Sunday, November 29, 2020
Home ಅಂತರ್ ರಾಜ್ಯ ಮಧ್ಯಪ್ರದೇಶ ಮಹಿಳಾ ಅಭ್ಯರ್ಥಿಗೆ ಐಟಂ ಎಂದ ಮಾಜಿ ಸಿಎಂ ಕಮಲನಾಥ್

ಇದೀಗ ಬಂದ ಸುದ್ದಿ

ಇಂದು ಬೆಳಗ್ಗೆ 11 ಗಂಟೆಗೆ `ಮನ್ ಕಿ...

ನವದೆಹಲಿ : ಕೊರೊನಾ ಸಂಕಷ್ಟದ ಕಾಲದಲ್ಲೂ ತಮ್ಮ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದ ಮೂಲಕ ಜನರನ್ನು ತಲುಪುತ್ತಿರುವ ಪ್ರಧಾನಿ ಮೋದಿ ಇಂದು 11 ಗಂಟೆಗೆ ಮನ್ ಕೀ ಬಾತ್...

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್: 10...

ವಿಶ್ವದ ಶ್ರೀಮಂತ ದೇವಾಲಯ ತಿರುಮಲ ವೆಂಕಟೇಶ್ವರ ದೇಗುಲದಲ್ಲಿ 10 ದಿನ ವೈಕುಂಠ ದ್ವಾರ ತೆರೆಯಲು ನಿರ್ಧರಿಸಲಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ತಿರುಮಲ ತಿರುಪತಿ ದೇಗುಲದಲ್ಲಿ ವೈಕುಂಠ...

EPFO ಪಿಂಚಣಿದಾರರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಪಿಂಚಣಿದಾರರು ಜೀವನ ಪ್ರಮಾಣ ಪತ್ರ ಸಲ್ಲಿಸಲು ನೌಕರರ ಭವಿಷ್ಯ ನಿಧಿ ಸಂಸ್ಥೆ(EPFO) ಫೆಬ್ರವರಿ 28 ರ ವರೆಗೆ ಗಡುವು ವಿಸ್ತರಿಸಿದೆ. ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ...

ʼರಾಮಮಂದಿರ’ ನಿರ್ಮಾಣವಾಗುತ್ತಿದ್ದಂತೆ ದೂರವಾಗಲಿದೆಯಂತೆ ಕೊರೊನಾ :ಮುಖ್ಯಮಂತ್ರಿ ಯೋಗಿ

ಹೈದ್ರಾಬಾದ್: ರಾಮ ಮಂದಿರ ನಿರ್ಮಾಣವಾಗುತ್ತಿದ್ದಂತೆ ಭಾರತ ಕೋವಿಡ್ ಮಣಿಸಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಡಿಸೆಂಬರ್ 1 ರಂದು ನಡೆಯಲಿರುವ ಗ್ರೇಟರ್ ಹೈದ್ರಾಬಾದ್...

ವೈದ್ಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಬೆಂಗಳೂರು : ವೈದ್ಯ ವಿದ್ಯಾರ್ಥಿಗಳಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬಹುಮುಖ್ಯ ಮಾಹಿತಿಯೊಂದನ್ನು ನೀಡಿದ್ದು, ಜನವರಿ 19 ರಿಂದ ಎಂಬಿಬಿಎಸ್ ಸೇರಿದಂತೆ ವಿವಿಧ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವ ನಿರ್ಧಾರವನ್ನು...

ಮಧ್ಯಪ್ರದೇಶ ಮಹಿಳಾ ಅಭ್ಯರ್ಥಿಗೆ ಐಟಂ ಎಂದ ಮಾಜಿ ಸಿಎಂ ಕಮಲನಾಥ್

 ‘ಇಂದಿನ ಯುಗದಲ್ಲಿ ಮಹಿಳೆಯರಿಗೆ ಗೌರವ ನೀಡುವುದು ದೇವಿಯ ಪೂಜೆ ಮಾಡುವಷ್ಟೇ ಅವಶ್ಯಕವಾಗಿದೆ’ ಹೀಗಂತ ನವರಾತ್ರಿಯ ಸಂಭ್ರಮದ ಹಬ್ಬದ ಆರಂಭದ ದಿನವಾದ ನಿನ್ನೆ, ಕಾಂಗ್ರೆಸ್​ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್​​ ಗಾಂಧಿ ಟ್ವೀಟ್​ ಮಾಡಿದ್ರು. ಬಳಿಕ ನವರಾತ್ರಿಯ ಶುಭಕಾಮನೆಗಳು ಅಂತಾ ಶುಭವನ್ನು ಕೂಡ ಕೋರಿದ್ರು. ಒಂದೆಡೆ ಅವರು ಟ್ವೀಟ್ ಮಾಡಿದ್ರೆ, ಇನ್ನೊಂದೆಡೆ ಅವರದ್ದೇ ಪಕ್ಷದ ಹಿರಿಯ ನಾಯಕ ಹಾಗೂ ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್​ ನಾಥ್ ಮಹಿಳಾ ಅಭ್ಯರ್ಥಿಯನ್ನು ಐಟಂ ಅಂತಾ ಬಹಿರಂಗ ಸಭೆಯಲ್ಲೆ ಕರೆದು ವ್ಯಂಗ್ಯವಾಡಿದ್ದಾರೆ.

ಹೌದು.. ಮಧ್ಯಪ್ರದೇಶ ಬಿಜೆಪಿ ಅಭ್ಯರ್ಥಿ ಇಮಾರ್ತಿ ದೇವಿ ಅವರನ್ನು ಐಟಮ್​ ಎಂದು ಕರೆಯುವ ಮೂಲಕ ಮಧ್ಯ ಪ್ರದೇಶ ಮಾಜಿ ಸಿಎಂ ಕಮಲನಾಥ್​​ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ.

