Sunday, May 16, 2021
Homeಜಿಲ್ಲೆತುಮಕೂರುಎಸ್.ಟಿ ಮೀಸಲಾತಿ ಶೇ.7.5 ಹೆಚ್ಚಿಸಲು ಬಿಜೆಪಿ ಸರ್ಕಾರ ವಿಫಲ

ಇದೀಗ ಬಂದ ಸುದ್ದಿ

ಎಸ್.ಟಿ ಮೀಸಲಾತಿ ಶೇ.7.5 ಹೆಚ್ಚಿಸಲು ಬಿಜೆಪಿ ಸರ್ಕಾರ ವಿಫಲ

ಶಿರಾ : ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಡಳಿತದಲ್ಲಿದ್ದರೂ ಎಸ್.ಟಿ. ಮೀಸಲಾತಿಯನ್ನು ಶೇ 7.5 ಕ್ಕೆ ಹೆಚ್ಚಿಸಲು ವಿಫಲವಾಗಿದೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.

ಅವರು ತಾಲ್ಲೂಕಿನ ಗೌಡಗೆರೆ ಹೋಬಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರ ಪರವಾಗಿ ಪ್ರಚಾರ ಕೈಗೊಂಡು ಮಾತನಾಡಿದರು.

ನಮ್ಮ ಸಮುದಾಯದ ಹಿತ ಕಾಯುವ ಭರವಸೆಯನ್ನು ಕೊಟ್ಟು ಈಡೇರಿಸುವಲ್ಲಿ ಕೂಡ ಬಿಜೆಪಿ ಮೋಸ ಮಾಡಿದೆ ಶ್ರೀರಾಮುಲು ಅವರಿಗೆ ಡಿಸಿಎಂ ಮಾಡುವ ಭರವಸೆ ನೀಡಿ ಗೆದ್ದ ಬಿಜೆಪಿ ಸೋತಿದ್ದ ಲಕ್ಷ್ಮಣ ಸವದಿ ಅವರನ್ನು ಡಿ.ಸಿ.ಎಂ ಮಾಡಿತೇ ಹೊರತು ಗೆಲ್ಲಿಸಲು ಟೊಂಕ ಕಟ್ಟಿದ್ದ ರಾಮುಲು ಅವರಿಗೆ ಖಾತೆ ಬದಲಾಯಿಸಿ ಅವಮಾನಿಸಿದೆ ಎಂದರು.

ಶಾಸಕ ಟಿ‌.ರಘುಮೂರ್ತಿ ಮಾತನಾಡಿ ಹಿಂದಿನ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪರಿಶಿಷ್ಟ ಪಂಗಡದವರಿಗೆ ನೀಡಿದ ಕೊಡುಗೆ ಸ್ಮರಿಸಿದರು.

ಶಾಸಕ ಅನಿಲ್ ಚಿಕ್ಕಮಾದು, ಕಾಂಗ್ರೆಸ್ ಎಸ್.ಟಿ.ಘಟಕ ರಾಜ್ಯಾಧ್ಯಕ್ಷರಾದ ಪಾಲಯ್ಯ,ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶುಭಾ, ಮುಖಂಡರಾದ ಡಿ.ಡಿ.ನಾಯಕ್, ಅಜಯ್, ರಾಕೇಶ್ ಬಾಬು, ಧರಣಿ ಕುಮಾರ್, ರಂಗರಾಜು, ಸತೀಶ್, ಜನಾರ್ಧನ್, ವಿನಾಯಕ್ ಚಿರತಹಳ್ಳಿ, ಬಸವರಾಜ್ ನಾಯಕ, ಬಾಬು ಮತ್ತಿತರರು ಇದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img