Sunday, November 29, 2020
Home ಕ್ರಿಕೆಟ್ ವಿಶ್ವಕಪ್ ಕ್ರಿಕೆಟ್ ಪ್ರಶಸ್ತಿ ಗಳಿಸಿದ್ದ ತನ್ಮಯ್ ಶ್ರೀವಾಸ್ತವ ನಿವೃತ್ತಿ

ಇದೀಗ ಬಂದ ಸುದ್ದಿ

ವಿಶ್ವದಾದ್ಯಂತ 6.20 ಕೋಟಿ ದಾಟಿದ ಕೊರೋನಾ ಪ್ರಕರಣಗಳ...

ವಾಷಿಂಗ್ಟನ್: ವಿಶ್ವದಾದ್ಯಂತ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 62,094,127ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ವರದಿಯಲ್ಲಿ ತಿಳಿಸಿದೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೊರೋನಾವೈರಸ್ ಸಂಪನ್ಮೂಲ ಕೇಂದ್ರದ...

`LPG’ ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಎಲ್ ಪಿಜಿ ಗ್ಯಾಸ್ ಮೇಲಿನ ಸಬ್ಸಿಡಿ ಬಗ್ಗೆ ಗ್ರಾಹಕರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಮೂಡುತ್ವೆ. ಅದ್ರಲ್ಲೂ ಗ್ರಾಹಕರಲ್ಲಿ ಒಂದು ಪ್ರಶ್ನೆ ಯಾವಾಗ್ಲೂ ಇದ್ದೇ ಇರುತ್ತೆ. ಅದೆನೇಂದ್ರೆ, ಎಷ್ಟು ಸಬ್ಸಿಡಿ ಮೊತ್ತವನ್ನ...

ಬಿಜೆಪಿ ಗೆದ್ದರೆ ಹೈದರಾಬಾದ್ ಗೆ `ಭಾಗ್ಯನಗರ’ ವೆಂದು...

ತೆಲಂಗಾಣ : ಹೈದರಾಬಾದ್ ನ್ನು 'ಭಾಗ್ಯ ನಗರ' ಎಂದು ಮರು ನಾಮಕರಣ ಮಾಡುವುದರ ಬಗ್ಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ಜಿಎಚ್‌ಎಂಸಿ...

ಗ್ರಾಮ ಪಂಚಾಯಿತಿಯಲ್ಲಿ ಪ್ರಮಾಣಪತ್ರಕ್ಕೆ ಹೊಸ ನಿಯಮ ಜಾರಿ

 ಬೆಂಗಳೂರು: ಗ್ರಾಮ ಪಂಚಾಯಿತಿ ಪ್ರಮಾಣಪತ್ರಕ್ಕೆ ಹೊಸ ನಿಯಮ ಜಾರಿಗೆ ತಂದಿದ್ದು, ಆರ್.ಡಿ.ಪಿ.ಆರ್. ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಡಿಜಿಟಲ್ ಸಹಿ ಇದ್ದರಷ್ಟೇ ಪ್ರಮಾಣ ಪತ್ರಕ್ಕೆ ಮಾನ್ಯತೆ ಇರುತ್ತದೆ ಎಂದು ಹೇಳಲಾಗಿದೆ.

ಮಿಜೋರಾಂ : ರಾಜ್ಯದ ಮೊದಲ ಸೈಬರ್ ಕ್ರೈಂ...

 ಐಜ್ವಾಲ್, ನ.29- ಮಿಜೋರಾಂ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯನ್ನು ಸ್ಥಾಪಿಸಲಾಗಿದೆ. ರಾಜ್ಯದ ಮೊದಲ ಸೈಬರ್ ಪೊಲೀಸ್ ಠಾಣೆಯನ್ನು ಮಿಜೋರಾಂ ಡಿಜಿ ಎಸ್.ಬಿ.ಕೆ.ಸಿಂಗ್ ಇಂದು ಲೋಕಾರ್ಪಣೆ...

