Sunday, June 13, 2021
Homeಜಿಲ್ಲೆರಾಜ್ಯದಲ್ಲಿ ಪ್ರವಾಹಕ್ಕೆ ಅಂದಾಜು 15,000 ಕೋಟಿ ರೂ. ನಷ್ಟ

ಇದೀಗ ಬಂದ ಸುದ್ದಿ

ರಾಜ್ಯದಲ್ಲಿ ಪ್ರವಾಹಕ್ಕೆ ಅಂದಾಜು 15,000 ಕೋಟಿ ರೂ. ನಷ್ಟ

ಬೆಂಗಳೂರು: ನೆರೆ ಪ್ರದೇಶದಲ್ಲಿ ಸಂತ್ರಸ್ತರಿಗೆ ಯಾವುದೇ ಸಮಸ್ಯೆ ಆಗದಂತೆ‌ ನೋಡಿಕೊಳ್ಳಿ. ಯಾರ ಬಾಯಿಗೂ ಆಹಾರವಾಗದಂತೆ ಕೆಲಸ ಮಾಡಿ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ತಮ್ಮ ಸಚಿವ ಸಂಪುಟದ ಸಹದ್ಯೋಗಿಗಳಿಗೆ ತಾಕೀತು ಮಾಡಿದರು.

ಸಂಪುಟ ಸಭೆಯಲ್ಲಿ ನೆರೆ ಪರಿಹಾರ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಿ, ಈ ವೇಳೆ ಕೆಲ ಸಲಹೆ ಸೂಚನೆಗಳನ್ನು ನೀಡಿದರು. ಸಂತ್ರಸ್ತರಿಗೆ ಆಹಾರ, ಬಟ್ಟೆ ಸರಿಯಾಗಿ ಸಿಗುವಂತೆ ಕ್ರಮವಹಿಸಿ. ಮನೆ ಕಳೆದುಕೊಂಡವರ ಪಟ್ಟಿ ತ್ವರಿತವಾಗಿ ಸಿದ್ಧಪಡಿಸಿ. ಅವರಿಗೆ ಪರಿಹಾರ ತಲುಪಿಸುವ ಕೆಲಸವನ್ನು ಶೀಘ್ರವೇ ಮಾಡಿ. 10 ಸಾವಿರ ರೂ. ಪರಿಹಾರ ಎಲ್ಲರಿಗೂ ಸಿಗಬೇಕು. ಮನೆ ಕಳೆದು ಕೊಂಡವರಿಗೆ ಪರಿಹಾರ ವ್ಯವಸ್ಥೆ ‌ಮಾಡಿ. ಆಯಾ ಕ್ಷೇತ್ರದ ಜವಾಬ್ದಾರಿ ಆಯಾ ಶಾಸಕರು, ಸಚಿವರೇ ಹೊಣೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಖಡಕ್ ಎಚ್ಚರಿಕೆ ನೀಡಿದರು ಎನ್ನಲಾಗಿದೆ.

ದಿ ನ್ಯೂಸ್24 ಕನ್ನಡ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img