Sunday, May 16, 2021
Homeಅಂತರ್ ರಾಜ್ಯಬಿಹಾರ ಡಿಸಿಎಂ ಸುಶಿಲ್ ಮೋದಿಗೆ ಕೊರೋನಾ ಪಾಸಿಟಿವ್

ಇದೀಗ ಬಂದ ಸುದ್ದಿ

ಬಿಹಾರ ಡಿಸಿಎಂ ಸುಶಿಲ್ ಮೋದಿಗೆ ಕೊರೋನಾ ಪಾಸಿಟಿವ್

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣಾ ಕಣ ರಂಗೇರುತ್ತಿದೆ. ಈ ಮಧ್ಯೆ, ಬಿಹಾರ ಉಪ ಮುಖ್ಯಮಂತ್ರಿ ಸುಶಿಲ್ ಮೋದಿ ಅವರಿಗೆ ಗುರುವಾರ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ನನಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಸ್ವಲ್ಪ ಜ್ವರ ಬಿಟ್ಟಿರೆ ಬೇರೆ ಯಾವುದೇ ಸಮಸ್ಯೆ ಇಲ್ಲ. ಉತ್ತಮ ಮೇಲ್ವಿಚಾರಣೆಗಾಗಿ ಪಾಟ್ನಾ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ದಾಖಲಾಗಿದ್ದೇನೆ. ಶೀಘ್ರದಲ್ಲೇ ಚುನಾವಣಾ ಪ್ರಚಾರಕ್ಕೆ ಮರಳುವುದಾಗಿ ಸುಶಿಲ್ ಮೋದಿ ಟ್ವೀಟ್ ಮಾಡಿದ್ದಾರೆ.

ಬಿಹಾರದಲ್ಲಿ ಮೂರು ಹಂತದ ವಿಧಾನಸಭೆ ಚುನಾವಣೆಗೆ ಕೇವಲ ಒಂದು ವಾರ ಮಾತ್ರ ಬಾಕಿ ಇದೆ. ಅಕ್ಟೋಬರ್ 28, ನವೆಂಬರ್ 3 ಮತ್ತು 7 ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img