Thursday, January 21, 2021
Home ಜಿಲ್ಲೆ ಹಿಂದೂ ಧರ್ಮದ ಬುನಾದಿ ಮಹರ್ಷಿ ವಾಲ್ಮೀಕಿ : ಹೂಗಾರ ಸಮಾಜ ಅಭಿಮತ

ಇದೀಗ ಬಂದ ಸುದ್ದಿ

ಹಿಂದೂ ಧರ್ಮದ ಬುನಾದಿ ಮಹರ್ಷಿ ವಾಲ್ಮೀಕಿ : ಹೂಗಾರ ಸಮಾಜ ಅಭಿಮತ

ಲಿಂಗಸ್ಗೂರು : ಹಿಂದೂಸ್ಥಾನದ ಭದ್ರ ಬುನಾದಿಗೆ ಆದಿ ಕವಿ ಮಹರ್ಷಿ ವಾಲ್ಮೀಕಿ ರಚಿತ ರಾಮಾಯಣವೇ ಕಾರಣ ಎಂದು ಹೂಗಾರ ಸಮಾಜದ ಮುಖಂಡ ಬಸವರಾಜ್ ಹೂಗಾರ್ ಹೇಳಿದ್ದಾರೆ.

ಪಟ್ಟಣದಲ್ಲಿ ಇರುವ ಹೂಗಾರ ಸಮಾಜದ ಕಚೇರಿಯಲ್ಲಿ ಇಂದು ಮಹರ್ಷಿ ವಾಲ್ಮೀಕಿ, ಹಾಗೂ ಸ್ವಾತಂತ್ರ್ಯ ಹೋರಾಟಗಾರ ಸರ್ಧಾರ್ ವಲ್ಲಭಾಯಿ ಪಟೇಲ್ ರ ಜಯಂತಿ ಆಚರಿಸಲಾಯಿತು. ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಹಿಂದೂಸ್ಥಾನವೆಂಬ ಈ ನಾಡಿಗೆ ಆದಿ ಕವಿ ಮಹರ್ಷಿ ವಾಲ್ಮೀಕಿ ಅವರ ಕೊಡುಗೆ ಅಪಾರ ಎಂದರು.‌ ವಾಲ್ಮೀಕಿ ಮಹರ್ಷಿಗಳು ರಚಿತ ರಾಮಾಯಣ ಎನ್ನುವ ಮಹದ್ ಗ್ರಂಥ ಈ ಜಗತ್ತಿನ ಸರ್ವ ಶ್ರೇಷ್ಠ ಗ್ರಂಥಗಳಲ್ಲಿ ಒಂದು ಎಂದು ಅವರು ಇದೇ ವೇಳೆ ಅಭಿಪ್ರಾಯ ಪಟ್ಟರು.

ಧರ್ಮ ಕಟ್ಟುವ ಕಾಯಕದಲ್ಲಿ ಮಹರ್ಷಿ ವಾಲ್ಮೀಕಿ ಮಹರ್ಷಿಗಳ ಪಾತ್ರ ಎಷ್ಟು ಇದೆಯೋ, ಹಾಗೆಯೇ ದೇಶ ಕಟ್ಟುವ ಕಾಯಕದಲ್ಲಿ ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಗಳಿಸಿದ್ದ ಸರ್ಧಾರ್ ವಲ್ಲಭಾಯಿ ಪಟೇಲ್ ಅವರದ್ದೂ ಸಿಂಹ ಪಾಲಿದೆ ಎಂದರು.
ಪ್ರಸಕ್ತ ಸಮಾಜದಲ್ಲಿ ಹೂಗಾರರು ಎಲ್ಲ ಜಾತಿ ಜನಾಂಗದವರಿಗೂ ಬೇಕಾದವರು. ಹೂಗಾರರಿಲ್ಲದ ಸಮಾಜವಿಲ್ಲ, ಸಮಾಜವಿಲ್ಲದ ಹೂಗಾರರಿಲ್ಲ. ಹಾಗಾಗಿ ಧರ್ಮ ಹಾಗೂ ದೇಶ ಕಟ್ಟಿದ ಎಲ್ಲಾ ಮಹನೀಯರ ಜಯಂತಿಗಳನ್ನೂ ನಾವು ಆಚರಿಸೋಣ ಎಂದು ಹೂಗಾರ ಸಮಾಜಕ್ಕೆ ಇದೇ ಸಮಯದಲ್ಲಿ ಕರೆ ನೀಡಿದರು..

ಕಾರ್ಯಕ್ರಮದಲ್ಲಿ ಹೂಗಾರ ಸಮಾಜದ ಮುಖಂಡರಾದ, ಗೌ.ಅ.ಮಂಜುನಾಥ ಹೂಗಾರ್, ತಾ. ಅಧ್ಯಕ್ಷ ಮಲ್ಲಪ್ಪ ಹೂಗಾರ್, ವೀರಭದ್ರಪ್ಪ, ಹೂಗಾರ್, ಬಸವರಾಜ ಅತ್ತನೂರ, ನಾಗರಾಜ್, ಐದನಾಳ, ಹನುಮಂತ, ಗೋನವಾರ, ಚಿದಾನಂದ, ಹೂಗಾರ್, ಮಹಾಂತೇಶ್ ಗೆಜ್ಜಲಗಟ್ಟಾ , ಇನ್ನಿತರರು ಉಪಸ್ಥಿತರಿದ್ದರು.

ದಿ ನ್ಯೂಸ್24 ಕನ್ನಡ

TRENDING