Saturday, November 28, 2020
Home ಅಂತರ್ ರಾಷ್ಟ್ರೀಯ ರಾಷ್ಟ್ರಪತಿ ಕೈಗೆ ಅಧಿಕಾರ ನೀಡಲು ಸಂವಿಧಾನ ತಿದ್ದುಪಡಿಗೆ ರೆಫರೆಂಡಂ : ಸುಪ್ರೀಂ ಕೋರ್ಟ್

ಇದೀಗ ಬಂದ ಸುದ್ದಿ

ವಾಹನ ಸವಾರರಿಗೆ ಗುಡ್ ನ್ಯೂಸ್: ವಾಯುಮಾಲಿನ್ಯ ಪರೀಕ್ಷೆ...

ಹುಬ್ಬಳ್ಳಿ: ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಪ್ರಯುಕ್ತ ನವೆಂಬರ್ 30 ರಂದು ತಪಾಸಣೆ ಕೇಂದ್ರಗಳಲ್ಲಿ ಉಚಿತ ವಾಯುಮಾಲಿನ್ಯ ಪರೀಕ್ಷೆ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಧಾರವಾಡ...

ಭಾರತ-ಬ್ರಿಟನ್ ಪ್ರಧಾನಿಗಳ ಮಹತ್ವದ ಮಾತುಕತೆ

 ನವದೆಹಲಿ, ನ.28: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ಶುಕ್ರವಾರ ದೂರವಾಣಿ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಮುಂದಿನ ಹತ್ತು ವರ್ಷಗಳಲ್ಲಿ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಬೆಳೆಸುವ...

ಕ್ರಿಮಿನಾಶಕ ಸಿಂಪಡಣೆ ನಂತರ ಒಣಗಿದ ತೊಗರಿ ಬೆಳೆ,...

ಕಲಬುರಗಿ,ನ.28 : ಕ್ರಿಮಿನಾಶಕ ಸಿಂಪರಣೆ ನಂತರ ತೊಗರಿ ಬೆಳೆ ಒಣಗಿ ಹೊಗಿದ್ದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹೀರಾಮಣಿ ತಾಂಡಾದಲ್ಲಿ ನಡೆದಿದೆ. ಕೀಟಗಳ ನಿಯಂತ್ರಣ...

ʼಕಿಸಾನ್ʼ ಯೋಜನೆಯಡಿ ಹಣ ಪಡೆಯುವ ಕುರಿತು ಇಲ್ಲಿದೆ...

 ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಏಳನೇ ಕಂತಿನ ಪಾವತಿ ಡಿಸೆಂಬರ್‌ನಲ್ಲಿ ಮಾಡಬೇಕಿದೆ ಎಂದು ವೇಳಾಪಟ್ಟಿ ತಿಳಿಸುತ್ತಿದೆ. ಈ ಯೋಜನೆಯ ಫಲಾನುಭವಿಗಳು ತಿಳಿದುಕೊಳ್ಳಬೇಕಾದ ಕೆಲವೊಂದು ಮಾಹಿತಿಗಳು ಇಂತಿವೆ:

ಮನೆ ಹೊಂದುವ ಕನಸು ಕಂಡವರಿಗೆ ರಾಜ್ಯ ಸರ್ಕಾರದಿಂದ...

ಬೆಂಗಳೂರು: ಕರ್ನಾಟಕ ಗೃಹ ಮಂಡಳಿ ವತಿಯಿಂದ 98 ವಸತಿ ಯೋಜನೆ ಕೈಗೊಳ್ಳಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಕರ್ನಾಟಕ...

