Sunday, May 16, 2021
Homeಜಿಲ್ಲೆಕೊಪ್ಪಳಎಂಟು ಬಿಜೆಪಿ ಸದಸ್ಯರ ಬೆಂಬಲ ಜಿ.ಪಂ.ಅಧ್ಯಕ್ಷ ಪಟ್ಟಕ್ಕೆ ಕಾಂಗ್ರೆಸ್ ನ ರಾಜಶೇಖರ ಹಿಟ್ನಾಳ- ಆಯ್ಕೆ

ಇದೀಗ ಬಂದ ಸುದ್ದಿ

ಎಂಟು ಬಿಜೆಪಿ ಸದಸ್ಯರ ಬೆಂಬಲ ಜಿ.ಪಂ.ಅಧ್ಯಕ್ಷ ಪಟ್ಟಕ್ಕೆ ಕಾಂಗ್ರೆಸ್ ನ ರಾಜಶೇಖರ ಹಿಟ್ನಾಳ- ಆಯ್ಕೆ

ನಿರೀಕ್ಷೆಯಂತೆ ಕಾಂಗ್ರೆಸ್ ರಾಜಶೇಖರ ಹಿಟ್ನಾಳ ಅವುರು ಬಿಜೆಪಿ ಸದಸ್ಯರ ಬೆಂಬಲದೊಂದಿಗೆ  ಕೊಪ್ಪಳ ಜಿಲ್ಲಾ ಪಂಚಾಯತ ನೂತನ ಅಧ್ಯಕ್ಷರಾಗಿ ಚುನಾಯಿತಗೊಳ್ಳುವ ಮೂಲಕ ರಾಜಕೀಯವಾಗಿ ಬಿಜೆಪಿಗೆ ಭಾರಿ ಹೊಡೆತವನ್ನು ಕೊಟ್ಟಿದ್ದಾರೆ.

ಸೋಮವಾರ ಜಿಲ್ಲಾಡಳಿತ ಭವನದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ನಡೆದ ಜಿ.ಪಂ. ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ರಾಜಶೇಖರ್ ಹಿಟ್ನಾಳ ಹಾಗೂ ಬಿಜೆಪಿಯಿಂದ ಗಂಗಮ್ಮ ಗುಳಗಣ್ಣನವರ್ ನಾಮಪತ್ರ ಸಲ್ಲಿಸಿದರು.

ಒಟ್ಟು 29 ಸದಸ್ಯ ಬಲದ ಜಿ.ಪಂ. ನಲ್ಲಿ 17-ಕಾಂಗ್ರೆಸ್, 11-ಬಿಜೆಪಿ ಹಾಗೂ ಒಬ್ಬರು ಪಕ್ಷೇತರ ಸದಸ್ಯರು ಇದ್ದು ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ನ ವಿಶ್ವನಾಥ ರಡ್ಡಿ ಗೈರು ಹಾಜರಿದ್ದು,  ಹಾಜರಿದ್ದ 28 ಸದಸ್ಯರಲ್ಲಿ 23 ಜನರು ರಾಜಶೇಖರ್ ಹಿಟ್ನಾಳ ಪರವಾಗಿ ಹಾಗೂ 5 ಜನರು ಗಂಗಮ್ಮ ಗುಳಗಣ್ಣನವರ್ ಪರವಾಗಿ ಮತ ಚಲಾಯಿಸಿದರು.

23 ರಲ್ಲಿ ಕಾಂಗ್ರೆಸ್ ನ 16, ಬಿಜೆಪಿ ಯ 06, ಹಾಗೂ ಓರ್ವ ಪಕ್ಷೇತರ ಸದಸ್ಯರು ರಾಜಶೇಖರ ಹಿಟ್ನಾಳಗೆ ಮತ ಚಲಾಯಿಸಿದರೆ, ಗಂಗಮ್ಮ ನವರಿಗೆ ಬಿಜೆಪಿಯ 5 ಮತಗಳು ಬಂದವು. 

ಬಿಜೆಪಿ ಯಿಂದ ಗೆದ್ದು ಬಂದಿರುವ ಉಳಿದ ಆರು ಜನ ಸದಸ್ಯರು ಕಾಂಗ್ರೆಸ್ ನೊಂದಿಗೆ ಗುರಿತಿಸಿಕೊಂಡು, ಬೆಂಬಲಿಸಿದ್ದು ಬಿಜೆಪಿಗೆ ತೀರಾ ಹಿನ್ನಡೆಯಾಗಿದೆ. ರಾಜಕೀಯವಾಗಿ ಕಾಂಗ್ರೆಸ್ ಲಾಭವನ್ನು ಪಡೆದುಕೊಂಡು ಮತ್ತೇ ಜಿ.ಪಂ. ನಲ್ಲಿ ಅಧಿಕಾರದ ಚುಕ್ಕಾಣಿ ಭದ್ರಪಡಿಸಿಕೊಂಡಿದೆ. ಬಿಜೆಪಿ ಯಲ್ಲಿನ ಆಂತರಿಕ ಭಿನ್ನಾಭಿಪ್ರಾಯ  ಬಹಿರಂಗಗೊಂಡಿದೆ, ಮತ್ತು ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲರ  ನಡೆಯ ಬಗ್ಗೆ ಪಕ್ಷದಲ್ಲಿ ಅಸಮಾಧಾನ ವ್ಯಕ್ತವಾಗಿರುವುದು ಕಂಡುಬಂದಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಗಂಗಮ್ಮ ಗುಳಗಣ್ಣನವರ್ ಪಕ್ಷದ ಪರವಾಗಿ ಸ್ಪರ್ಧಿಸಿ, ಸೋಲನ್ನು ಅನುಭವಿಸಿದರು ಸಹ ಪಕ್ಷದ ಆಸ್ತಿತ್ವವನ್ನು ಉಳಿಸಿದ್ದಾರೆ

ಈರಯ್ಯ ಕುರ್ತಕೋಟಿ

ದಿ ನ್ಯೂಸ್ 24 ಕನ್ನಡ    

ಕೊಪ್ಪಳ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img