Saturday, October 31, 2020
Home ಅಂತರ್ ರಾಷ್ಟ್ರೀಯ ಚೀನಾದ ಆಗಸದಲ್ಲಿ ಒಂದೇ ಸಮಯಕ್ಕೆ 3 ಸೂರ್ಯ ದರ್ಶನ !

ಇದೀಗ ಬಂದ ಸುದ್ದಿ

ಮಾಜಿ ಮೇಯರ್ ಸಂಪತ್ ರಾಜ್ ನಾಪತ್ತೆ

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಹಾಗೂ ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದು, ಸಿಸಿಬಿ ಪೊಲೀಸರು ಸಂಪತ್...

ಮನೆಯೊಂದರಲ್ಲಿದ್ದ 435 ಕೆ.ಜಿ ಬ್ರೌನ್​ ಶುಗರ್ ವಶಕ್ಕೆ

ತೌಬಲ್ ಜಿಲ್ಲೆಯ ಮೌಜಿಂಗ್ ಪ್ರದೇಶದ ಮನೆಯೊಂದರ ಮೇಲೆ ದಾಳಿ ಮಾಡಿ ಸುಮಾರು 435 ಕೆ.ಜಿಗೂ ಹೆಚ್ಚು ಬ್ರೌನ್ ಶುಗರ್ ವಶಪಡಿಸಿಕೊಳ್ಳಲಾಗಿದೆ ಎಂದು ಮಣಿಪುರ ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ಫೋಸಿಸ್ ಸೇರಿ 3 ಸಂಸ್ಥೆಗಳಿಂದ ಭೀಮಾ ನೆರೆ...

ಕಲಬುರಗಿ: ಭೀಮಾ ನದಿ ಪ್ರವಾಹ ಸಂತ್ರಸ್ತರ ನೆರವಿಗೆ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ, ಇನ್ಫೋಸಿಸ್ ಹಾಗೂ ರಾಮಕೃಷ್ಣ ಸೇವಾ ಆಶ್ರಮ ಮುಂದಾಗಿವೆ. ಮೂರು ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ...

ಕಾರ್ಮಿಕರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿ: ಡಿಸಿ...

ಮೈಸೂರು: ಜಿಲ್ಲೆಯ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಕಾರ್ಮಿಕರಿಗೆ ಕಡ್ಡಾಯವಾಗಿ ಆಗಾಗ್ಗೆ ಕೋವಿಡ್-19 ಪರೀಕ್ಷೆ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ...

ರಾಜ್ಯೋತ್ಸವಕ್ಕೆ ಕ್ಯಾತೆ ತೆಗೆದ ಮಹಾರಾಷ್ಟ್ರ

ಮುಂಬೈ (ಮಹಾರಾಷ್ಟ್ರ): ನಾವು ಬೆಳಗಾವಿಯ ಕೆಲವು ಭಾಗಗಳು ಸೇರಿದಂತೆ ಹಲವು ಪ್ರದೇಶಗಳನ್ನು ಆದಷ್ಟು ಬೇಗ ಮಹಾರಾಷ್ಟ್ರದೊಳಗೆ ಸೇರಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ ಎಂದು ಏಕನಾಥ್ ಶಿಂಧೆ ಹಾಗೂ ಚಗನ್ ಭುಜ್ಪಾಲ್ ಗಡಿ...

ಚೀನಾದ ಆಗಸದಲ್ಲಿ ಒಂದೇ ಸಮಯಕ್ಕೆ 3 ಸೂರ್ಯ ದರ್ಶನ !

ಬೀಜಿಂಗ್‌: ಭೂಮಿಯ ಎಲ್ಲೆಡೆ ಹುಟ್ಟುವುದು ಒಬ್ಬನೇ ಸೂರ್ಯ. ಆದರೆ, ಅಪರೂಪದ ವಿಸ್ಮಯವೆಂಬಂತೆ ಚೀನಾದ ಆಕಾಶದಲ್ಲಿ ಶನಿವಾರ 3 ಸೂರ್ಯ ಉದಯಿಸಿದ್ದವು!

