Saturday, July 31, 2021
Homeಕ್ರೈಂ ನ್ಯೂಸ್ಮೆಲ್ಕಾರ್ ಹತ್ಯೆ ಪ್ರಕರಣ: ಆರೋಪಿಯ ಕಾಲಿಗೆ ಪೊಲೀಸರ ಗುಂಡೇಟು-ಓರ್ವನ ಬಂಧನ

ಇದೀಗ ಬಂದ ಸುದ್ದಿ

ಮೆಲ್ಕಾರ್ ಹತ್ಯೆ ಪ್ರಕರಣ: ಆರೋಪಿಯ ಕಾಲಿಗೆ ಪೊಲೀಸರ ಗುಂಡೇಟು-ಓರ್ವನ ಬಂಧನ

 ಬಂಟ್ವಾಳ: ಮೆಲ್ಕಾರ್ ಬಳಿಯ ಗುಡ್ಡೆಅಂಗಡಿಯಲ್ಲಿ ಯುವಕನನ್ನು ಮಾರಕಾಯುಧದಿಂದ ಇರಿದು ಕೊಲೆ ಮಾಡಿದ ಆರೋಪಿಯೊಬ್ಬನಿಗೆ ಬಂಟ್ವಾಳ ಪೊಲೀಸರು ಫೈರಿಂಗ್ ನಡೆಸಿದ ಘಟನೆ ಶನಿವಾರ ಮುಂಜಾನೆ ನಡೆದಿದೆ. ಪೊಲೀಸರು ಓರ್ವನನ್ನು ಬಂಧಿಸಿದ್ದು, ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ನಂದಾವರ ನಿವಾಸಿ ಖಲೀಲ್ ಗಾಯಗೊಂಡವನು. ಘಟನೆಯಲ್ಲಿ ಆತನ ಕಾಲಿಗೆ ಗಾಯವಾಗಿದ್ದು, ಆತನನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆತ ತನ್ನ ಸಹಚರರ ಜತೆ ಸೇರಿ ಉಮರ್ ಪಾರೂಕ್ ನನ್ನು ಕೊಲೆ ಮಾಡಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಲು‌ ತೆರಳಿದ ವೇಳೆ ತಪ್ಪಿಸಲು ಯತ್ನಿಸಿದ್ದು, ಹೀಗಾಗಿ ಪೊಲೀಸರು ಫೈರಿಂಗ್ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img