Monday, October 26, 2020
Home ಕೋವಿಡ್-19 ಡಿಸಿಎಂ ಗೋವಿಂದ ಕಾರಜೋಳ ಪುತ್ರ ಡಾ.ಗೋಪಾಲ ಆರೋಗ್ಯ ಸ್ಥಿತಿ ಗಂಭೀರ

ಇದೀಗ ಬಂದ ಸುದ್ದಿ

ಕಿರಿಯ ಆಟಗಾರರಿಗೆ ಜೆರ್ಸಿ ವಿತರಿಸುತ್ತಿರುವ ಧೋನಿ

ಹೊಸದಿಲ್ಲಿ: ಚೆನ್ನೈ ತಂಡ ಪ್ರಸಕ್ತ ಐಪಿಎಲ್‌ನಿಂದ ನಿರ್ಗಮಿಸಲು ಇನ್ನೊಂದೇ ಹೆಜ್ಜೆ ಬಾಕಿ. ಈ ನಡುವೆ ನಾಯಕ ಧೋನಿ ಎದುರಾಳಿ ಆಟಗಾರರಿಗೆಲ್ಲ ತನ್ನ “ನಂ.7′ ಜೆರ್ಸಿ ಹಂಚುತ್ತಿರುವುದು ಅವರ ಅಭಿಮಾನಿಗಳಲ್ಲಿ ಅನೇಕ...

ಸಿಗಂದೂರು ಚೌಡೇಶ್ವರಿ ದೇವಾಲಯ ವಿವಾದ :...

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ವಿವಾದ ಉಂಟಾದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಶಿವಮೊಗ್ಗದಲ್ಲಿ ಮಾತನಾಡಿದ ಸಿಎಂ ಬಿ.ಎಸ್....

ತಮಿಳುನಾಡು : ಸರ್ಕಾರಿ ನೌಕರರಿಗೆ ಜ.1, 2021ರಿಂದ...

ತಮಿಳುನಾಡು : ರಾಜ್ಯದ ಸರ್ಕಾರಿ ಕಚೇರಿಗಳು 2021ರ ಜನವರಿ 1ರಿಂದ ವಾರದಲ್ಲಿ ಐದು ದಿನ ಮಾತ್ರವೇ ಕೆಲಸ ನಿರ್ವಹಿಸಲು ತೀರ್ಮಾನ ಕೈಗೊಳ್ಳಲಾಗಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.

ಸಿಕ್ಕಿಂನಲ್ಲಿ ಭಾರತೀಯ ಯೋಧರ ಜತೆಗೂಡಿ ಆಯುಧ ಪೂಜೆ...

ಚೀನಾ-ಭಾರತ ಗಡಿಭಾಗದಲ್ಲಿ ಸಂಘರ್ಷಮಯ ಸನ್ನಿವೇಶ ಮುಂದುವರಿದಿರುವಂತೆಯೇ ಸೈನಿಕರಲ್ಲಿ ಆತ್ಮಬಲ ತುಂಬುವ ಕೆಲಸವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಡಿದ್ದಾರೆ. ದಸರಾವನ್ನು ಸೈನಿಕರ ಜತೆಗೆ ಆಚರಿಸಿಕೊಳ್ಳುವುದಾಗಿ ಘೋಷಿಸಿದ್ದ ಅವರು, ಇಂದು ಸಿಕ್ಕಿಂನಲ್ಲಿ...

ನೂತನ ಸಾಹಿತ್ಯ ಪರಿಷತ್ ಭವನ ಉದ್ಘಾಟಿಸಿದ ಸಿಎಂ

ನಗರದ ಗೋಪಿಶೆಟ್ಟಿಕೊಪ್ಪದಲ್ಲಿ ₹1.50 ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಸಾಹಿತ್ಯ ಭವನವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಾಹಿತ್ಯದ ತವರು ಶಿವಮೊಗ್ಗ. ಮೊದಲ ಜ್ಞಾನಪೀಠ ಪ್ರಶಸ್ತಿ...