ಮಧ್ಯ ಪ್ರದೇಶ ಉಪ ಚುನಾವಣೆ ಹಿನ್ನೆಲೆ ಕಾಗ್ರೆಸ್​​ ಅಭ್ಯರ್ಥಿ ಸುರೇಶ್​​ ರಾಜೆ ಪರವಾಗಿ ಇಂದು ದಾಬ್ರಾ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದ ಮಾಜಿ ಸಿಎಂ ಕಮಲನಾಥ್​​. ಸುರೇಶ್​​ ಅವರ ಪ್ರತಿ ಸ್ಪರ್ಧಿ ಹಾಗೂ ಬಿಜೆಪಿ ನಾಯಕಿ ಇಮಾರ್ತಿ ದೇವಿ ಅವರನ್ನು ಐಟಮ್​ ಎಂದು ಕರೆದಿದ್ದಾರೆ. ನೇರವಾಗಿ ಇಮಾರ್ತಿ ದೇವಿಯವರ ಹೆಸರು ಬಳಸದ ಅವರು.. ನಮ್ಮ ಅಭ್ಯರ್ಥಿ ಅವರಂತಲ್ಲ.. ಅವರ ಹೆಸರು ಏನೋ ಇದೆಯಲ್ಲ ಎಂದು ನೆರೆದಿದ್ದ ಕಾರ್ಯಕರ್ತರನ್ನು ಪ್ರಶ್ನಿಸುತ್ತಾರೆ.. ಅತ್ತಲಿಂದ ಕಾರ್ಯಕರ್ತರು ಇಮಾರ್ತಿ ದೇವಿಯೆಂದು ಒಕ್ಕೊರಲಿನಿಂದ ಕೂಗುತ್ತಾರೆ. ಬಳಿಕ ಮಾತನಾಡುವ ಕಮಲ್​​ನಾಥ್​​ ನಾನ್ಯಾಕೆ ಆವರ ಹೆಸರೆತ್ತಲಿ.. ನನಗಿಂತ ಹೆಚ್ಚಾಗಿ ಅವರ ಬಗ್ಗೆ ನಿಮಗೆ ತಿಳಿದಿದೆ. ನೀವು ನನ್ನನ್ನು ಮೊದಲೇ ಸಮಾಧಾನಗೊಳಿಸಬೇಕಿತ್ತು ಎನ್ನುವ ಕಮಲ್​ನಾಥ್​ ಅದೇನು ಐಟಮ್​ ಇದೆ? ಎಂದು ಇಮಾರ್ತಿ ದೇವಿ ಅವರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ.

ಮೌನ ಪ್ರತಿಭಟನೆಗೆ ನಿರ್ಧಾರ

ಇನ್ನು ಕಮಲ್​ನಾಥ್​ ಅವರ ಅಶ್ಲೀಲ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​. ಬಿಜೆಪಿ ನಾಯಕಿ ಇಮಾರ್ತಿ ದೇವಿಯವರ ಬಗ್ಗೆ ಈ ತರನಾದ ಪದ ಬಳಕೆ ಮಾಡಿರುವ ಕಮಲ್​ನಾಥ್​​ ನಾಚಿಕೆ ಪಡಬೇಕು. ಅವರ ಹೇಳಿಕೆಯನ್ನು ಖಂಡಿಸಿ ಅ.19 ರಂದು ಬೆಳಗ್ಗೆ 10ರಿಂದ 12 ಗಂಟೆ ವರೆಗೆ 2 ಗಂಟೆಗಳ ಕಾಲ ನಾನು ಮೌನ ಪ್ರತಿಭಟನೆ ಕೈಗೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಮಧ್ಯ ಪ್ರದೇಶ ಕಾಂಗ್ರೆಸ್​​ ನಾಯಕರಲ್ಲಿ ಕಮಲ್​ನಾಥ್​​ ಒಬ್ಬರೇ ಹೀಗಲ್ಲ.. ಅದೇ ರಾಜ್ಯದ ಹಿರಿಯ ಕಾಂಗ್ರೆಸ್​​ ನಾಯಕ ಎನ್ನಿಸಿಕೊಂಡಿರುವ ದಿಗ್ವಿಜಯ ಸಿಂಗ್​ ಕೂಡ.. 2013ರ ಚುನಾವಣಾ ಪ್ರಚಾರದ ವೇಳೆ ವೇದಿಕೆ ಮೇಲಿದ್ದ ತಮ್ಮದೇ ಪಕ್ಷದ ಸಂಸದೆ ಮೀನಾಕ್ಷಿ ನಟರಾಜನ್​ ಅವರನ್ನು(ಯೇ ಸೌ ಟಂಚ್​ ಮಾಲ್​ ಹೈ) ಇದು ಪಕ್ಕಾ ಮಾಲ್​ ಎನ್ನುವ ಮೂಲಕ ವಿವಾದಕ್ಕೆ ಕಾರಣರಾಗಿದ್ದರು.

ಇನ್ನು ಕಮಲ್​ ನಾಥ್ ಅವರ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಇದು ಕಾಂಗ್ರೆಸ್​ ಮನಸ್ಥಿತಿ ತೋರಿಸುತ್ತದೆ ಅಂತಾ ಖಾರವಾಗಿ ಟ್ವೀಟ್ ಮಾಡಿದ್ದಾರೆ.

TRENDING