Tuesday, December 1, 2020
Home ಜಿಲ್ಲೆ ಬೆಂಗಳೂರು ಬಿಬಿಎಂಪಿ ಲೆಕ್ಕಾಧಿಕಾರಿ ಗೋವಿಂದರಾಜು ಅಮಾನತು

ಇದೀಗ ಬಂದ ಸುದ್ದಿ

ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು: ಹೈವೇಯಲ್ಲಿ ರಾಬರಿ...

 ಬೆಂಗಳೂರು: ರಾಜಧಾನಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಮೊಳಗಿದ್ದು, ದರೋಡೆ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಕಾಲಿಗೆ ಗುಂಡು ಹಾರಿಸಿ ಅನುಬನ್ ನನ್ನು ಬಂಧಿಸಲಾಗಿದೆ. ಬೆಂಗಳೂರಿನ ಲಗ್ಗೆರೆ...

ರಾಜ್ಯ ಸರ್ಕಾರದಿಂದ `ಮರಾಠ ಅಭಿವೃದ್ಧಿ ನಿಗಮ’ ಸ್ಥಾಪಿಸಿ...

ಬೆಂಗಳೂರು: ಮರಾಠ ಪ್ರಾಧಿಕಾರಕ್ಕೆ 50 ಕೋಟಿ ಅನುದಾನ ಮಂಜೂರು ಮಾಡಿ ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯಲ್ಲಿ ಪ್ರಾಧಿಕಾರ ರಚನೆಗೆ ಸಿಎಂ ಬಿಎಸ್‍ವೈ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ರೈಲು ನಿಲ್ದಾಣದ ಪ್ಲಾಟ್ ಫಾರಂ ಟಿಕೆಟ್ ದರ...

ಬೆಂಗಳೂರು, ಡಿ. 01 :  ಕೊರೊನಾ ಸಂದರ್ಭದಲ್ಲಿ ರೈಲು ನಿಲ್ದಾಣದಲ್ಲಿ ಜನರನ್ನು ನಿಯಂತ್ರಣ ಮಾಡಲು ಪ್ಲಾಟ್ ಫಾರಂ ದರದಲ್ಲಿ ಭಾರಿ ಏರಿಕೆ ಮಾಡಲಾಗಿತ್ತು. ಈ ಆದೇಶ ತಾತ್ಕಾಲಿಕವಾಗಿದ್ದು, ನವೆಂಬರ್ 30ರ ತನಕ...

ಇಂದಿನಿಂದ ಮೆಡಿಕಲ್ ಕಾಲೇಜು ಓಪನ್

ಬೆಂಗಳೂರು(ಡಿ. 01): ಎಂಟು ತಿಂಗಳ ಬಳಿಕ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಮೆಡಿಕಲ್ ಕಾಲೇಜುಗಳು ಇವತ್ತಿನಿಂದ ಆರಂಭಗೊಂಡಿವೆ. ಇಂದು ಹೋಮ್ ಸೈನ್ಸ್ ತರಗತಿಗಳು ಶುರುವಾಗುತ್ತಿವೆ. ಆದರೆ, ನಾಳೆ ಡಿ...

60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ರಾಜ್ಯ...

ಮಡಿಕೇರಿ : 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಇನ್ಮುಂದೆ 60 ವರ್ಷ ತುಂಬಿದ ಹಿರಿಯ ನಾಗರಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಟ ನಡೆಸಿ...