ವಿಶ್ವಕಪ್ ಕ್ರಿಕೆಟ್ ಪ್ರಶಸ್ತಿ ಗಳಿಸಿದ್ದ ತನ್ಮಯ್ ಶ್ರೀವಾಸ್ತವ ನಿವೃತ್ತಿ

ಮುಂಬೈ: 2008ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಪ್ರಶಸ್ತಿ ಗಳಿಸಿದ್ದ ಭಾರತ ತಂಡದಲ್ಲಿದ್ದ ಬ್ಯಾಟ್ಸ್‌ಮನ್ ತನ್ಮಯ್ ಶ್ರೀವಾಸ್ತವ ಎಲ್ಲ ಮಾದರಿಯ ಕ್ರಿಕೆಟ್‌ಗೆ ಶನಿವಾರ ವಿದಾಯ ಹೇಳಿದ್ದಾರೆ. ಬದುಕಿನ ಹಾದಿಯಲ್ಲಿ ಬೇರೊಂದು ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಸಜ್ಜಾಗುತ್ತಿರುವುದರಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. 30 ವರ್ಷದ ತನ್ಮಯ್ ಎಡಗೈ ಬ್ಯಾಟ್ಸ್‌ಮನ್ ಆಗಿದ್ದಾರೆ.

‘ಸಾಕಷ್ಟು ಮಧುರ ನೆನಪುಗಳನ್ನು ಕೊಡುಗೆಯಾಗಿ ನೀಡಿದ, ಅನೇಕ ಗೆಳೆಯರನ್ನು ಸಂಪಾದಿಸಲು ದಾರಿಯಾದ ಮತ್ತು ಖ್ಯಾತಿ ತಂದುಕೊಟ್ಟ ಕ್ರಿಕೆಟ್‌ಗೆ ವಿದಾಯ ಹೇಳುವ ಸಮಯ ಸಮೀಪಿಸಿದೆ. ಜೂನಿಯರ್ ಕ್ರಿಕೆಟ್ ಮತ್ತು ರಣಜಿ ಟ್ರೋಫಿಯಲ್ಲಿ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದ್ದೇನೆ. 2008ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿಹಿಡಿದದ್ದು ಬಹುದೊಡ್ಡ ಸಾಧನೆ’ ಎಂದು ಕಾನ್ಪುರದ ಈ ಆಟಗಾರ ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಸುದೀರ್ಘ ಬರಹದಲ್ಲಿ ಅವರು ಕ್ರಿಕೆಟ್ ಜೀವನದುದ್ದಕ್ಕೂ ಬೆಂಬಲ ನೀಡಿದ ತಂದೆ-ತಾಯಿ, ಪತ್ನಿ, ಕೋಚ್‌ಗಳು ಮತ್ತು ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆಯ ಆಡಳಿತಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

‘ಅಂಗಣದ ಒಳಗೆ ಮತ್ತು ಹೊರಗೆ ಕ್ರಿಕೆಟ್‌ಗೆ ಸಂಬಂಧಿಸಿ ಸಾಕಷ್ಟು ಸಮಯ ಕಳೆದಿದ್ದೇನೆ. ಆದ್ದರಿಂದ ನಿವೃತ್ತಿ ಕೇವಲ ಔಪಚಾರಿಕವಾಗಿದ್ದು ಕ್ರಿಕೆಟ್ ನ‌ನ್ನೊಂದಿಗೆ ಸದಾ ಇರುತ್ತದೆ’ ಎಂದು ಅವರು ಹೇಳಿದ್ದಾರೆ.

90 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ತನ್ಮಯ್ 4918 ರನ್ ಕಲೆ ಹಾಕಿದ್ದು 10 ಶತಕಗಳು ಮತ್ತು 27 ಅರ್ಧಶತಕಗಳು ಇದರಲ್ಲಿ ಒಳಗೊಂಡಿವೆ. ದೇಶಿ ಕ್ರಿಕೆಟ್‌ನಲ್ಲಿ ಉತ್ತರ ಪ್ರದೇಶ ಪರ ಆಡಿದ್ದ ಅವರು ನಂತರ ಉತ್ತರಾಖಂಡ ತಂಡದ ನಾಯಕರಾಗಿದ್ದರು. ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಮತ್ತು ಕೊಚ್ಚಿ ಟಸ್ಕರ್ಸ್‌ ಪರವಾಗಿ ಕಣಕ್ಕೆ ಇಳಿದಿದ್ದಾರೆ.

ಮಲೇಷ್ಯಾದಲ್ಲಿ 2008ರಲ್ಲಿ ನಡೆದಿದ್ದ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ತನ್ಮಯ್ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. 262 ರನ್ ಕಲೆ ಹಾಕಿದ್ದ ಅವರು ಫೈನಲ್‌ನಲ್ಲಿ 43 ರನ್ ಗಳಿಸಿ ತಂಡ ಪ್ರಶಸ್ತಿ ಗಳಿಸಲು ಪ್ರಮುಖ ಕಾರಣರಾಗಿದ್ದರು. ಆಗ ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸಿದ್ದರು.

TRENDING