Thursday, December 3, 2020
Home ಜಿಲ್ಲೆ ಜಿಲ್ಲಾ ಸುದ್ದಿ ಶೀಘ್ರವೇ ಅರವಿಂದ ಪಾಟೀಲ ಬಿಜೆಪಿಗೆ: ರಮೇಶ ಜಾರಕಿಹೊಳಿ

ಇದೀಗ ಬಂದ ಸುದ್ದಿ

ಜನವರಿಯಿಂದ 10,12 ನೇ ತರಗತಿ ಆರಂಭಿಸಲು ಶಿಫಾರಸು

ಬೆಂಗಳೂರು: ಜನವರಿಯಿಂದ 10 ಮತ್ತು 12 ನೇ ತರಗತಿ ಆರಂಭಿಸಲು ಶಿಫಾರಸು ಮಾಡಲಾಗಿದೆ. ಕೋವಿಡ್ ತಾಂತ್ರಿಕ ಸಮಿತಿ, ರಾಜ್ಯದಲ್ಲಿ ಮುಂದಿನ ಜನವರಿ ಅಥವಾ ಫೆಬ್ರವರಿಯಲ್ಲಿ ಕೊರೋನಾ ಎರಡನೆಯ ಅಲೆ ಶುರುವಾಗುವ ಸಾಧ್ಯತೆಯಿದೆ...

ಅಧಿಕಾರಿಗಳ ನೇಮಕ,ವರ್ಗಾವಣೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇರಬೇಕು: ಹೈಕೋರ್ಟ್‌

 ಬೆಂಗಳೂರು: ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿರಬೇಕು ಎಂಬುದನ್ನು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೆನಪಿಸಿದೆ. ಕೆಪಿಟಿಸಿಎಲ್‌ ನಿರ್ದೇಶಕರನ್ನಾಗಿ ನೇಮಕ ಮಾಡಿದ ಎರಡು ವರ್ಷದೊಳಗೇ ವರ್ಗಾವಣೆ ಮಾಡಿದ ಆದೇಶ...

ಪಾಕಿಸ್ತಾನ್ ಕ್ರಿಕೆಟ್ ತಂಡದ ಮತ್ತೊಬ್ಬ ಸದಸ್ಯನಿಗೆ ಕೊರೊನಾ

ವೆಲ್ಲಿಂಗ್ಟನ್‌ : 'ಪ್ರವಾಸಿ ಪಾಕಿಸ್ತಾನ ಕ್ರಿಕೆಟ್ ತಂಡದ ಮತ್ತೊಬ್ಬ ಸದಸ್ಯನಲ್ಲಿ ಕೋವಿಡ್‌-19 ದೃಢಪಟ್ಟಿದೆ. ಇದರಿಂದಾಗಿ ಒಟ್ಟು ಪ್ರಕರಣಗಳ ಸಂಖ್ಯೆ ಎಂಟಕ್ಕೇರಿದೆ' ಎಂದು ನ್ಯೂಜಿಲೆಂಡ್ ಸರ್ಕಾರ ಬುಧವಾರ ಹೇಳಿದೆ.

`RRBʼಯ 1.4 ಲಕ್ಷ ಹುದ್ದೆಗಳ ನೇಮಕಾತಿ ಪರೀಕ್ಷೆಗೆ...

 ನವದೆಹಲಿ :‌ ರೈಲ್ವೆ ನೇಮಕಾತಿ ಮಂಡಳಿಯ ಬಹುನಿರೀಕ್ಷಿತ ತಾಂತ್ರಿಕೇತರ ಜನಪ್ರಿಯ ವರ್ಗಗಳ (ಎನ್ ಟಿಪಿಸಿ) ಪರೀಕ್ಷೆ, ಗ್ರೂಪ್ ಡಿ, ಮತ್ತು ಪ್ರತ್ಯೇಕ ವಿಭಾಗ ಪರೀಕ್ಷೆಗಳು ಡಿಸೆಂಬರ್ 15ರಿಂದ ಆರಂಭವಾಗಲಿವೆ. ಇನ್ನು...

ಕೇಂದ್ರ ಸರ್ಕಾರದಿಂದ ರೈತ ಸಮುದಾಯಕ್ಕೆ ಮಹತ್ವದ ಮಾಹಿತಿ

ಪಿಎಂ ಕಿಸಾನ್ ಸಮನ್ ನಿಧಿ ಯೋಜನೆಯ ಹೊಸ ಪಟ್ಟಿಯನ್ನ ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದೆ. ಹೊಸ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ...

