Saturday, July 31, 2021
Homeಜಿಲ್ಲೆಕೋಲಾರಮಹರ್ಷಿ ವಾಲ್ಮೀಕಿಯ ತತ್ವ ಆದರ್ಶಗಳು ದಾರಿ ದೀಪವಾಗಬೇಕು : ಸಿ ಸತ್ಯಭಾಮ

ಇದೀಗ ಬಂದ ಸುದ್ದಿ

ಮಹರ್ಷಿ ವಾಲ್ಮೀಕಿಯ ತತ್ವ ಆದರ್ಶಗಳು ದಾರಿ ದೀಪವಾಗಬೇಕು : ಸಿ ಸತ್ಯಭಾಮ

ಕೋಲಾರˌ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿಯ ತತ್ವ ಆದರ್ಶಗಳು ದಾರಿದೀಪವಾಗಬೇಕು ಎಂದು ಜಿಲ್ಲಾಧಿಕಾರಿಗಳಾದ ಸಿ. ಸತ್ಯಭಾಮ ಅವರು ತಿಳಿಸಿದರು.

ಇಂದು ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದೂ ಧರ್ಮಕ್ಕೆ ರಾಮಾಯಣ ಗ್ರಂಥವನ್ನು ಕೊಡುಗೆಯಾಗಿ ಮಹರ್ಷಿ ವಾಲ್ಮೀಕಿ ನೀಡಿದರು ಮುಸ್ಲಿಂ ಬಾಂಧವರಿಗೆ ಕುರಾನ್, ಕ್ರೈಸ್ತರಿಗೆ ಬೈಬಲ್ ಗ್ರಂಥಗಳು ಎಷ್ಟು ಮುಖ್ಯವೋ ಅದೆ ರೀತಿ ಹಿಂದೂ ಧರ್ಮಕ್ಕೆ ರಾಮಾಯಣವು ಧರ್ಮ ಗ್ರಂಥವಾಗಿದೆ ಎಂದರು.

ಮಹರ್ಷಿ ವಾಲ್ಮೀಕಿ ಅವರು ಮಹಾನ್ ಪುರುಷ, ತತ್ವಜ್ಞಾನಿ ಅಗಣಿತ ಮಹೀಮರಾಗಿದ್ದರು. ವಾಲ್ಮೀಕಿಯವರು ಅನೇಕ ಸಂಸ್ಕೃತಿಗಳ ಬಗ್ಗೆ ಆಳವಾದ ಅಧ್ಯಯನ ಮಾಡಿ ರಚಿಸಿದ ರಾಮಾಯಣ ಗ್ರಂಥವು ಸೂರ್ಯ ಚಂದ್ರ ಇರುವವರೆಗೂ ರಾಮಾಯಣವು ಇರಬೇಕು.
ರಾಮಾಯಣದಲ್ಲಿ ಬರುವಂತಹ ಒಂದೊಂದು ಪಾತ್ರಗಳು ತತ್ವ ಆದರ್ಶಗಳು ನಮಗೆಲ್ಲರಿಗೂ ಪ್ರೇರಣೆಯಾಗಲಿ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಂ.ಆರ್ ರವಿಕುಮಾರ್ ಅವರು ಮಾತನಾಡಿ, ವಾಲ್ಮೀಕಿ ಅವರು ತಮ್ಮ ದೃಢ ತಪಸ್ಸಿನಿಂದ ಅಭೂತಪೂರ್ವ ಗ್ರಂಥವನ್ನು ರಚಿಸಿದ್ದಾರೆ. ರಾಮಾಯಣದಲ್ಲಿ ಬರುವಂತಹ ರೀತಿ ನೀತಿ, ಆಚಾರ ವಿಚಾರಗಳನ್ನು ಸಮಾಜದಲ್ಲಿರುವ ನಾಗರಿಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸಮಾಜದಲ್ಲಿ ಹೆಣ್ಣು ಹೇಗಿರಬೇಕು ಯಾವ ಗುಣಗಳನ್ನು ಹೊಂದಿರಬೇಕು ಎಂಬುವುದರ ಬಗ್ಗೆ ರಾಮಾಯಣ ಗ್ರಂಥದಲ್ಲಿ ಸೀತೆ ಮೂಲಕವಾಗಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯ ಬಗ್ಗೆ ವಿಶೇಷ ಉಪನ್ಯಾಸವನ್ನು ಡಾ ಸಾವಿತ್ರಿ ಅವರು ನೀಡಿದರು.

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿ ರಾಹುಲ್ ಅವರಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 1 ಲಕ್ಷ ರೂ ಗಳ ಚೆಕ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಾಹ್ನವಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಬಾಲಾಜಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಜಯರಾಮರೆಡ್ಡಿ, ನಗರಸಭೆಯ ಆಯುಕ್ತರಾದ ಶ್ರೀಕಾಂತ್ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img