Wednesday, December 2, 2020
Home ಅಂತರ್ ರಾಜ್ಯ ಉತ್ತರ ಪ್ರದೇಶದ ಅಕ್ರಮ ಪಟಾಕಿ ದಾಸ್ತಾನಿನಲ್ಲಿ ಭಾರೀ ಸ್ಫೋಟ : ನಾಲ್ವರ ಸಾವು

ಇದೀಗ ಬಂದ ಸುದ್ದಿ

ಎರಡು ದಿನಗಳ ಬಳಿಕ ಮತ್ತೆ ಪೆಟ್ರೋಲ್‌, ಡೀಸೆಲ್‌...

ಬೆಂಗಳೂರು: ಪೆಟ್ರೋಲ್‌, ಡೀಸೆಲ್‌ ದರ ಏರಿಕೆಗೆ ಎರಡು ದಿನಗಳವರೆಗೆ ಬಿಡುವು ನೀಡಿದ್ದ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಬುಧವಾರ ಮತ್ತೆ ಏರಿಕೆ ಮಾಡಿವೆ. ಬೆಂಗಳೂರಿನಲ್ಲಿ ಪ್ರತಿ...

ಮೆಕ್ಕೆಜೋಳ ಯಂತ್ರಕ್ಕೆ ವೇಲ್ ಸಿಲುಕಿ ಬಾಲಕಿ ದಾರುಣ...

ತುಮಕೂರು: ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಸಮೀಪ ಮೆಕ್ಕೆಜೋಳ ತೆನೆ ಬಿಡಿಸುವ ಯಂತ್ರಕ್ಕೆ ವೇಲ್ ಸಿಲುಕಿದ ಪರಿಣಾಮ ಬಾಲಕಿ ಮೃತಪಟ್ಟ ಘಟನೆ ನಡೆದಿದೆ. 14 ವರ್ಷದ ರಮಾಬಾಯಿ ಮೃತಪಟ್ಟ...

ʼRRBʼಯ 1.4 ಲಕ್ಷ ಹುದ್ದೆಗಳಿಗೆ ಹರಿದು ಬಂದಿವೆ...

ರೈಲ್ವೆ ನೇಮಕಾತಿ ಮಂಡಳಿಯ ಬಹುನಿರೀಕ್ಷಿತ ತಾಂತ್ರಿಕೇತರ ಜನಪ್ರಿಯ ವರ್ಗಗಳ (ಎನ್ ಟಿಪಿಸಿ) ಪರೀಕ್ಷೆ, ಗ್ರೂಪ್ ಡಿ, ಮತ್ತು ಪ್ರತ್ಯೇಕ ವಿಭಾಗ ಪರೀಕ್ಷೆಗಳು ಡಿಸೆಂಬರ್ 15ರಿಂದ ಆರಂಭವಾಗಲಿವೆ. ಆದ್ರೆ, ಈ...

ಮಂಗಳೂರು-ಬೆಂಗಳೂರು ವಯಾ ಶ್ರವಣಬೆಳಗೊಳ ರೈಲಿಗೆ ಮತ್ತೆ ಚಾಲನೆ

ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಕುಣಿಗಲ್, ಶ್ರವಣಬೆಳಗೊಳ ಮಾರ್ಗವಾಗಿ ಬೆಂಗಳೂರಿಗೆ ರೈಲು ಸಂಚಾರ ಮತ್ತೆ ಆರಂಭವಾಗಿದೆ. ವಾರದಲ್ಲಿ ನಾಲ್ಕು ದಿನ ಈ ರೈಲು ಸಂಚರಿಸಲಿದ್ದು, ಇದರ ಪ್ರಯೋಜನವನ್ನು ನಾಗರಿಕರು ಪಡೆಯಬೇಕೆಂದು...

ಎಂಜಿ ರೋಡ್, ಬ್ರಿಗೇಡ್ ರೋಡ್ನಲ್ಲಿ ಈ ಬಾರಿ...

 ಬೆಂಗಳೂರು: ಕೋವಿಡ್ ಎರಡನೇ ಅಲೆ ಭೀತಿ ಇರುವುದರಿಂದ ರಾಜಧಾನಿಯ ರಸ್ತೆ, ಬಾರ್‌ ಕ್ಲಬ್‌ಗಳಲ್ಲಿ ಹೊಸವರ್ಷ ಸಂಭ್ರಮಾಚರಣೆ ನಿಷೇಧಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಮನವಿ ಮಾಡಿದೆ.

ಉತ್ತರ ಪ್ರದೇಶದ ಅಕ್ರಮ ಪಟಾಕಿ ದಾಸ್ತಾನಿನಲ್ಲಿ ಭಾರೀ ಸ್ಫೋಟ : ನಾಲ್ವರ ಸಾವು

 ಗೋರಖ್‍ಪುರ್, ನ.4- ಉತ್ತರ ಪ್ರದೇಶದ ಖುಷಿ ನಗರ ಜಿಲ್ಲೆಯ ಮನೆಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಪಟಾಕಿಗಳು ಸಿಡಿದು ನಾಲ್ವರು ಮೃತಪಟ್ಟು 12 ಮಂದಿ ತೀವ್ರ ಗಾಯಗೊಂಡಿದ್ದಾರೆ. ಖುಷಿ ನಗರ ಜಿಲ್ಲೆಯ ಕಫ್ತಾನ್‍ಗಂಜ್ ಪ್ರದೇಶದ ನ್ಯಾರೋ ಲೈನ್ ಜನಸಂದಣಿ ಸ್ಥಳದಲ್ಲಿನ ಮನೆಯೊಂದರಲ್ಲಿ ಪಟಾಕಿಗಳನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು.

ಬೆಂಕಿ ತಗುಲಿ ಪಟಾಕಿಗಳು ಸ್ಫೋಟಗೊಂಡು ಮನೆಯಲ್ಲಿದ್ದ ಎಲ್‍ಪಿಜಿ ಸಿಲಿಂಡರ್ ಕೂಡ ಆಸ್ಫೋಟವಾಯಿತು. ಇದರಿಂದ ಜಾವೇದ್ ಎಂಬುವವರ ಮನೆ ಮತ್ತು ಅಕ್ಕಪಕ್ಕದ ಮನೆಗಳು ಹಾನಿಗೀಡಾಗಿದ್ದು, ನಾಲ್ವರು ಮೃತಪಟ್ಟು 12ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿರುವಂತೆ ಉತ್ತರ ಪ್ರದೇಶದ ವಿವಿಧೆಡೆ ಪಟಾಕಿಗಳು, ಬಾಣ-ಬಿರುಸುಗಳು ಮತ್ತು ಸಿಡಿಮದ್ದುಗಳನ್ನು ಅಕ್ರಮವಾಗಿ ಸಂಗ್ರಹಿಸುತ್ತಿರುವ ಅಪಾಯಕಾರಿ ವಿದ್ಯಮಾನಗಳು ಹೆಚ್ಚಾಗುತ್ತಿವೆ. ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿ ಅಕ್ರಮ ಪಟಾಕಿ ತಯಾರಿಕಾ ಘಟಕಗಳಲ್ಲಿ ಸ್ಫೋಟ ಸಂಭವಿಸಿ ಅನೇಕರು ಮೃತಪಟ್ಟಿದ್ದಾರೆ.

TRENDING