Tuesday, December 1, 2020
Home ಅಂತರ್ ರಾಷ್ಟ್ರೀಯ 2020ರಲ್ಲೇ ಕೋವಿಡ್‌-19 ಲಸಿಕೆ ಪೂರೈಕೆ ಸಾಧ್ಯ

ಇದೀಗ ಬಂದ ಸುದ್ದಿ

ರೈತರ ಪ್ರತಿಭಟನೆಗೆ ಮಣಿದು ಎರಡು ದಿನ...

 ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ 5 ದಿನದಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಸೋಮವಾರ(ನ.30) “ನಿರ್ಣಾಯಕ ಹೋರಾಟಕ್ಕೆ” ದೆಹಲಿಗೆ ಬಂದಿರುವುದಾಗಿ ಘೋಷಿಸಿದ ಬೆನ್ನಲ್ಲೇ ಇದೀಗ ಕೇಂದ್ರ ಸರಕಾರ ರೈತ ಮುಖಂಡರನ್ನು ಮಾತುಕತೆಗೆ...

ರಾಜ್ಯದ ಹಲವು ಜಿಲ್ಲೆಗಳಲ್ಲಿ ಡಿಸೆಂಬರ್ 4 ರಿಂದ...

 ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಡಿಸೆಂಬರ್ 4 ಮತ್ತು 5 ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು: ಹೈವೇಯಲ್ಲಿ ರಾಬರಿ...

 ಬೆಂಗಳೂರು: ರಾಜಧಾನಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಮೊಳಗಿದ್ದು, ದರೋಡೆ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಕಾಲಿಗೆ ಗುಂಡು ಹಾರಿಸಿ ಅನುಬನ್ ನನ್ನು ಬಂಧಿಸಲಾಗಿದೆ. ಬೆಂಗಳೂರಿನ ಲಗ್ಗೆರೆ...

ರಾಜ್ಯ ಸರ್ಕಾರದಿಂದ `ಮರಾಠ ಅಭಿವೃದ್ಧಿ ನಿಗಮ’ ಸ್ಥಾಪಿಸಿ...

ಬೆಂಗಳೂರು: ಮರಾಠ ಪ್ರಾಧಿಕಾರಕ್ಕೆ 50 ಕೋಟಿ ಅನುದಾನ ಮಂಜೂರು ಮಾಡಿ ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯಲ್ಲಿ ಪ್ರಾಧಿಕಾರ ರಚನೆಗೆ ಸಿಎಂ ಬಿಎಸ್‍ವೈ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ರೈಲು ನಿಲ್ದಾಣದ ಪ್ಲಾಟ್ ಫಾರಂ ಟಿಕೆಟ್ ದರ...

ಬೆಂಗಳೂರು, ಡಿ. 01 :  ಕೊರೊನಾ ಸಂದರ್ಭದಲ್ಲಿ ರೈಲು ನಿಲ್ದಾಣದಲ್ಲಿ ಜನರನ್ನು ನಿಯಂತ್ರಣ ಮಾಡಲು ಪ್ಲಾಟ್ ಫಾರಂ ದರದಲ್ಲಿ ಭಾರಿ ಏರಿಕೆ ಮಾಡಲಾಗಿತ್ತು. ಈ ಆದೇಶ ತಾತ್ಕಾಲಿಕವಾಗಿದ್ದು, ನವೆಂಬರ್ 30ರ ತನಕ...

2020ರಲ್ಲೇ ಕೋವಿಡ್‌-19 ಲಸಿಕೆ ಪೂರೈಕೆ ಸಾಧ್ಯ

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಕೊರೊನಾ ವೈರಸ್‌ ಲಸಿಕೆ ಪ್ರಯೋಗಕ್ಕೆ ಸಂಬಂಧಿಸಿದ ಮಹತ್ವದ ದತ್ತಾಂಶ ಬಿಡುಗಡೆ ಸಾಧ್ಯವಾಗದೆಂದು ಫೈಜರ್‌ ಕಂಪನಿ ಹೇಳಿದೆ. ಆದರೆ, 2020ರಲ್ಲಿಯೇ ಲಸಿಕೆ ಪೂರೈಸುವ ಭರವಸೆಯನ್ನೂ ವ್ಯಕ್ತಪಡಿಸಿದೆ.