ಶೀಘ್ರವೇ ಅರವಿಂದ ಪಾಟೀಲ ಬಿಜೆಪಿಗೆ: ರಮೇಶ ಜಾರಕಿಹೊಳಿ

ಬೆಳಗಾವಿ: ‘ಪಕ್ಷೇತರವಾಗಿ ಗೆದ್ದಿದ್ದ ಖಾನಾಪುರದ ಮಾಜಿ ಶಾಸಕ ಅರವಿಂದ ಪಾಟೀಲ ಈಗ ಎಂಇಎಸ್‌ (ಮಹಾರಾಷ್ಟ್ರ ಏಕೀಕರಣ ಸಮಿತಿ) ಜೊತೆ ಗುರುತಿಸಿಕೊಂಡಿಲ್ಲ. ಅವರನ್ನು ಶೀಘ್ರವೇ ಬಿಜೆಪಿಗೆ ಸೇರಿಸಿಕೊಳ್ಳುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

ಇಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಖಾನಾಪುರ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ ಸ್ಪರ್ಧೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಬೆಂಬಲವಾಗಿ ನಿಂತಿಲ್ಲ’ ಎಂದರು.

‘ಎಂಇಎಸ್‌ ಜೊತೆ ಗುರುತಿಸಿಕೊಂಡು ಕರಾಳ ದಿನಾಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದ ಅರವಿಂದ ಪಾಟೀಲರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಸರಿಯೇ’ ಎಂಬ ಪ್ರಶ್ನೆಗೆ, ‘ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೆ. ಈಗ ಬಿಜೆಪಿಯಲ್ಲಿದ್ದೇನೆ. ಬಿಜೆಪಿ ಸಿದ್ಧಾಂತ ಪಾಲಿಸುತ್ತಿದ್ದೇನೆ. ಅವರೂ ಅಳವಡಿಸಿಕೊಳ್ಳುತ್ತಾರೆ’ ಎಂದರು.

‘ಎಂಇಎಸ್ ಕರಾಳ ದಿನಾಚರಣೆ ಬೆಂಬಲಿಸಿ ಕಪ್ಪುಪಟ್ಟ ಧರಿಸಿ ಕಾರ್ಯನಿರ್ವಹಿಸುತ್ತೇವೆ’ ಎಂಬ ಮಹಾರಾಷ್ಟ್ರ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅಂತಹ ಹೇಳಿಕೆಗಳಿಗೆ ಮಹತ್ವ ಕೊಡುವ ಅಗತ್ಯವಿಲ್ಲ. ಒತ್ತು ಕೊಟ್ಟು ದೊಡ್ಡದು ಮಾಡಬಾರದು. ಶಿವಸೇನೆ ಸೇರಿದಂತೆ ಕೆಲವೊಂದು ಸಂಘಟನೆಗಳ ಕಾರ್ಯಸೂಚಿಯೇ ಕರ್ನಾಟಕದ ವಿರುದ್ಧ ಇರುವುದಾಗಿದೆ. ಅವರ ರಾಜ್ಯದ ಬಗ್ಗೆ ಅವರು ಮಾತನಾಡುತ್ತಾರೆ. ನಮ್ಮ ರಾಜ್ಯದ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದರು.

‘ಎಂಇಎಸ್‌ನವರು ಪ್ರತಿಭಟನೆ ನಡೆಸುತ್ತಾರೆ, ಹೋಗುತ್ತಾರೆ. ಅದಕ್ಕೆಲ್ಲ ಮಹತ್ವ ಕೊಡಬಾರದು. ಕನ್ನಡಿಗರ ಹಿತ ಬಲಿ ಕೊಡುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

‘ಮಹಾದಾಯಿ ವಿಚಾರವಾಗಿ ಗೋವಾ ನಿರ್ಧಾರಕ್ಕೆ ಬದ್ಧ’ ಎಂದು ಕಾಂಗ್ರೆಸ್ ಮುಖಂಡ ದಿನೇಶ್‌ ಗುಂಡೂರಾವ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಕಾಂಗ್ರೆಸ್ ಪಕ್ಷದವರು ನಿಲುವನ್ನು ಸ್ಪಷ್ಟಪಡಿಸಲಿ’ ಎಂದರು.

TRENDING