ಬಿಬಿಎಂಪಿ ಲೆಕ್ಕಾಧಿಕಾರಿ ಗೋವಿಂದರಾಜು ಅಮಾನತು

ಬೆಂಗಳೂರು,ಅ.19- ನಿಯಮ ಉಲ್ಲಂಘಿಸಿ ಬರೋಬ್ಬರಿ 680 ಕೋಟಿ ರೂ.ಗಳ ಬಿಲ್‍ಗಳನ್ನು ಪಾವತಿಸಿರುವುದು ಬಿಬಿಎಂಪಿ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬಿಬಿಎಂಪಿಯ ಮುಖ್ಯ ಲೆಕ್ಕಾಧಿಕಾರಿಯಾಗಿದ್ದ ಡಾ.ಆರ್.ಗೋವಿಂದ ರಾಜ್ ಅವರನ್ನು ಸರ್ಕಾರ ಅಮಾನತುಗೊಳಿಸಿ ಆದೇಶಿಸಿದೆ.
ಗುತ್ತಿಗೆದಾರರಿಗೆ ಹಣ ಬಿಡುಗಡೆ ಜೇಷ್ಠತೆ ನಿಯಮ ಅನುಸರಿಸಿ ಹಣ ಬಿಡುಗಡೆ ಮಾಡಬೇಕೆಂಬ ನಿಯಮ ಉಲ್ಲಂಘಿಸಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ಅ.2ರಂದು ಏಕಾಏಕಿ ಮುಖ್ಯ ಲೆಕ್ಕಾಧಿಕಾರಿಕಚೇರಿ ಬೀಗ ಮುದ್ರೆ (ಸೀಲ್) ಹಾಕಿ ಗೋವಿಂದರಾಜ್ ಅವರನ್ನು ಬಿಬಿಎಂಪಿ ಸೇವೆಯಿಂದ ಬಿಡುಗಡೆ ಮಾಡಿ, ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಗೆ ವಾಪಾಸು ಕಳುಹಿಸಲಾಗಿತ್ತು.

ಜತೆಗೆ ಮುಖ್ಯ ಲೆಕ್ಕಾಧಿಕಾರಿ ಜೇಷ್ಠತೆ ಉಲ್ಲಂಘನೆ, ಕಾನೂನು ಬಾಹಿರವಾಗಿ ಹಣ ಬಿಡುಗಡೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿತ್ತು. ಅದರಂತೆ ಮುಖ್ಯ ಲೆಕ್ಕಾಧಿಕಾರಿ ಕಚೇರಿಯಲ್ಲಿ ಇರುವ ಎಲ್ಲ ಕಡತಗಳನ್ನು ಜಪ್ತಿ ಮಾಡಿ ಪರಿಶೀಲನೆ ನಡೆಸಿದ್ದು, ಬರೋಬ್ಬರಿ 680 ಕೋಟಿ ರು.ಗಳನ್ನು ಕಾನೂನು ಬಹಿರವಾಗಿ ಬಿಡುಗಡೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಈ ಕುರಿತು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರು, ಸರ್ಕಾರದ ಆರ್ಥಿಕ ಇಲಾಖೆಗೆ ಬರೋಬ್ಬರಿ 64 ಪುಟಗಳ ಪತ್ರ ಬರೆದು ಬಿಬಿಎಂಪಿಯಲ್ಲಿ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುವ ಅವಧಿಯಲ್ಲಿ ಡಾ.ಆರ್.ಗೋವಿಂದರಾಜ್ ಅವರು ಕಾನೂನು ಬಾಹಿರವಾಗಿ ಹಣ ಬಿಡುಗಡೆ, ಗುತ್ತಿಗೆದಾರರ ಜೇಷ್ಠತೆ ನಿಯಮ ಉಲ್ಲಂಘಿಸಿ ಬಿಲ್ ಪಾವತಿ ಹಾಗೂ ಪಾಲಿಕೆಗೆ ಮುಖ್ಯ ಲೆಕ್ಕಾಧಿಕಾರಿಯ ತಪ್ಪು ನಿರ್ಧಾರದಿಂದ ಉಂಟಾಗಿರುವ ನಷ್ಟ ಸೇರಿದಂತೆ ಒಟ್ಟು 680 ಕೋಟಿ ರೂ. ಪಾವತಿ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ. ಹೀಗಾಗಿ ಅವರ ವಿರುದ್ಧ ಇಲಾಖಾ ತನಿಖೆ ನಡೆಸಿ ಸೇವೆಯಿಂದ ಅಮಾನತುಗೊಳಿಸುವಂತೆ ಶಿಫಾರಸು ಮಾಡಿದ್ದರು.

