Thursday, December 3, 2020
Home ಸುದ್ದಿ ಜಾಲ ಹುಬ್ಬಳ್ಳಿ ಬಾಂಬ್ ಸ್ಫೋಟ ಪ್ರಕರಣ: ಹಳಿ ತಪ್ಪಿದ ತನಿಖೆ

ಇದೀಗ ಬಂದ ಸುದ್ದಿ

ಪಾಕಿಸ್ತಾನ್ ಕ್ರಿಕೆಟ್ ತಂಡದ ಮತ್ತೊಬ್ಬ ಸದಸ್ಯನಿಗೆ ಕೊರೊನಾ

ವೆಲ್ಲಿಂಗ್ಟನ್‌ : 'ಪ್ರವಾಸಿ ಪಾಕಿಸ್ತಾನ ಕ್ರಿಕೆಟ್ ತಂಡದ ಮತ್ತೊಬ್ಬ ಸದಸ್ಯನಲ್ಲಿ ಕೋವಿಡ್‌-19 ದೃಢಪಟ್ಟಿದೆ. ಇದರಿಂದಾಗಿ ಒಟ್ಟು ಪ್ರಕರಣಗಳ ಸಂಖ್ಯೆ ಎಂಟಕ್ಕೇರಿದೆ' ಎಂದು ನ್ಯೂಜಿಲೆಂಡ್ ಸರ್ಕಾರ ಬುಧವಾರ ಹೇಳಿದೆ.

`RRBʼಯ 1.4 ಲಕ್ಷ ಹುದ್ದೆಗಳ ನೇಮಕಾತಿ ಪರೀಕ್ಷೆಗೆ...

 ನವದೆಹಲಿ :‌ ರೈಲ್ವೆ ನೇಮಕಾತಿ ಮಂಡಳಿಯ ಬಹುನಿರೀಕ್ಷಿತ ತಾಂತ್ರಿಕೇತರ ಜನಪ್ರಿಯ ವರ್ಗಗಳ (ಎನ್ ಟಿಪಿಸಿ) ಪರೀಕ್ಷೆ, ಗ್ರೂಪ್ ಡಿ, ಮತ್ತು ಪ್ರತ್ಯೇಕ ವಿಭಾಗ ಪರೀಕ್ಷೆಗಳು ಡಿಸೆಂಬರ್ 15ರಿಂದ ಆರಂಭವಾಗಲಿವೆ. ಇನ್ನು...

ಕೇಂದ್ರ ಸರ್ಕಾರದಿಂದ ರೈತ ಸಮುದಾಯಕ್ಕೆ ಮಹತ್ವದ ಮಾಹಿತಿ

ಪಿಎಂ ಕಿಸಾನ್ ಸಮನ್ ನಿಧಿ ಯೋಜನೆಯ ಹೊಸ ಪಟ್ಟಿಯನ್ನ ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದೆ. ಹೊಸ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ...

ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಪಡೆದ...

 ಬೆಂಗಳೂರು: ಪ್ರಸಕ್ತ ಸಾಲಿನ ಏಪ್ರಿಲ್- ಜೂನ್ ಅವಧಿಯಲ್ಲಿ ಕರ್ನಾಟಕ ದೇಶದ ಇತರ ರಾಜ್ಯಗಳಿಗಿಂತ ಅತಿ ಹೆಚ್ಚು ಅಂದರೆ 10 ಸಾವಿರ ಕೋಟಿ ರೂಪಾಯಿ ವಿದೇಶಿ ನೇರ ಹೂಡಿಕೆ ಗಳಿಸಿದೆ ಎಂದು ಮುಖ್ಯಮಂತ್ರಿ...

ತನಿಖಾ ಸಂಸ್ಥೆ ಕಚೇರಿಗಳಲ್ಲಿ ಸಿಸಿ ಕೆಮರಾ, ರೆಕಾರ್ಡಿಂಗ್...

ಹೊಸದಿಲ್ಲಿ: ವಿವಿಧ ಪ್ರಕರಣಗಳಲ್ಲಿ ತನಿಖೆ ಕೈಗೊಳ್ಳುವ ಮತ್ತು ಬಂಧಿಸುವ ಅಧಿಕಾರ ಹೊಂದಿರುವ ಸಿಬಿಐ, ಜಾರಿ ನಿರ್ದೇಶನಾಲಯ (ಇಡಿ) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಹಿತ ಎಲ್ಲ ತನಿಖಾ ಸಂಸ್ಥೆಗಳ ಕಚೇರಿಗಳಲ್ಲಿ...