ಡಿಸಿಎಂ ಗೋವಿಂದ ಕಾರಜೋಳ ಪುತ್ರ ಡಾ.ಗೋಪಾಲ ಆರೋಗ್ಯ ಸ್ಥಿತಿ ಗಂಭೀರ

ಮುಧೋಳ ಶಾಸಕ, ಕರ್ನಾಟಕ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಕೊರೊನಾ ಸೋಂಕಿನಿಂದ ಈಗಷ್ಟೇ ಚೇತರಿಸಿಕೊಂಡಿದ್ದಾರೆ. ಆದರೆ ಅವರ ಪುತ್ರ ಡಾ.ಗೋಪಾಲ ಕಾರಜೋಳ ಅವರಿಗೆ ಕೊರೊನಾ ಸೋಂಕು ಇನ್ನೂ ಬಾಧಿಸುತ್ತಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಡಿಸಿಎಂ ಕಾರಜೋಳ ಅವರ ಇಡೀ ಕುಟುಂಬ ಕೊವಿಡ್ 19 ಬಾಧಿತವಾಗಿತ್ತು. ಇತ್ತೀಚೆಗಷ್ಟೇ ಕಾರಜೋಳ ಅವರು ಗುಣಮುಖರಾಗಿದ್ದರು. ಇತ್ತೀಚೆಗೆ ಶಿರಾ ಉಪ ಚುನಾವಣೆ ಕ್ಷೇತ್ರದ ಅಭ್ಯರ್ಥಿ ಡಾ. ರಾಜೇಶ್ ಗೌಡ ಅವರ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಗೋವಿಂದ ಕಾರಜೋಳ ಪಾಲ್ಗೊಂಡಿದ್ದರು.

ಇದೀಗ ಕಾರಜೋಳ ಅವರ ಪುತ್ರ ಗೋಪಾಲ ಕಾರಜೋಳ ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 24 ಗಂಟೆಗಳಿಂದ ವೆಂಟಿಲೇಟರ್ ಸಹಾಯದಿಂದ ಉಸಿರಾಟ ನಡೆಸುತ್ತಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಆರೋಗ್ಯದಲ್ಲಿ ಸುಧಾರಣೆ ಕಂಡು ಬಾರದ ಹಿನ್ನಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಚೆನ್ನೈ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ.

ಕಾರಜೋಳ ಪ್ರತಿಕ್ರಿಯೆ:

ಶಿರಾದಲ್ಲಿ ಕಾಣಿಸಿಕೊಂಡಿದ್ದ ಕಾರಜೋಳ ಅವರು ಪ್ರವಾಹ ಪೀಡಿತ ಕಲಬುರಗಿಗೆ ಏಕೆ ಹೋಗಿಲ್ಲ ಎಂದು ವಿಪಕ್ಷ, ಸಾರ್ವಜನಿಕರು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕಾರಜೋಳ ”ನನಗೆ 70 ವರ್ಷ ವಯಸ್ಸು, ನನ್ನ ಇಡೀ ಜೀವಮಾನ ನಾನು ಹೇಗೆ ಕೆಲಸ ಮಾಡಿದ್ದೇನೆ ಎಂಬುದನ್ನು ಜನರು ಗಮನಿಸಿದ್ದಾರೆ. ನಾನು ಈ ಸಂದರ್ಭದಲ್ಲಿ ಆರನೂರು ಏಳನೂರು ಕಿ.ಮೀ. ದೂರದ ಕಲಬುರಗಿಗೆ ಪ್ರಯಾಣಿಸಲು ಆಗುತ್ತಿಲ್ಲ. ಕಾರಣ ನನ್ನ ಕುಟುಂಬ ಪೂರ್ತಿ ಕೊರೊನಾ ಸಂಕಷ್ಟಕ್ಕೆ ಸಿಲುಕಿದೆ” ಎಂದು ಸ್ಪಷ್ಟನೆ ನೀಡಿದ್ದರು.

ನಾನು ಹೋಗದಿದ್ದರೇ ಏನಾಯ್ತು? ನನಗಿಂತ ಪವರ್‌ಫುಲ್ ಮಿನಿಸ್ಟರ್, ಕಂದಾಯ ಸಚಿವ ಆರ್. ಅಶೋಕ್ ಅವರು ಅಲ್ಲಿಗೆ ಭೇಟಿ ಕೊಟ್ಟು, ಪ್ರವಾಹ ಪೀಡಿತರನ್ನು ಭೇಟಿ ಮಾಡಿದ್ದಾರೆ ಎಂದು ಮಾಧ್ಯಮಗಳ ಮುಂದೆ ಕಲಬುರಗಿ ಜಿಲ್ಲೆಯ ಜನರಿಗೆ ಸಮಜಾಯಿಷಿ ಕೊಟ್ಟಿದ್ದರು.

ಪ್ರವಾಹಕ್ಕೆ ಸಿಲುಕಿ ನಲಗುತ್ತಿರುವ ಜನರನ್ನು ಕಡೆಗಣಿಸಿ ಚುನಾವಣಾ ಪ್ರಚಾರಕ್ಕೆ ತೆರಳಿರುವುದು ಸರಿಯಲ್ಲ. ನಮ್ಮ ಜಿಲ್ಲಾ ಉಸ್ತುವಾರಿ ಸ್ಥಾನಕ್ಕೆ ಕಾರಜೋಳ ಅವರು ರಾಜೀನಾಮೆ ಕೊಡಲಿ ಎಂದು ಅಲ್ಲಿನ ಜನರು ಒತ್ತಾಯಿಸಿದ್ದನ್ನು ಇಲ್ಲಿಸ್ಮರಿಸಬಹುದು.

TRENDING