Tuesday, December 1, 2020
Home ಜಿಲ್ಲೆ ಕೊಪ್ಪಳ ಸಿಎಂ ವಿರುದ್ಧ ಹೇಳಿಕೆ : ಯತ್ನಾಳರನ್ನ ಪಕ್ಷದಿಂದ ಹೊರಹಾಕುವಂತೆ ಪ್ರಾರ್ಥಿಸುವೆ : ಕೆ ಎಸ್ ಈಶ್ವರಪ್ಪ

ಇದೀಗ ಬಂದ ಸುದ್ದಿ

ರೈತರ ಪ್ರತಿಭಟನೆಗೆ ಮಣಿದು ಎರಡು ದಿನ...

 ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ 5 ದಿನದಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಸೋಮವಾರ(ನ.30) “ನಿರ್ಣಾಯಕ ಹೋರಾಟಕ್ಕೆ” ದೆಹಲಿಗೆ ಬಂದಿರುವುದಾಗಿ ಘೋಷಿಸಿದ ಬೆನ್ನಲ್ಲೇ ಇದೀಗ ಕೇಂದ್ರ ಸರಕಾರ ರೈತ ಮುಖಂಡರನ್ನು ಮಾತುಕತೆಗೆ...

ರಾಜ್ಯದ ಹಲವು ಜಿಲ್ಲೆಗಳಲ್ಲಿ ಡಿಸೆಂಬರ್ 4 ರಿಂದ...

 ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಡಿಸೆಂಬರ್ 4 ಮತ್ತು 5 ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು: ಹೈವೇಯಲ್ಲಿ ರಾಬರಿ...

 ಬೆಂಗಳೂರು: ರಾಜಧಾನಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಮೊಳಗಿದ್ದು, ದರೋಡೆ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಕಾಲಿಗೆ ಗುಂಡು ಹಾರಿಸಿ ಅನುಬನ್ ನನ್ನು ಬಂಧಿಸಲಾಗಿದೆ. ಬೆಂಗಳೂರಿನ ಲಗ್ಗೆರೆ...

ರಾಜ್ಯ ಸರ್ಕಾರದಿಂದ `ಮರಾಠ ಅಭಿವೃದ್ಧಿ ನಿಗಮ’ ಸ್ಥಾಪಿಸಿ...

ಬೆಂಗಳೂರು: ಮರಾಠ ಪ್ರಾಧಿಕಾರಕ್ಕೆ 50 ಕೋಟಿ ಅನುದಾನ ಮಂಜೂರು ಮಾಡಿ ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯಲ್ಲಿ ಪ್ರಾಧಿಕಾರ ರಚನೆಗೆ ಸಿಎಂ ಬಿಎಸ್‍ವೈ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ರೈಲು ನಿಲ್ದಾಣದ ಪ್ಲಾಟ್ ಫಾರಂ ಟಿಕೆಟ್ ದರ...

ಬೆಂಗಳೂರು, ಡಿ. 01 :  ಕೊರೊನಾ ಸಂದರ್ಭದಲ್ಲಿ ರೈಲು ನಿಲ್ದಾಣದಲ್ಲಿ ಜನರನ್ನು ನಿಯಂತ್ರಣ ಮಾಡಲು ಪ್ಲಾಟ್ ಫಾರಂ ದರದಲ್ಲಿ ಭಾರಿ ಏರಿಕೆ ಮಾಡಲಾಗಿತ್ತು. ಈ ಆದೇಶ ತಾತ್ಕಾಲಿಕವಾಗಿದ್ದು, ನವೆಂಬರ್ 30ರ ತನಕ...

ಸಿಎಂ ವಿರುದ್ಧ ಹೇಳಿಕೆ : ಯತ್ನಾಳರನ್ನ ಪಕ್ಷದಿಂದ ಹೊರಹಾಕುವಂತೆ ಪ್ರಾರ್ಥಿಸುವೆ : ಕೆ ಎಸ್ ಈಶ್ವರಪ್ಪ

 ಕೊಪ್ಪಳ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ಹೇಳಿಕೆ ಮೂರ್ಖತನದ್ದು, ಪಕ್ಷದ ರಾಜ್ಯ ಅಧ್ಯಕ್ಷರು ಯತ್ನಾಳರನ್ನ ಪಕ್ಷದಿಂದ ಹೊರಹಾಕುವಂತೆ ಪ್ರಾರ್ಥಿಸುವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಯತ್ನಾಳ ವಿರುದ್ದ ಗುಡುಗಿದರು.

