Tuesday, November 24, 2020
Home ಬೆಂಗಳೂರು ಯಾದಗಿರಿ : ಪ್ರವಾಹದಿಂದ ಸಂಕಷ್ಟಕ್ಕೀಡಾದ ಸಾವಿರ ಕುಟುಂಬಕ್ಕೆ ಆಹಾರದ ಕಿಟ್ ವಿತರಿಸಿದ ಬೆಂಗಳೂರಿನ ಪಿಇಎಸ್...

ಇದೀಗ ಬಂದ ಸುದ್ದಿ

ಸರ್ಕಾರಿ ಶಾಲೆ-ಅಂಗನವಾಡಿ ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, ಸರ್ಕಾರಿ ಶಾಲೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಬದಲಾಗಿ ಪಡಿತರ ಜೊತೆಗೆ ಭತ್ಯೆ ಸಹ ನೀಡಬೇಕಿದೆ...

ಡಿ. 1ರಿಂದ ಬೈಕ್ ಸವಾರರಿಗೆ ಹೆಲ್ಮೆಟ್; ಆಟೋಗಳಿಗೆ...

 ಕೋಲಾರ(ನ. 24): ಡಿಸೆಂಬರ್ 1 ರಿಂದ ಬೈಕ್ ಸವಾರರು ಮತ್ತು ಹಿಂಬದಿ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಹಾಗೂ ಆಟೋಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು. ಈ ಕಾನೂನು ಪಾಲಿಸದವರ...

ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

 ಬೆಂಗಳೂರು : ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ರಾಜ್ಯ ಸರ್ಕಾರವು ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, 2020-21 ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಒಳಗೊಂಡಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಾಮಾನ್ಯ...

Gold Rate: ವಾರದ ಆರಂಭದಲ್ಲೇ ಅಲ್ಪ ಇಳಿಕೆ...

Gold Price Today: ಬೆಂಗಳೂರು: ಕೊರೋನಾ ವೈರಸ್​ ಆರಂಭವಾದಗಿನಿಂದ ಚಿನ್ನದ ದರ ಗಗನಕ್ಕೇರಿದೆ. 10 ಗ್ರಾಂಗೆ 35 ಸಾವಿರ ರೂಪಾಯಿ ಇದ್ದ ಚಿನ್ನದ ಬೆಲೆ ಇಂದು 50 ಸಾವಿರ ರೂಪಾಯಿ...

ಕರಾಚಿಗಿಂತ ಮೊದಲು‘ಪಿಒಕೆ’ ವಶಪಡಿಸಿಕೊಳ್ಳಿ: ಶಿವಸೇನಾ ಸಂಸದ

 ಮುಂಬೈ: 'ಕರಾಚಿ ಭಾರತದ ಅಂಗವಾಗಲಿದೆ ಎಂದು ಪ್ರತಿಪಾದಿಸುವ ಮೊದಲು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ವಶಪಡಿಸಿಕೊಳ್ಳಿ' ಎಂದು ಶಿವಸೇನಾ ಸಂಸದ ಸಂಜಯ್‌ ರಾವುತ್‌ ಅವರು ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್‌ ಅವರಿಗೆ...

ಯಾದಗಿರಿ : ಪ್ರವಾಹದಿಂದ ಸಂಕಷ್ಟಕ್ಕೀಡಾದ ಸಾವಿರ ಕುಟುಂಬಕ್ಕೆ ಆಹಾರದ ಕಿಟ್ ವಿತರಿಸಿದ ಬೆಂಗಳೂರಿನ ಪಿಇಎಸ್ ವಿದ್ಯಾಸಂಸ್ಥೆ

ಯಾದಗಿರಿ : ಪ್ರಚಾರದ ಹಂಗಿಲ್ಲದೆ ಕಾಯಕ ಯೋಗಿಗಳಂತೆ , ಎಲೆಮರೆ ಕಾಯಿಯಂತೆ ನಿಸ್ವಾರ್ಥ ಸಮಾಜ ಸೇವೆ ಮಾಡುತ್ತಿರುವವರು ಬೆಂಗಳೂರಿನ  ಪ್ರೊಫೆಸರ್. ಎಂ.ಆರ್ .ದೊರೆಸ್ವಾಮಿಯವರು.

