Thursday, January 21, 2021
Home ಕ್ರಿಕೆಟ್ IPL-2020:ರಾಜಸ್ಥಾನ ರಾಯಲ್ಸ್-ಸನ್‌ರೈಸರ್ಸ್‌ ಹೈದರಾಬಾದ್ ಮುಖಾಮುಖಿ

ಇದೀಗ ಬಂದ ಸುದ್ದಿ

IPL-2020:ರಾಜಸ್ಥಾನ ರಾಯಲ್ಸ್-ಸನ್‌ರೈಸರ್ಸ್‌ ಹೈದರಾಬಾದ್ ಮುಖಾಮುಖಿ

ದುಬೈ: ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯು ಈಗ ರೋಚಕ ಘಟ್ಟ ತಲುಪಿದೆ. ಪ್ಲೇ-ಆಫ್‌ ಪ್ರವೇಶಕ್ಕಾಗಿ ಸಾಮರ್ಥ್ಯ ಮೀರಿ ಹೋರಾಡುವ ಸ್ಥಿತಿ ಪ್ರತಿಯೊಂದು ತಂಡದ ಮುಂದೂ ಇದೆ. ಅದರಲ್ಲೂ ಆಸ್ಟ್ರೇಲಿಯಾದ ‘ಆಪ್ತಮಿತ್ರ’ರಾದ ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ ನಾಯಕತ್ವ ವಹಿಸಿರುವ ತಂಡಗಳ ಮುಂದೂ ಈಗ ಕಠಿಣ ಹಾದಿ ಇದೆ. ವಾರ್ನರ್‌ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಸ್ಮಿತ್ ಮುಂದಾಳತ್ವದ ರಾಜಸ್ಥಾನ ರಾಯಲ್ಸ್‌ ತಂಡಗಳು ಗುರುವಾರ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಪ್ಲೇ ಆಫ್‌ನತ್ತ ಸಾಗಲು ಹೆಚ್ಚು ಅವಕಾಶ ಸಿಗಲಿದೆ. ಇದುವರೆಗೆ ಹತ್ತು ಪಂದ್ಯಗಳನ್ನು ಆಡಿರುವ ರಾಜಸ್ಥಾನ ತಂಡವು ಆರರಲ್ಲಿ ಸೋತು ನಾಲ್ಕರಲ್ಲಿ ಗೆದ್ದಿದೆ. ಒಂಬತ್ತು ಪಂದ್ಯಗಳಲ್ಲಿ ಆಡಿರುವ ವಾರ್ನರ್ ಬಳಗವು ಮೂರು ಗೆದ್ದು ಉಳಿದಿದ್ದರಲ್ಲಿ ಸೋತಿದೆ. ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದೆ.

TRENDING