ಹುಬ್ಬಳ್ಳಿ ಬಾಂಬ್ ಸ್ಫೋಟ ಪ್ರಕರಣ: ಹಳಿ ತಪ್ಪಿದ ತನಿಖೆ

ಹುಬ್ಬಳ್ಳಿ: ಇಲ್ಲಿಯ ಕೇಂದ್ರ ರೈಲ್ವೇ ನಿಲ್ದಾಣದಲ್ಲಿ ಬಾಂಬ್ ಸ್ಪೋಟಗೊಂಡು ಒಂದು ವರ್ಷ ಕಳೆದಿದೆ‌. ಆದರೆ ಇದುವರೆಗೂ ಆರೋಪಿಗಳ ಸುಳಿವು ಸಿಕ್ಕಿಲ್ಲ. ಕಳೆದ ವರ್ಷ ಅಕ್ಟೋಬರ್‌ 21ರಂದು ನಡೆದ ಸ್ಪೋಟ ಪ್ರಕರಣದ ತನಿಖೆ ಹಳಿ ತಪ್ಪಿದೆ ಅನ್ನೋ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತಿದೆ. ರೈಲ್ವೇ ನಿಲ್ದಾಣದಲ್ಲಿ ನಡೆದಿದ್ದ ಭಾರೀ ಸ್ಪೋಟಕ್ಕೆ ಅಂದು ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು. ಜನನಿಬಿಡ ರೈಲು ನಿಲ್ದಾಣದಲ್ಲಿ ಸ್ಪೋಟಕಗಳು ಪತ್ತೆಯಾಗಿದ್ದು ಪ್ರಯಾಣಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ವಿಜಯವಾಡ- ಹುಬ್ಬಳ್ಳಿ ಅಮರಾವತಿ ಎಕ್ಸ್​ಪ್ರೆಸ್‌ ರೈಲಿನಲ್ಲಿದ್ದ ಎಂಟು ಸ್ಪೋಟಕಗಳ ಪೈಕಿ ಒಂದು ಸಿಡಿದಿತ್ತು. ಇನ್ನುಳಿದ ಏಳು ಸ್ಪೋಟಕಗಳನ್ನು ಬಾಂಬ್‌ ನಿಷ್ಕ್ರಿಯ ದಳದಿಂದ ನಿಷ್ಕ್ರಿಯಗೊಳಿಸಲಾಗಿತ್ತು. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದರು. ಆದರೆ ಇದುವರೆಗೆ ತನಿಖೆಯಲ್ಲಿ ಸಮರ್ಪಕ ಪ್ರಗತಿ ಆಗಿಲ್ಲದಿರುವುದು ಕಂಡುಬರುತ್ತಿದೆ.

ತನಿಖಾ ತಂಡ ಆಂಧ್ರದ ವಿಜಯವಾಡ ಮತ್ತು ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಹೋಗಿ ಬಂದಿದೆ. ವಿಜಯವಾಡದಿಂದ ಹುಬ್ಬಳ್ಳಿವರೆಗಿನ 26 ರೈಲು ನಿಲ್ದಾಣಗಳನ್ನು ಪರಿಶೀಲನೆ ನಡೆಸಲಾಗಿದೆ. ಆದರೆ ಬಹುತೇಕ ರೈಲು ನಿಲ್ದಾಣಗಳಲ್ಲಿನ ಸಿಸಿಟಿವಿಗಳು ಕೆಲಸ ಮಾಡುತ್ತಿಲ್ಲ. ಹೀಗಾಗಿ ಯಾವ ನಿಲ್ದಾಣದಲ್ಲಿ ಸ್ಪೋಟಕಗಳನ್ನು ರೈಲಿನಲ್ಲಿ ಇರಿಸಲಾಯಿತು ಎನ್ನುವುದರ ಸುಳಿವು ಸಿಕ್ಕಿಲ್ಲ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದಿದ್ದರು. ಆದರೆ ತನಿಖೆ ಮಾತ್ರ ಮಂದಗತಿಯಲ್ಲಿ ಸಾಗಿರುವಂತೆ ಕಂಡುಬರುತ್ತಿದ್ದು ಸಾರ್ವಜನಿಕರಲ್ಲಿ ನಿರಾಶೆ ಮೂಡಿಸಿದೆ. ಮದುವೆ ಮುರಿದದ್ದಕ್ಕೆ ಜೆಸಿಬಿ ಏರಿ ಪಕ್ಕದವನ ಅಂಗಡಿ ಉರುಳಿಸಿದ ಕೇರಳದ ಯುವಕ