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಸಿಎಂ ಬಿಎಸ್ವೈ ಬಗ್ಗೆ ಯತ್ನಾಳ ಹೇಳಿಕೆಯು ಫೂಲಿಶ್ ತನದ್ದಾಗಿದೆ.‌ ಪದೆ ಪದೆ ಇಂತಹ ಹೇಳಿಕೆಯಿಂದ ರಾಜ್ಯ ಬಿಜೆಪಿಗೆ ಏನೂ ಆಗಲ್ಲ. ಕೆಲವರಿಗೆ ಮಾತನಾಡಲು ಬಾಯಿ ಚಪಲ ಇರುತ್ತೆ. ಮೊನ್ನೆ ತಾನೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಅಲ್ಲಿ ಯತ್ನಾಳ ಸಹ ಬಂದಿದ್ದರು. ಸಿಎಂ ಸಹಿತ ಎಲ್ಲ ಶಾಸಕರ ಕ್ಷೇತ್ರದ ಸಮಸ್ಯೆಗಳ ಕುರಿತು ಕೇಳಿದ್ದಾರೆ.ಅಲ್ಲಿ ಬಾಯಿ ಮುಚ್ಚಿಕೊಂಡು ಕೂಳಿತುಕೊಂಡು ಈಗ ಇದ್ದಕ್ಕಿದ್ದಂತೆ ಉತ್ತರನ ಪೌರುಷನ ತರ ಹೇಳಿಕೆ ಕೊಟ್ಟು ಸಿಎಂ ಬದಲಾವಣೆ ಆಗ್ತಾರೆ, ಮೋದಿ ಭರವಸೆ ನೀಡಿದ್ದಾರೆ ಅಂದ್ರೆ ಹೇಗೆ ? ಎಂದರು.

ಬಿಜೆಪಿ ಸರ್ಕಾರವನ್ನು ಯಾರಿಂದಲೂ ಬೀಳಿಸಲು ಸಾಧ್ಯವಿಲ್ಲ. ಸ್ವರ್ಗದಲ್ಲಿ ಇರುವ ಇಂದಿರಾ ಗಾಂಧಿ ಬಂದ್ರೂ ಸರ್ಕಾರ ಬೀಳಲ್ಲ. ಯತ್ನಾಳರ ಇಂತಹ ಹೇಳಿಕೆ ಬಿಜೆಪಿ ಸಹಿಸಲ್ಲ. ಅವರ ಮೇಲೆ ಪಕ್ಷ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಿದೆ. ಎಂದರು.

ನೆರೆ ಹಾನಿಯ ವಿಚಾರ :
ಉ.ಕ ಭಾಗದಲ್ಲಿ 103 ವರ್ಷದ ನಂತರ ಇಂತಹ ನೆರೆ ಬಂದಿದೆ.‌ ನಾನು ಈಗಾಗಲೆ ನಮ್ಮ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಏನೇನು ಹಾನಿಯಾಗಿದೆ ಸರ್ವೆ ನಡೆಸಿ ವರದಿ ನೀಡುವಂತೆ ಹೇಳಿದ್ದೇನೆ. ವರದಿ ಬಂದ ನಂತರ ಪರಿಹಾರ ಕಾರ್ಯ ಆರಂಭವಾಗಲಿದೆ ಎಂದರು.

ಕಳೆದ ಬಾರಿ ನೆರೆ ಬಂದಾಗ ನಮ್ಮ‌ ಇಲಾಖೆಯಿಂದ 1500 ಕೋಟಿ ನಾವು ಬಿಡುಗಡೆ ಮಾಡಿದ್ದೆವು. ಈ ಹಿಂದೆ ಯಾವ ಸರ್ಕಾರವು ಇಷ್ಟು ಪರಿಹಾರ ಕೊಟ್ಡಿರಲಿಲ್ಲ. ಈಗ ಮತ್ತೆ ನೆರೆ ಬಂದಿದೆ.‌

ನಮ್ಮಲ್ಲಿ ದುಡ್ಡಿಲ್ಲದೆ ಇರಬಹುದು ಆದರೆ ನಾವು ಸುಮ್ಮನೆ‌ ಕುಳಿತಿಲ್ಲ. ನಾವು ಕುರ್ಚಿ ಬಿಟ್ಟು ಹೋಗಲ್ಲ. ಸಿದ್ದು, ಡಿಕೆಶಿ ಕುರ್ಚಿ ಕನಸು ಕಾಣಬೇಡಿ ಎಂದರಲ್ಲದೆ ಬಡವರಿಗೆ, ನೆರೆ ಸಂತ್ರಸ್ತರಿಗೆ ನಾವು ಪರಿಹಾರ ಕೊಡುವ ಕೆಲಸ ಮಾಡಲಿದ್ದೇವೆ ಎಂದರು.

TRENDING