ರಾಷ್ಟ್ರಪತಿ ಕೈಗೆ ಅಧಿಕಾರ ನೀಡಲು ಸಂವಿಧಾನ ತಿದ್ದುಪಡಿಗೆ ರೆಫರೆಂಡಂ : ಸುಪ್ರೀಂ ಕೋರ್ಟ್

ಕೊಲಂಬೊ: ರಾಷ್ಟ್ರಪತಿಯವರ ಕೈಗೆ ಸಮಗ್ರ ಆಡಳಿತ ಸೂತ್ರ ನೀಡಲು ಅಗತ್ಯ ಸಂವಿಧಾನ ತಿದ್ದುಪಡಿ ಮಾಡಬೇಕಾದರೆ ಮೊದಲು ಜನಮತ ಸಂಗ್ರಹ ನಡೆಸಬೇಕಾದ್ದು ಅವಶ್ಯ. ಪ್ರಜೆಗಳೇ ಪ್ರಭುಗಳಾಗಿರುವ ಕಾರಣ ಇದು ಅತೀ ಅಗತ್ಯ ಎಂದು ಶ್ರೀಲಂಕಾದ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಸಂವಿಧಾನ ತಿದ್ದುಪಡಿಯ ಪ್ರಸ್ತಾವನೆಯಲ್ಲಿ ಕಾನೂನು ವ್ಯಾಪ್ತಿಯಿಂದ ರಾಷ್ಟ್ರಪತಿಗೆ ವಿನಾಯಿತಿ ಮತ್ತು ಸಾರ್ವಜನಿಕ ಸಾರ್ವಭೌಮತೆ ಮೀರಿ ಒಂದು ವರ್ಷದ ನಂತರದಲ್ಲಿ ಸಂಸತ್ತನ್ನು ವಿಸರ್ಜಿಸುವ ಅಧಿಕಾರ ಸೇರಿ ಹಲವು ತಿದ್ದುಪಡಿಗಳಿವೆ. ಸರಿಯಾದ ಪರಿಷ್ಕರಣೆ ಆಗಿಲ್ಲ ಎಂದಾದರೆ, ಅದನ್ನು ಜನಮತಕ್ಕೆ ಹಾಕಬೇಕಾದ್ದು ಅವಶ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸದ್ಯದ ಸಂವಿಧಾನದ ಚೌಕಟ್ಟಿನಲ್ಲಿ ರಾಷ್ಟ್ರಪತಿಯವರ ನಡೆಯನ್ನು ಕೋರ್ಟ್​ನಲ್ಲಿ ಪ್ರಶ್ನಿಸುವುದಕ್ಕೆ ಅವಕಾಶವಿದೆ. ಅಲ್ಲದೆ, ರಾಷ್ಟ್ರಪತಿಯವರ ಐದು ವರ್ಷದ ಅವಧಿ ಕೊನೆಗೊಳ್ಳುವುದಕ್ಕೆ ಆರು ತಿಂಗಳು ಇದ್ದಾಗಲಷ್ಟೇ ಸಂಸತ್ತು ವಿಸರ್ಜಿಸುವುದಕ್ಕೆ ಅವಕಾಶವಿದೆ.

ತಿದ್ದುಪಡಿ ಪ್ರಕಾರ, ಸಚಿವ ಸಂಪುಟದ ವಿವಿಧ ಖಾತೆಗಳನ್ನು ತನ್ನ ಬಳಿಯೇ ಇರಿಸಿಕೊಳ್ಳುವ ಅಧಿಕಾರ, ಸಚಿವರ ನೇಮಕ ಮತ್ತು ವಜಾಗೊಳಿಸುವ ಅಧಿಕಾರ, ನ್ಯಾಯಮೂರ್ತಿಗಳ ನೇಮಕ ಮತ್ತು ದೇಶದ ಪ್ರಮುಖ ಸಂಸ್ಥೆಗಳ ಅಧಿಕಾರಿಗಳ ನೇಮಕದ ರಾಷ್ಟ್ರಪತಿಯವರ ಅಧಿಕಾರ ಮುಂದುವರಿಯಲಿದೆ.

ಸಂಸತ್ ಸ್ಪೀಕರ್​ ಮಹಿಂದಾ ಯಪಾ ಅಬೆಯವರ್ದನ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ಸಂವಿಧಾನ ತಿದ್ದುಪಡಿ ಕಾರ್ಯ ನಡೆಯಲಿದೆ. ಕೆಲವು ಸೆಕ್ಷನ್​ಗಳ ಪರಿಷ್ಕರಣೆಯನ್ನು ಸಂಸತ್ತಿನಲ್ಲಿ ಬುಧವಾರ ಮತ್ತು ಗುರುವಾರ ಚರ್ಚಿಸಿ ತೀರ್ಮಾನಿಸಲಾಗುವುದು. ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಕನಿಷ್ಠ 150 ಸದಸ್ಯರ ಬೆಂಬಲ ಬೇಕು ಎಂದು ಹೇಳಿದ್ದಾರೆ.

TRENDING