ಬೆಂಗಳೂರು: ಇಂದು ‘ಈದ್ ಮಿಲಾದ್’. ಪ್ರವಾದಿ ಮಹಮ್ಮದ್ ಅವರ ಜನ್ಮದಿನದವನ್ನು ಈ ದಿನ ಆಚರಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ವಿವಿಧ ಗಣ್ಯರು ಹಬ್ಬದ ಶುಭಾಶಯ ಕೋರಿದ್ದಾರೆ.
ಇಸ್ಲಾಮಿಕ್ ಕ್ಯಾಲೆಂಡರಿನ ಮೂರನೇ ತಿಂಗಳು ರಬೀವುಲ್ ಅವ್ವಲ್. ಪ್ರವಾದಿ ಅವರು ರಬೀವುಲ್ ಅವ್ವಲ್ ತಿಂಗಳ 12ರಂದು ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಜನಿಸಿದರು. ಅವರ ಜನ್ಮದಿನದ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಹಾಗೂ ಅವರ ಜೀವನಚರಿತ್ರೆ ಮತ್ತು ಸಂದೇಶಗಳನ್ನು ನೆನಪಿಸಲಾಗುತ್ತದೆ.
‘ಮಿಲಾದ್-ಉನ್-ನಬಿ ದಿನದ ಶುಭಾಶಯಗಳು. ಈ ದಿನವು ಕರುಣೆ ಮತ್ತು ಸೋದರತ್ವವನ್ನು ಮತ್ತಷ್ಟು ವಿಸ್ತರಿಸಲಿ. ಎಲ್ಲರೂ ಆರೋಗ್ಯದಿಂದ ಮತ್ತು ಖುಷಿಯಿಂದ ಇರಲಿ. ಈದ್ ಮುಬಾರಕ್!’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟಿಸಿದ್ದಾರೆ.