“ಮಿಥ್ಯ ಸೂರ್ಯ’, “ಸನ್‌ ಡಾಗ್ಸ್‌’ ಅಂತೆಲ್ಲ ಕರೆಯಲ್ಪಡುವ ಈ ವಿಚಿತ್ರ ವಿದ್ಯಮಾನಕ್ಕೆ ರಷ್ಯಾ ಗಡಿಗೆ ಹೊಂದಿಕೊಂಡ ಚೀನದ “ಮೊಹೆ’ ನಗರ ಸಾಕ್ಷಿಯಾಗಿತ್ತು. ಮೊಹೆಯ ಜನ ಬೆಳಗ್ಗೆದ್ದು ನಾಲ್ಕಾರು ಬಾರಿ ಕಣ್ಣುಜ್ಜಿಕೊಂಡು ನೋಡಿದಾಗ ಏಕಕಾಲದಲ್ಲಿ 3 ಸೂರ್ಯ ಕಾಣಿಸಿಕೊಂಡಿದ್ದಾನೆ. ಬೆಳಗ್ಗೆ 6.30ರಿಂದ 9.30ರವರೆಗೆ ಈ ವಿದ್ಯಮಾನ ಜರುಗಿದೆ.

ಏನಿದು ಮಿಥ್ಯ ಸೂರ್ಯ?: ಇದೊಂದು ಬೆಳಕಿನ ಮಾಯೆ. ಸೂರ್ಯನ ಬೆಳಕು ಅತ್ಯುನ್ನತ ಮಂಜಿನ ಗಡ್ಡೆಗಳ ಮೇಲೆ ಬಿದ್ದು ಪ್ರತಿಫ‌ಲನ ಹೊಂದುತ್ತವೆ. ಈ ಪ್ರತಿಫ‌ಲಿತ ಬೆಳಕು ಆಕಾಶದ ಶುಭ್ರ ಮೋಡದ ನಡುವೆ ಪ್ರಜ್ವಲಿಸುತ್ತದೆ. ಡಾಕ್ಸಿ ಯಾಂಗ್ಲಿಂಗ್‌ ಪ್ರಾಂತ್ಯದ ಮೊಹೆ, ಮಂಜಿನ ಬೆಟ್ಟಗಳಿಂದ ಕೂಡಿದೆ.

ದೃಶ್ಯ ಹೇಗಿತ್ತು?: ಮೊಹೆ ಆಗಸದಲ್ಲಿ ಮೂಡಿದ್ದ ನೈಜ ಸೂರ್ಯನ ಎಡ, ಬಲಗಳಲ್ಲಿ 2 ಪ್ರಕಾಶಮಾನ ಮಿಥ್ಯ ಸೂರ್ಯಗಳು ಮೂಡಿದ್ದವು. “ಇಂಥ ವಿದ್ಯಮಾನದಲ್ಲಿ ಮಿಥ್ಯ ಸೂರ್ಯ ಪ್ರಕಾಶಮಾನವಾಗಿಯೂ ಹೊಳೆಯ ಬಹುದು. ಕೆಲವು ಬಾರಿ ಕಾಮನಬಿಲ್ಲಿನ ಬಣ್ಣಗಳನ್ನೂ ಹೊಮ್ಮಿಸಬಹುದು. ವಿರಳಾತೀವಿರಳವೆಂಬಂತೆ ಹಿಮಬೆಟ್ಟಗಳ ಪ್ರದೇಶಗಳಲ್ಲಿ ಹುಣ್ಣಿಮೆ ದಿನಗಳಲ್ಲೂ ರಾತ್ರಿ ವೇಳೆ ಮಿಥ್ಯ ಚಂದ್ರನ ದರ್ಶನವಾಗುತ್ತದೆ’ ಎಂದು ಹವಾಮಾನ ತಜ್ಞ ಗ್ರಹಾಂ ಮಾಗ್ಡೆ ತಿಳಿಸಿದ್ದಾರೆ. ಚೀನಾ ಹವಾಮಾನ ಇಲಾಖೆ ಮಿಥ್ಯ ಸೂರ್ಯನ ಚಿತ್ರಗಳನ್ನು, ವಿಡಿಯೊ ರೂಪದಲ್ಲಿ ಬಿಡುಗಡೆ ಮಾಡಿದೆ.

TRENDING