ಯೋಜಿಸಿದಂತೆಯೇ ಕ್ಲಿನಿಕಲ್‌ ಟ್ರಯಲ್‌ ಮುಂದುವರಿದು ಔಷಧ ನಿಯಂತ್ರಣ ಸಂಸ್ಥೆಯಿಂದ ಅನುಮತಿ ದೊರೆತರೆ, ಇದೇ ವರ್ಷ ಅಮೆರಿಕದಲ್ಲಿ ಸುಮಾರು 4 ಕೋಟಿ ಡೋಸ್‌ಗಳಷ್ಟು ಕೊರೊನಾ ವೈರಸ್‌ ಲಸಿಕೆ ಪೂರೈಸುವುದಾಗಿ ಫೈಜರ್‌ ಫಾರ್ಮಾ ಕಂಪನಿಯ ಸಿಇಒ ಆಲ್ಬರ್ಟ್‌ ಬೌರ್ಲಾ ಹೇಳಿದ್ದಾರೆ.

2020ರ ಅಂತ್ಯದೊಳಗೆ ಲಸಿಕೆಯ 4 ಕೋಟಿ ಡೋಸ್‌ಗಳು ಹಾಗೂ 2021ರ ಮಾರ್ಚ್‌ಗೆ 10 ಕೋಟಿ ಡೋಸ್‌ಗಳ ಪೂರೈಕೆಗೆ ಅಮೆರಿಕ ಸರ್ಕಾರ ಫೈಜರ್‌ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ಅಕ್ಟೋಬರ್‌ಗೆ ಲಸಿಕೆ ಕುರಿತ ಪ್ರಯೋಗದ ಮಾಹಿತಿ ಸಿಗಲಿದೆ ಎಂದು ಫೈಜರ್ ಕಂಪನಿ ಈ ಹಿಂದೆ ಹೇಳಿತ್ತು. ನವೆಂಬರ್‌ 3ರಂದು ಅಧ್ಯಕ್ಷೀಯ ಚುನಾವಣೆ ನಿಗದಿಯಾಗಿರುವುದರಿಂದ ಲಸಿಕೆ ದತ್ತಾಂಶ ಬಿಡುಗಡೆಯ ಬಗ್ಗೆ ನಿರೀಕ್ಷೆ ಹೆಚ್ಚಿತ್ತು. ‘ನಾವು ಕೊನೆಯ ಹಂತದಲ್ಲಿದ್ದೇವೆ. ಸಾರ್ವಜನಿಕ ಆರೋಗ್ಯ ಮತ್ತು ಜಾಗತಿಕ ಆರ್ಥಿಕತೆಯ ಹಿತದೃಷ್ಟಿಯಿಂದ ಎಲ್ಲರೂ ತಾಳ್ಮೆ ವಹಿಸಬೇಕಿದೆ. ಲಸಿಕೆಯ ಸಾಮರ್ಥ್ಯವನ್ನು ಪೂರ್ಣವಾಗಿ ಅರಿಯಲು ಇನ್ನೂ ಸಾಧ್ಯವಾಗಿಲ್ಲ’ ಎಂದು ಆಲ್ಬರ್ಟ್‌ ಬೌರ್ಲಾ ಹೇಳಿದ್ದಾರೆ.

ತುರ್ತು ಸಂದರ್ಭಗಳಲ್ಲಿ ಕೋವಿಡ್‌-19 ಲಸಿಕೆಯ ಬಳಕೆಗೆ ನವೆಂಬರ್‌ ಮೂರನೇ ವಾರದಲ್ಲಿ ಅನುಮತಿ ಕೋರುವ ಸಾಧ್ಯತೆ ಇದೆ. ಕಳೆದ ತ್ರೈಮಾಸಿಕದಲ್ಲಿ ಫೈಜರ್‌ ಕಂಪನಿಯ ಲಾಭಾಂಶದಲ್ಲಿ ಶೇ 71ರಷ್ಟು ಇಳಿಕೆಯಾಗಿದ್ದು, 2.2 ಬಿಲಿಯನ್‌ ಡಾಲರ್‌ ದಾಖಲಾಗಿದೆ. ಚೀನಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತುರ್ತು ಶಸ್ತ್ರಚಿಕಿತ್ಸೆಗಳ ಪ್ರಮಾಣ ಇಳಿಕೆಯಾಗಿರುವುದರಿಂದ ಕಂಪನಿಯ ಆಸ್ಪತ್ರೆ ಉದ್ಯಮದಲ್ಲಿಯೂ ಇಳಿಕೆ ಕಂಡು ಬಂದಿದೆ.

TRENDING