Wednesday, December 2, 2020
Home ದೆಹಲಿ ‌RSSಗೆ ಸತ್ಯ ಗೊತ್ತಿದೆ, ಆದರೆ ಹೇಳಲು ಭಯ: ರಾಹುಲ್ ಗಾಂಧಿ

ಇದೀಗ ಬಂದ ಸುದ್ದಿ

ಕೋವಿಡ್-19 : ವಿಶ್ವದಾದ್ಯಂತ 4.41 ಕೋಟಿ ಜನರು...

 ವಾಷಿಂಗ್ಟನ್: ಇಂದು ಪ್ರಪಂಚದಾದ್ಯಂತ ಹೊಸದಾಗಿ 1.83 ಲಕ್ಷ ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, 4,235 ಜನರು ಮೃತಪಟ್ಟಿದ್ದಾರೆ ಎಂದು ವರ್ಡೋಮೀಟರ್ ವೆಬ್‌ಸೈಟ್‌ ವರದಿ ಮಾಡಿದೆ. ಇದರಿಂದಾಗಿ ಪ್ರಪಂಚದಾದ್ಯಂತ ಸೋಂಕು ಪ್ರಕರಣಗಳ ಸಂಖ್ಯೆ...

ರಾಜ್ಯದಲ್ಲಿ 2 ದಿನ ಭಾರೀ ಮಳೆ :...

ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಡಿಸೆಂಬರ್ 4 ಮತ್ತು 5 ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕದಲ್ಲಿ ಕೊರೊನಾ ಪರೀಕ್ಷೆಗಳ ಸಂಖ್ಯೆಯಲ್ಲಿ ಇಳಿಮುಖ

ಬೆಂಗಳೂರು, ಡಿ.02 : ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆಯೂ ಸಹ ಒಂದು ಲಕ್ಷದಿಂದ ಇಳಿಕೆಯಾಗಿದೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 8,86,227.

ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕಲಬುರಗಿ: ಕಲಬುರಗಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಘಟಕದಲ್ಲಿ ಖಾಲಿಯಿರುವ ಶೀಘ್ರಪಿಲಿಗಾರ (ಹಿಂಬಾಕಿ ಹುದ್ದೆಗಳು) 8-ಹುದ್ದೆಗಳು, ಬೆರಳಚ್ಚುಗಾರ-1, ಬೆರಳಚ್ಚು ನಕಲುಗಾರ-1 ಹುದ್ದೆ, ಆದೇಶ ಜಾರಿಕಾರ 2 ಹುದ್ದೆ ಹಾಗೂ ಜವಾನ 51...

ಫೆಬ್ರುವರಿ ಅಂತ್ಯಕ್ಕೆ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ:...

ಬೆಂಗಳೂರು: ಮುಂದಿನ ವರ್ಷ ಫೆಬ್ರವರಿ ಮೂರು ಅಥವಾ ನಾಲ್ಕನೇ ವಾರದಲ್ಲಿ 13ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಆಯೋಜಿಸಲು ಅನುಮತಿ ನೀಡುವಂತೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನಿಲ್ ಪುರಾಣಿಕ್ ನೇತೃತ್ವದ...

‌RSSಗೆ ಸತ್ಯ ಗೊತ್ತಿದೆ, ಆದರೆ ಹೇಳಲು ಭಯ: ರಾಹುಲ್ ಗಾಂಧಿ

ನಾಗಪುರದಲ್ಲಿ ನಡೆದ ವಿಜಯದಶಮಿ ಉತ್ಸವದ ವೇಳೆ ಚೀನಾ ಕುರಿತು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೀಡಿದ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

‘ಒಳಭಾಗದಲ್ಲಿ ಭಾಗವತ್ ಅವರಿಗೆ ಸತ್ಯ ಏನೆಂಬುದು ತಿಳಿದಿದೆ. ಆದರೆ ಅದನ್ನು ಎದುರಿಸಲು ಅವರು ಹೆದರಿದ್ದಾರೆ. ಸತ್ಯವೇನೆಂದರೆ ಚೀನಾವು ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದೆ ಮತ್ತು ಸರ್ಕಾರ ಹಾಗೂ ಆರೆಸ್ಸೆಸ್ ಅದಕ್ಕೆ ಅವಕಾಶ ನೀಡಿದೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

‘ಸೇನಾ ಸಿದ್ಧತೆಗಳ ವಿಚಾರದಲ್ಲಿ ಭಾರತವು ಚೀನಾವನ್ನು ಮೀರಿ ಬೆಳೆಯಬೇಕಿದೆ. ಚೀನಾದ ವಿಸ್ತರಣಾ ನೀತಿಗಳ ಬಗ್ಗೆ ಜಗತ್ತಿಗೆ ಅರಿವಿದೆ. ಚೀನಾದ ವಿಸ್ತರಣಾ ಆಕ್ರಮಣಗಳಿಗೆ ತೈವಾನ್ ಮತ್ತು ವಿಯೆಟ್ನಾಂ ಉದಾಹರಣೆ. ಅನೇಕ ದೇಶಗಳು ಈಗ ಚೀನಾ ವಿರುದ್ಧ ಸಿಡಿದೆದ್ದಿವೆ’ ಎಂದು ಮೋಹನ್ ಭಾಗವತ್ ಹೇಳಿದ್ದರು.

‘ನಮ್ಮ ರಕ್ಷಣಾ ಪಡೆಗಳು, ಸರ್ಕಾರ ಮತ್ತು ಜನರು ನಮ್ಮ ಪ್ರದೇಶಗಳನ್ನು ಅತಿಕ್ರಮಣ ಮಾಡುವ ಚೀನಾದ ಪ್ರಯತ್ನಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ನುಸುಳುವಿಕೆಯ ಪ್ರಯತ್ನಕ್ಕೆ ಭಾರತದ ಪ್ರತಿಕ್ರಿಯೆ ಕಂಡು ಚೀನಾ ದಂಗಾಗಿದೆ’ ಎಂದು ಶ್ಲಾಘಿಸಿದ್ದರು.

‘ಅದು ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದು ನಮಗೆ ಗೊತ್ತಿಲ್ಲ. ಹೀಗಾಗಿ ನಮ್ಮ ಮುಂದೆ ಇರುವ ಗುರಿ ಎಚ್ಚರಿಕೆಯಿಂದ ಇರುವುದು ಮತ್ತು ಸಿದ್ಧರಾಗಿರುವುದು. ಚೀನಾ ವಿರುದ್ಧ ನಾವು ಸೇನಾ ಸಿದ್ಧತೆ, ಆರ್ಥಿಕ ಸನ್ನಿವೇಶ, ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ನೆರೆಯ ದೇಶಗಳೊಂದಿಗಿನ ಸಂಬಂಧಗಳ ವಿಚಾರಗಳಲ್ಲಿ ಹೆಚ್ಚು ಶಕ್ತಿಶಾಲಿಯಾಗಬೇಕು’ ಎಂದಿದ್ದರು.

TRENDING