ಸ್ಪೋಟಕಗಳಿದ್ದ ಬಾಕ್ಸ್‌ ಮೇಲೆ ಮಹಾರಾಷ್ಟ್ರದ ರಾಧಾನಗರಿ ಕ್ಷೇತ್ರದ ಶಾಸಕ ಪ್ರಸಾದ್‌ ಅಬಿತಕರ್ ಹೆಸರು ಬರೆಯಲಾಗಿತ್ತು. ನೋ ಬಿಜೆಪಿ, ನೋ ಆರ್‌ಎಸ್‌ಎಸ್‌, ಓನ್ಲಿ ಶಿವಸೇನಾ ಎಂದು ನಮೂದಿಸಲಾಗಿತ್ತು. ಆದರೆ ರೈಲ್ವೇ ಪೊಲೀಸರು ಇದುವರೆಗೂ ಶಾಸಕ ಪ್ರಸಾದ್‌ ಅಬಿತಕರ್‌ ಅವರ ಜೊತೆ ಚರ್ಚಿಸುವ ಪ್ರಯತ್ನ ಮಾಡಿಲ್ಲ. ಸ್ಪೋಟಕದಲ್ಲಿ ಗನ್‌ ಪೌಡರ್‌, ಸಲ್ಫರ್‌, ಅಮೋನಿಯಂ ನೈಟ್ರೇಟ್‌ ಅಂಶ ಇತ್ತೆಂದು ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಮೌಖಿಕವಾಗಿ ತಿಳಿಸಿದ್ದಾರೆ. ಆದರೆ ರೈಲ್ವೇ ಪೊಲೀಸರು ಇದುವರೆಗೂ ಎಫ್‌ಎಸ್‌ಎಲ್‌ ವರದಿಯನ್ನೂ ಸಂಗ್ರಹಿಸಿಲ್ಲ. ರೈಲ್ವೆ ಪೊಲೀಸರು ತನಿಖೆಯ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಂತೆ ಕಂಡು ಬರುತ್ತಿಲ್ಲ. ತನಿಖಾ ಪ್ರಗತಿಯ ಬಗ್ಗೆ ಕೇಳಿದ್ರೆ ಯಾವುದೇ ಉತ್ತರ ಕೊಡುತ್ತಿಲ್ಲ.

ಸ್ಪೋಟದಿಂದ ಓರ್ವ ಅಮಾಯಕ ಕೂಲಿ ಕಾರ್ಮಿಕ ಕೈ ಕಳೆದುಕೊಂಡಿದ್ದಾನೆ. ಇತರೆ ಏಳು ಸ್ಪೋಟಕಗಳು ಸಿಡಿದಿದ್ದರೆ ದೊಡ್ಡ ಅನಾಹುತವೇ ನಡೆಯುತ್ತಿತ್ತು. ಸಾಕಷ್ಟು ಸುರಕ್ಷತಾ ಕ್ರಮಗಳ ನಡುವೆಯೂ ರೈಲ್ವೇ ನಿಲ್ದಾಣದಲ್ಲಿ ಸ್ಪೋಟಕ ಸಿಕ್ಕಿದ್ದು ಜನರನ್ನು ಭಯಭೀತರನ್ನಾಗಿ ಮಾಡಿದೆ. ರೈಲ್ವೇ ಭದ್ರತೆಯ ಬಗ್ಗೆ ಸಂಶಯಗಳನ್ನು ಹುಟ್ಟುಹಾಕಿದೆ. ಆರೋಪಿಗಳನ್ನು ಪತ್ತೆಹಚ್ಚಿ ರೈಲ್ವೇ ಪ್ರಯಾಣಿಕರಲ್ಲಿ ಭದ್ರತೆಯ ಭರವಸೆ ಮೂಡಿಸುವ ಕೆಲಸ ಆಗಬೇಕಿದೆ. ಮೇಲ್ನೋಟಕ್ಕೆ ರೈಲ್ವೆ ಪೊಲೀಸರು ಮತ್ತು ರೈಲ್ವೆ ಇಲಾಖೆ ಪ್ರಕರಣವನ್ನು ನಿರ್ಲಕ್ಷಿಸಿದಂತೆ ಕಂಡುಬರುತ್ತಿದೆ. ಮೇಲಧಿಕಾರಿಗಳು ಪ್ರಕರಣದ ತನಿಖೆಯ ಕುರಿತು ಮಾಹಿತಿ ನೀಡಲು ನಿರಾಕರಿಸುತ್ತಿದ್ದಾರೆ. ಬಾಂಬ್ ಸ್ಪೋಟದ ಬಗ್ಗೆ ತನಿಖೆ ಚುರುಕುಗೊಳಿಸಿ, ಆರೋಪಿಗಳನ್ನು ಬಂಧಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

TRENDING