ಅಮಾನತ್ತು ಆದೇಶ: ಬಿಬಿಎಂಪಿ ಆಯುಕ್ತರು ಪತ್ರದ ಆಧಾರದ ಮೇಲೆ ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಜೆ.ಶಶಿಧರ್ ಅವರು ಡಾ.ಆರ್. ಗೋವಿಂದ ರಾಜ್ ಅವರನ್ನು ಅಮಾತನು ಮಾಡಿ ಆದೇಶಿಸಿದ್ದಾರೆ. ಅಲ್ಲದೇ ಇಲಾಖಾ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಆದೇಶಿಸಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದ ನ್ಯೂನ್ಯತೆಗಳ ಪಟ್ಟಿ:
1. ರಸ್ತೆಗಳ ವಾರ್ಷಿಕ ನಿರ್ವಹಣೆ ಎಸ್ಕ್ರೋ ಖಾತೆ ಜೇಷ್ಠತೆ ಉಲ್ಲಂಘಿಸಿ 21.38 ಕೋಟಿ ರೂ. ಬಿಡುಗಡೆ.
2. ಬಿಬಿಎಂಪಿಯ ಕಾಮಗಾರಿಗಳಿಗೆ ರಾಜ್ಯ ಹಣಕಾಸು ಆಯೋಗದ ಅನುದಾನ 133 ಕೋಟಿ ರು. ಬಿಡುಗಡೆ.
3. ಬಿಬಿಎಂಪಿಯ ಅನುದಾನದಲ್ಲಿ ಕೈಗೊಂಡ ಕಾಮಗಾರಿಗೆ ಸರ್ಕಾರದ ವಿಶೇಷ ಮೂಲಸೌಕರ್ಯಕ್ಕೆ ಬಂಡವಾಳ ಬೆಂಬಲ ಯೋಜನೆಯ 12.26 ಕೋಟಿ ರೂ. ಬಿಡುಗಡೆ.
4. ಆಫ್ ಲೈನ್‍ನಲ್ಲಿ ಕಾನೂನು ಬಾಹಿರವಾಗಿ 87.98 ಕೋಟಿ ರು. ಬಿಡುಗಡೆ.
5. ಜಿಎಸ್‍ಟಿ ಬಗ್ಗೆ ತಪ್ಪು ಅಭಿಪ್ರಾಯದಿಂದ ಬಿಬಿಎಂಪಿಗೆ 4.39 ಕೋಟಿ ರೂ. ನಷ್ಟ.
6. 14 ಹಣಕಾಸು ಆಯೋಗದ 421 ಕೋಟಿ ರು. ಅನುದಾನವನ್ನು ತಾತ್ಕಾಲಿಕ ಮಾರ್ಗಪಲ್ಲಟ.
ಬಿಬಿಎಂಪಿಯಲ್ಲಿ ಆರ್ಥಿಕ ಶಿಸ್ತು ತರುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಂಡಿದ್ದರು. ಮುಖ್ಯ ಲೆಕ್ಕಾಧಿಕಾರಿಯೇ ಈ ರೀತಿ ನಿಯಮ ಉಲ್ಲಂಘಿಸಿ ಹಣ ಬಿಡುಗಡೆ ಮಾಡಿರುವುದು ಕಂಡು ಬಂದಿದೆ. ಮುಂದಿನ ದಿನದಲ್ಲಿ ಇಡೀ ಕಚೇರಿ ಅಧಿಕಾರಿ ಸಿಬ್ಬಂದಿಯನ್ನು ಬೇರೆ ವಿಭಾಗಗಳಿಗೆ ವರ್ಗಾವಣೆ ಮಾಡಿ ಬೇರೆ ಅಧಿಕಾರಿ ಸಿಬ್ಬಂದಿ ನಿಯೋಜಿಸಲಾಗುವುದು.
 
TRENDING