಲೇ 86 ಪಂದ್ಯಗಳಿಂದ 7,240 ರನ್‌ಗಳನ್ನು ಬಾರಿಸಿ 53.62ರ ಬ್ಯಾಟಿಂಗ್‌ ಸರಾಸರಿ ಹೊಂದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಎನಿಸಿಕೊಂಡಿದ್ದು, 11,867 ರನ್‌ಗಳನ್ನು ದಾಖಲಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲೂ ಅತಿ ಹೆಚ್ಚು ರನ್‌ (2,794) ಬಾರಿಸಿದ ಕೀರ್ತಿ ಕಿಂಗ್‌ ಕೊಹ್ಲಿ ಅವರದ್ದು. ಟೆಸ್ಟ್‌, ಒಡಿಐ ಮತ್ತು ಟಿ20 ಮೂರೂ ಮಾದರಿಗಳಲ್ಲಿ (53.62 ಟೆಸ್ಟ್‌, 59.33 ಒಡಿಐ, 50.80 ಟಿ20-ಐ) 50ಕ್ಕೂ ಹೆಚ್ಚಿನ ಬ್ಯಾಟಿಂಗ್‌ ಸರಾಸರಿ ಹೊಂದಿರುವ ವಿಶ್ವದ ಏಕಮಾತ್ರ ಬ್ಯಾಟ್ಸ್‌ಮನ್‌ ಆಗಿದ್ದಾರೆ.

ಅಂತಾರಾಷ್ಟ್ರೀಯ ಟಿ20ಯಲ್ಲಿ ಅತ್ಯಧಿಕ ರನ್ಸ್ಕೋರರ್
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ ಗಳಿಸಿದ ದಾಖಲೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೆಸರಲ್ಲಿದೆ. ಅಷ್ಟೇ ಅಲ್ಲದೆ ಸಮಗ್ರ ಟಿ20 ಕ್ರಿಕೆಟ್‌ನಲ್ಲೂ ಕೊಹ್ಲಿ ಅತಿ ಹೆಚ್ಚು ರನ್‌ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಒಟ್ಟು 295 ಪಂದ್ಯಗಳಿಂದ 41.41ರ ಬ್ಯಾಟಿಂಗ್‌ ಸರಾಸರಿಯಲ್ಲಿ 9,360 ರನ್‌ಗಳನ್ನು ಗಳಿಸಿದ್ದಾರೆ. ಐಪಿಎಲ್‌ ಒಂದರಲ್ಲೇ 5 ಶತಕಗಳ ಸಹಿತ 5,872 ರನ್‌ಗಳನ್ನು

ಟೆಸ್ಟ್ಕ್ರಿಕೆಟ್ನಲ್ಲಿ ಭಾರತದ ಯಶಸ್ವಿ ನಾಯಕ
ಭಾರತ ತಂಡ 2014-15ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ಎಂಎಸ್‌ ಧೋನಿ ಹಠಾತ್‌ ನಿವೃತ್ತಿ ಘೋಷಿದಾಗ ವಿರಾಟ್‌ ಕೊಹ್ಲಿ ನಾಯಕತ್ವ ಪಡೆದುಕೊಂಡಿದ್ದರು. ನಂತರ ಭಾರತ ತಂಡವನ್ನು ಯಶಸ್ಸಿನ ಪಥದಲ್ಲಿ ನಡೆಯುವಂತೆ ಮಾಡಿರುವ ಕೊಹ್ಲಿ, 33 ಪಂದ್ಯಗಳಲ್ಲಿ ಗೆಲುವು ತಂದುಕೊಡುವ ಮೂಲಕ ಭಾರತದ ಅತ್ಯಂತ ಯಶಸ್ವಿ ಟೆಸ್ಟ್‌ ನಾಯಕ ಎನಿಸಿಕೊಂಡಿದ್ದಾರೆ. ಒಡಿಐ ಮತ್ತು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲೂ ಕ್ರಮವಾಗಿ 62 ಮತ್ತು 22 ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img