ಬೆಂಗಳೂರಿನ ಪಿಇಎಸ್ ವಿದ್ಯಾಸಂಸ್ಥೆ ಅಧ್ಯಕ್ಷರಾದ ಪ್ರೊ. ಎಂ.ಆರ್. ದೊರೆಸ್ವಾಮಿ ಅವರ ವತಿಯಿಂದ ಯಾದಗಿರಿ ಜಿಲ್ಲೆಯ  ಗುರುಮಠಕಲ್ ತಾಲೂಕಿನ ಗುಂಜನೂರು ಗ್ರಾಮದಲ್ಲಿ ಮತ್ತು ವಡಿಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಅತಿವೃಷ್ಟಿಯಿಂದ ಸಂಕಷ್ಟಕ್ಕೀಡಾದ ರೈತರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿದ್ದಾರೆ.

ಪಿಇಎಸ್ ವಿದ್ಯಾ ಸಂಸ್ಥೆಯ ಪ್ರತಿನಿಧಿ ಸಾಯಿಬಣ್ಣ ಮೇಸ್ತ್ರಿ ಮಾತನಾಡಿ, ಕಳೆದ ಕೆಲವು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ಭೀಮಾ ನದಿ ಪಾತ್ರದ ರೈತರ ಜಮೀನು ಸೇರಿದಂತೆ ಹಲವಾರು ಹಳ್ಳಿಗಳ ರೈತರು ಬೆಳೆದ ಬೆಳೆಗಳು ನಾಶವಾಗಿವೆ. ಇದರಿಂದ ಸಂಕಷ್ಟಕ್ಕೀಡಾದ ರೈತರಿಗೆ ಮಾನವೀಯ ನೆರವಿನ ಹಸ್ತ ಚಾಚುವ ಮೂಲಕ ಗುರುಮಠಕಲ್ ತಾಲೂಕಿನ ಗುಂಜನೂರು ಗ್ರಾಮದ ಸುಮಾರು 500 ರೈತರಿಗೆ 10 ಕಿಲೋ ಅಕ್ಕಿ ಸೇರಿದಂತೆ ಆಹಾರ ಕಿಟ್ ವಿತರಿಸುವ ಮೂಲಕ ಈ ಭಾಗದ ರೈತರ ಸಂಕಷ್ಟಕ್ಕೆ ಸ್ಪಂದಿಸಲಾಗಿದೆ. ನಮ್ಮೆಲ್ಲರ ಮನವಿಯನ್ನು ಪರಿಗಣಿಸಿದ ದೊರೆಸ್ವಾಮಿಯವರು ಗುಂಜನೂರು, ವಡಿಗೇರಾ ತಾಲೂಕಿನ ನಾಯ್ಕಲ್ ಗ್ರಾಮ ಸೇರಿದಂತೆ ಸುಮಾರು 1,000 ರೈತ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ನೀಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ  ಸಂಸ್ಥೆಯ ಪ್ರತಿನಿಧಿಗಳಾಗಿ ಶರಣು ಗೌಡ ಗುಂಜನೂರ, ಶರಣು ಧರ್ಮಪೂರ, ಸಾಯಿಬಣ್ಣ ಮೇಸ್ತ್ರಿ, ಅನೀಲ್ ನಂದೇಪಲ್ಲಿ, ಶರಣಪ್ಪ ಮೇಸ್ತ್ರಿ ಬೆಡ್ಡೆಗಣ್ಣೋರ್ ,  ಗುಂಜಾಲಪ್ಪ ಮೇಸ್ತ್ರಿ, ನಿಂಗಪ್ಪ ಸೇರಿದಂತೆ ಇನ್ನಿತರರಿದ್ದರು. ಶೇಕಡ 90 ರಷ್ಟು ಬೆಳೆ ಹಾನಿಗೊಳಗಾದ ರೈತರಿಗೆ ಈ ಸಂದರ್ಭದಲ್ಲಿ ಆಹಾರ ಕಿಟ್ ನೀಡಿರುವದರಿಂದ ರೈತರ ಸಂಕಷ್ಟಕ್ಕೆ ಸಹಾಯ ಹಸ್ತ ಚಾಚಿದಂತಾಗಿದೆ.

  ಬೀರಲಿಂಗಪ್ಪ .ಕಿಲ್ಲನಕೇರಾ

 ದಿ ನ್ಯೂಸ್ 24 ಕನ್ನಡ

ಯಾದಗಿರಿ

TRENDING